ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಸೇತುವೆ ಮೇಲಿಂದ ಕಂದಕಕ್ಕೆ ಉರುಳಿದ ಬಸ್: ಒಬ್ಬ ಸಾವು

Published 3 ಜೂನ್ 2024, 5:51 IST
Last Updated 3 ಜೂನ್ 2024, 5:51 IST
ಅಕ್ಷರ ಗಾತ್ರ

ಶಹಾಪುರ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಹತ್ತಿಗೂಡುರು ಬಳಿ ಖಾಸಗಿ ಬಸ್ ಪಲ್ಟಿಯಾಗಿ ಒಬ್ಬ ಮೃತಪಟ್ಟಿದ್ದು, ಆರು ಜನರಿಗೆ ಗಾಯವಾಗಿದೆ.

ಭಾನುವಾರ ರಾತ್ರಿ 10.30 ಗಂಟೆ ಸುಮಾರಿಗೆ ಹತ್ತಿಗೂಡೂರು ಹತ್ತಿರ ವಿಆರ್ ಎಲ್ ಬಸ್ ಸೇತುವೆ ಮೇಲಿಂದ 10 ಅಡಿ ಕಂದಕಕ್ಕೆ ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರನ್ನು ಕಲಬುರಗಿಯ ತಾಜಾ ಸುಲ್ತಾನ್ ಪುರ ನಿವಾಸಿ ಎಂದು ಗುರುತಿಸಲಾಗಿದ್ದು, ಹೆಸರು ಪತ್ತೆಯಾಗಿಲ್ಲ.

ಬಸ್‌ನಲ್ಲಿದ್ದ ಪ್ರಯಾಣಿಕರನ್ನು ಗ್ಲಾಸ್ ಒಡೆದು ಹೊರಗಡೆ ಕರೆತಂದಿದ್ದಾರೆ.

ಹತ್ತಿಗುಡೂರಿಂದ ಕಲಬುರಗಿಗೆ ತೆರಳುವಾಗ ಹತ್ತಿಗುಡೂರು ಪೆಟ್ರೋಲ್ ಬಂಕ್ ಇರುವ ಕಿರಿದಾದ ಸೇತುವೆ ಬಳಿ ಎದುರಿಗೆ ಬರುತ್ತಿದ್ದ ವಾಹನ ವೇಗವಾಗಿ ಬಂದು ಡಿಪ್ಪರ್ ಹಾಕಿದ ಪರಿಣಾಮ ಕಿರಿದಾದ ಸೇತುವೆ ಕಾಣದೆ ಸೇತುವೆಯಿಂದ ಕೆಳಕ್ಕೆ ಉರುಳಿದೆ. ಬಾಗಲಕೋಟೆ ರೂಟ್‌ನಲ್ಲಿ ಚಾಲನೆ ಮಾಡುತ್ತಿದ್ದ ಚಾಲಕ, ಇದೇ ಮೊದಲ ಬಾರಿ‌ ಕಲಬುರಗಿ – ಬೆಂಗಳೂರು ರೂಟ್ ಬಸ್‌ಗೆ ಚಾಲನೆಗೆ ಬಂದಿದ್ದರು ಎನ್ನಲಾಗುತ್ತಿದೆ.

ಗಾಯಾಳುಗಳಿಗೆ ಶಹಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT