ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಲಾಡ್‌ರಿಂದ ಕಾರ್ಮಿಕರ ಬದುಕು ನಾಶ: ಪ್ರಭುದೇವ ವೇಳಸಿಂಗಿ

Published 19 ಮಾರ್ಚ್ 2024, 15:54 IST
Last Updated 19 ಮಾರ್ಚ್ 2024, 15:54 IST
ಅಕ್ಷರ ಗಾತ್ರ

ಸುರಪುರ: ‘ಕಾರ್ಮಿಕ ಸಚಿವ ಸಂತೋಷ ಲಾಡ್ ಅವರು ಕಾರ್ಮಿಕರಿಗೆ ಮೀಸಲಾದ ನಿಧಿಯನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡು ಕಾರ್ಮಿಕರ ಬದುಕು ನಾಶ ಮಾಡುತ್ತಿದ್ದಾರೆ’ ಎಂದು ಎಐಟಿಯುಸಿ ರಾಜ್ಯ ಸಮಿತಿ ಉಪಾಧ್ಯಕ್ಷ ಪ್ರಭುದೇವ ವೇಳಸಿಂಗಿ ಅರೋಪ ಮಾಡಿದರು.

ರಂಗಂಪೇಟೆಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಅವೈಜ್ಞಾನಿಕ ನಿಯಮಗಳನ್ನು ಜಾರಿಗೆ ತಂದು ಕಾರ್ಮಿಕರಿಗೆ ತೊಂದರೆ ಮಾಡುತ್ತಿದ್ದಾರೆ. ಬಹುತೇಕ ಮಾಲೀಕರು ಕಟ್ಟಡ ಕಟ್ಟಲು ಪರವಾನಗಿ ತೆಗೆದುಕೊಳ್ಳುವುದಿಲ್ಲ. ಕಾರ್ಮಿಕರ ನೋಂದಣಿಗೆ ಹಾಗೂ ಕಾರ್ಡ್‍ಗಳ ನವೀಕರಣಕ್ಕೆ ಕಟ್ಟಡ ಪರವಾನಗಿ ಪ್ರತಿ ಬೇಕು ಎಂದು ಸತಾಯಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕಾರ್ಮಿಕರ ಮಕ್ಕಳ ಲ್ಯಾಪ್‍ಟಾಪ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಹಣವನ್ನು ಕಡಿತಗೊಳಿಸಲಾಗಿದೆ. ಇಂತಹ ಕಾರ್ಮಿಕರ ದಮನಕಾರಿ ನೀತಿಯನ್ನು ವಿರೋಧಿಸಿ ಎಐಟಿಯುಸಿ ವತಿಯಿಂದ ಮುಂದಿನ ತಿಂಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು’ ಎಂದು ತಿಳಿಸಿದರು.

ಎಐಟಿಯುಸಿ ಜಿಲ್ಲಾ ಸಮಿತಿ ಅಧ್ಯಕ್ಷ ದೇವಿಂದ್ರಪ್ಪ ಪತ್ತಾರ, ಅಕ್ಷರ ದಾಸೋಹ ಜಿಲ್ಲಾ ಸಮಿತಿ ಅಧ್ಯಕ್ಷೆ ಕಲ್ಪನಾ ಗುರಸುಣಗಿ, ಎಐಟಿಯುಸಿ ಜಿಲ್ಲಾ ಸಮಿತಿ ಕಾರ್ಯದರ್ಶಿ ತಿಮ್ಮಯ್ಯ ತಳವಾರ, ಮುಖಂಡರಾದ ಅಬ್ದುಲ್ ಗಫಾರ್ ನಗನೂರಿ, ಅಬ್ದುಲ್ ಅಲೀಂ ಗೋಗಿ, ಪದ್ಮಾ ಪಾಟೀಲ ಕಲಬುರ್ಗಿ, ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಸಮಿತಿ ಕಾರ್ಯದರ್ಶಿ ಶಿವಲಿಂಗಮ್ಮ ಮಾತನಾಡಿದರು.

ರಮೇಶ ಡೊಳ್ಳೆ, ನಾಗಪ್ಪ ಕಟ್ಟಿಮನಿ, ವಾಸುದೇವ ಮಂಗಳೂರ, ನಾಸಿರ್ ಕುಂಡಾಲೆ, ಅಕ್ಷರ ದಾಸೋಹ ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀದೇವಿ ಹುಣಸಗಿ, ಎಐಟಿಯುಸಿ ತಾಲ್ಲೂಕು ಸಮಿತಿ ಅಧ್ಯಕ್ಷ ದೇವಿಂದ್ರಪ್ಪ ನಗರಗುಂಡ, ಗೌರವಾಧ್ಯಕ್ಷ ತಿಮ್ಮಯ್ಯ ದೊರೆ, ಮರೆಪ್ಪ ದೇಸಾಯಿ, ಮಹಿಬೂಬ್ ರುಕ್ಮಾಪುರ ಭಾಗವಹಿಸಿದ್ದರು.

ನಗರ ಘಟಕದ ಪದಾಧಿಕಾರಿಗಳು: ಬಾಲಪ್ಪ (ಗೌರವಾಧ್ಯಕ್ಷ), ಅಯ್ಯಪ್ಪ ವಗ್ಗಾಲಿ (ಅಧ್ಯಕ್ಷ), ಮಲ್ಲಪ್ಪ, ಹಣಮಂತ (ಉಪಾಧ್ಯಕ್ಷರು), ಶರಣಬಸಪ್ಪ ಪೂಜಾರಿ (ಪ್ರಧಾನ ಕಾರ್ಯದರ್ಶಿ), ದ್ಯಾಮಗೌಡ (ಖಜಾಂಚಿ), ಮಲ್ಲಪ್ಪ (ಉಪ ಖಜಾಂಚಿ), ಅಮೀತ್, ವಿಶ್ವನಾಥ, ಜಿಲಾನಿ, ಮಹ್ಮದ್ ಖಾಸಿಂ, ಚಂದಪ್ಪ, ನಾಗರಾಜ, ಅಲೀಮ್, ಮರೆಪ್ಪ (ಸಂಘಟನಾ ಕಾರ್ಯದರ್ಶಿಗಳು), ಮೊಹ್ಮದ್ ಯೂಸುಫ್, ಸಿದ್ದರಾಜ, ರಫೀಕ್, ಮಹೇಬೂಬ್, ತಿಮ್ಮಣ್ಣ (ಸಹ ಕಾರ್ಯದರ್ಶಿಗಳು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT