ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧ್ಯಾತ್ಮಿಕ ಜ್ಞಾನ ಪಸರಿಸುತ್ತಿರುವ ಮಠ: ಸಚಿವ ಶರಣಬಸಪ್ಪ ದರ್ಶನಾಪುರ

ಯಾತ್ರಿ ನಿವಾಸ ಉದ್ಘಾಟಿಸಿದ ಸಚಿವ ದರ್ನಾಪುರ
Published 18 ಮಾರ್ಚ್ 2024, 7:50 IST
Last Updated 18 ಮಾರ್ಚ್ 2024, 7:50 IST
ಅಕ್ಷರ ಗಾತ್ರ

ಕೆಂಭಾವಿ: ಈ ಭಾಗದಲ್ಲಿ ಮುದನೂರ ಗ್ರಾಮದ ಕಂಠಿ ಕೋರಿಸಿದ್ದೇಶ್ವರ ಶಾಖಾ ಮಠ ಭಕ್ತರಿಗೆ ಬೇಕಾದ ಆಧ್ಯಾತ್ಮಿಕ ಜ್ಞಾನ ಪಸರಿಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.

ಪಟ್ಟಣದ ಸಮೀಪ ಮುದನೂರ ಗ್ರಾಮದ ಕಂಠಿ ಕೋರಿಸಿದ್ದೇಶ್ವರ ಮಠದ ಬಳಿ ಪ್ರವಾಸೋದ್ಯಮ ಇಲಾಖೆಯಿಂದ 2019-20ನೇ ಸಾಲಿನ ಬಂಡವಾಳ ವೆಚ್ಚ ಯೋಜನೆಯಡಿಯಲ್ಲಿ ನಿರ್ಮಿಸಲಾದ ಯಾತ್ರಿನಿವಾಸ ಕಟ್ಟಡವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬಾಲ ತಪಸ್ವಿಯಾಗಿರುವ ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಆಧ್ಯಾತ್ಮದ ಶಕ್ತಿಯನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ. ಈ ಮಠಕ್ಕೆ ಭಕ್ತರು ಕರ್ನಾಟಕವಲ್ಲದೆ ಬೇರೆ ಬೇರೆ ರಾಜ್ಯಗಳ ಭಕ್ತರೂ ಬರುತ್ತಾರೆ. ಮಠಕ್ಕೆ ಬೇಕಾಗುವ ಸೌಲಭ್ಯಗಳನ್ನು ನನ್ನ ಇತಿಮಿತಿಯಲ್ಲಿ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವೆ’ ಎಂದರು.

ಸಿದ್ಧ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ, ಮುಖಂಡರಾದ ಶಂಕ್ರೆಣ್ಣ ವಣಿಕ್ಯಾಳ, ಸಿದ್ದನಗೌಡ ಪೊಲೀಸಪಾಟೀಲ, ಚೆನ್ನಯ್ಯಸ್ವಾಮಿ ಹಿರೇಮಠ, ಮಹಾಂತಯ್ಯಸ್ವಾಮಿ ಸುರಗಿಮಠ, ಹರೀಶ ಕಳಾಂಕರ, ರವಿಚಂದ್ರ ಸಾಹುಕಾರ, ಬಸನಗೌಡ ಚಿಂಚೋಳಿ, ಮಲ್ಲು ಚಾನಕೋಟಿ, ಪ್ರಭು, ಲಕ್ಷ್ಮಣ ಬಸರಿಗಿಡ ಇದ್ದರು.

25 ವರ್ಷದಿಂದ ಶಿವರಾತ್ರಿ ನಿಮಿತ್ತ ಶ್ರೀಮಠದಿಂದ ದಾಸೋಹವನ್ನು ನಡೆಸಿಕೊಂಡು ಬರುತ್ತಿರುವ ಕಾರಣ, ಭಕ್ತರೊಬ್ಬರು ಪೂಜ್ಯರಿಗೆ ಬೆಳ್ಳಿ ಕಿರೀಟ ತೊಡಿಸಿ ಗೌರವಿಸಿದರು.

ಭೀಮರೆಡ್ಡಿ ಬೆಕಿನಾಳ ನಿರೂಪಿಸಿದರು. ಸಿದ್ದನಗೌಡ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT