ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸುರಪುರ: ಮತಗಟ್ಟೆ ಅಧಿಕಾರಿಗಳ ಸಭೆ

Published 6 ಡಿಸೆಂಬರ್ 2023, 6:13 IST
Last Updated 6 ಡಿಸೆಂಬರ್ 2023, 6:13 IST
ಅಕ್ಷರ ಗಾತ್ರ

ಸುರಪುರ: ‘ಮತದಾರರ ಪಟ್ಟಿಗೆ ಹೆಸರು ಸೇರಿಸಿಕೊಳ್ಳಲು ಡಿ. 9 ಕೊನೆಯ ದಿನವಾಗಿದೆ. ಪಟ್ಟಿಯಿಂದ ಯಾರೊಬ್ಬರು ವಂಚಿತರಾಗದಂತೆ ಮತಗಟ್ಟೆ ಅಧಿಕಾರಿಗಳು ಜಾಗೃತೆ ವಹಿಸಿ ಕೆಲಸ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ. ಸುಶಿಲಾ ಬಿ. ಸೂಚಿಸಿದರು.

ನಗರದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು. ‌

‘ಹೆಸರು ಸೇರ್ಪಡೆಗೆ ಅಂತಿಮ ದಿನ ಸಮೀಪಿಸುತ್ತಿದ್ದು ಮತಗಟ್ಟೆ ಅಧಿಕಾರಿಗಳು ಚುರುಕಾಗಿ ಕೆಲಸ ಮಾಡಬೇಕು. ಮನೆ ಮನೆಗೆ ಭೇಟಿ ನೀಡಿ ಯುವ ಮತದಾರರನ್ನು ಗುರುತಿಸಿ ಮತಪಟ್ಟಿಯಲ್ಲಿ ಸೇರಿಸುವ ಕೆಲಸ ಪ್ರಾಮಾಣಿಕತೆಯಿಂದ ಮಾಡಬೇಕು’ ಎಂದು ತಿಳಿಸಿದರು.

‘ಲೋಕಸಭಾ ಚುನಾವಣೆ ಅಂಗವಾಗಿ ರಾಜ್ಯ ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಿದೆ. 2024 ಜನವರಿ ಮೊದಲ ವಾರದಲ್ಲಿ ಅಂತಿಮ ಕರಡು ಪಟ್ಟಿ ಪ್ರಕಟವಾಗಲಿದೆ. ಹೆಚ್ಚ ಹೆಚ್ಚು ಹೊಸ ಮತದಾರರನ್ನು ಸೇರಿಸಿ. ನಿರ್ಲಕ್ಷ್ಯ ವಹಿಸುವಂತಿಲ್ಲ. ಆರೋಪಗಳು ಬಂದಲ್ಲಿ ಆಯಾ ಮತಗಟ್ಟೆ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು’ ಎಂದರು.

‘ಸ್ಥಳಾಂತರಗೊಂಡಿದ್ದರೆ, ಮದುವೆಯಾಗಿ ಹೋಗಿದ್ದರೆ ಅಥವಾ ಮೃತಪಟ್ಟದ್ದರೆ ಕುಟುಂಬದವರಿಂದ ಮಾಹಿತಿ ಪಡೆದು ಅರ್ಜಿಗಳ ಮೇಲೆ ಮಾಹಿತಿದಾರ ರುಜು ಪಡೆದು ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಬೇಕು. ಎಲ್ಲಿಯೋ ಕುಳಿತು ಯಾರಿಂದಲೋ ಕೇಳಿ ಕೆಲಸ ಮಾಡಬೇಡಿ. ಇದು ನಾಗರಿಕತ್ವದ ಪ್ರಶ್ನೆ ಆಗಿರುವುದರಿಂದ ಎಚ್ಚರಿಕೆಯಿಂದ ಕೆಲಸ ಮಾಡಿ. ನಿರ್ಲಕ್ಷ್ಯ ವಹಿಸಿದಲ್ಲಿ ಅವರ ಹಕ್ಕು ಮೊಟಕುಗೊಳಿಸಿದಂತಾಗಲಿದೆ’ ಎಂದರು.

‘ಸುರಪುರ ಕಂದಾಯ ಇಲಾಖೆ ಶೇ. 82 ರಷ್ಟು ಸಾಧನೆ ಮಾಡಿ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ. ತಹಶೀಲ್ದಾರರು ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕೆಲಸ ಮಾಡುತ್ತಿರುವುದು ತೃಪ್ತಿ ತಂದಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕಿನ ಕಂದಾಯ ಇಲಾಖೆಗಳು ಪ್ರಾಮಾಣಿಕವಾಗಿ ಕೆಲಸ ಮಾಡಿದಲ್ಲಿ ಜಿಲ್ಲೆಗೆ ಒಳ್ಳೆಯ ಹೆಸರು ಬರುತ್ತದೆ. ಮತ್ತು ಸಾರ್ವಜನಿಕರಿಗೆ ತ್ವರಿತವಾಗಿ ಸೇವೆ ಸಿಗುತ್ತದೆ’ ಎಂದರು.

ತಹಶೀಲ್ದಾರ್ ಕೆ. ವಿಜಯಕುಮಾರ, ತಾಲ್ಲೂಕು ಪಂಚಾಯಿತಿ ಇ.ಒ. ಬಸವರಾಜ ಸಜ್ಜನ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ತಾಲೂಕಿನ ಎಲ್ಲಾ ಮತಗಟ್ಟೆ ಅಧಿಕಾರಿಗಳು, ಮೇಲ್ವಿಚಾರಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT