ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಣಸಗಿ: ಮಳೆಗೆ ತುಂಬಿ ಹರಿದ ಹಳ್ಳಕೊಳ್ಳ

Published 7 ಜೂನ್ 2024, 16:21 IST
Last Updated 7 ಜೂನ್ 2024, 16:21 IST
ಅಕ್ಷರ ಗಾತ್ರ

ಹುಣಸಗಿ: ‘ಕಳೆದ ಎರಡು ದಿನಗಳಿಂದ ತಾಲ್ಲೂಕಿನ ಹಳ್ಳಿಗಳ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜಲ ಮೂಲಗಳಿಗೆ ಜೀವಕಳೆ ಬಂದಂತಾಗಿದೆ.

ಕಳೆದ ಮೂರು ತಿಂಗಳಿನಿಂದಲೂ ಬಿಸಿಲಿನ ಪ್ರಖರತೆಯಿಂದಾಗಿ ಬತ್ತಿ ಹೋಗಿದ್ದ ಹಳ್ಳಗಳಿಗೆ ಈ ಮಳೆ ಕಳೆ ತಂದಿದ್ದು, ಗ್ರಾಮೀಣ ಭಾಗದ ದನಕರುಗಳಿಗೆ ಆಸರೆಯಾಗಿದೆ.

ತಾಲ್ಲೂಕಿನ ವಜ್ಜಲ ಕಲ್ಲದೇವನಹಳ್ಳಿ, ಹೆಬ್ಬಾಳ ಭಾಗದಲ್ಲಿ ಮಳೆಯಾಗಿದ್ದರಿಂದಾಗಿ ಹುಣಸಗಿ ದೇವಪುರ ಹಿರೇಹಳ್ಳ ತುಂಬಿ ಹರಿಯುತ್ತಿದೆ. ಇದರಿಂದಾಗಿ ಹೆಬ್ಬಾಳ.ಕೆ ಗ್ರಾಮದ ಬಳಿ ರಸ್ತೆ ಮಾರ್ಗದ ಸೇತುವೆ ಮೇಲೆ ನೀರು ನುಗ್ದಿದ್ದು, ಕೆಲ ಕಾಲ ಸಂಚಾರ ಸ್ಥಗಿತವಾಗಿತ್ತು.

‘ಹಳ್ಳದ ಬದಿಯಲ್ಲಿ ಅಳವಡಿಸಲಾಗಿದ್ದ, ಕೃಷಿ ಪಂಪ್‌ಸೆಟ್ ಮೊಟಾರುಗಳು ನೀರಿನಲ್ಲಿ ಮುಳುಗಿದ್ದು, ಹಳ್ಳದ ಪಕ್ಕದಲ್ಲಿರುವ ಭತ್ತದ ಗದ್ದೆಗಳಿಗೆ ನೀರು ನುಗ್ಗಿವೆ’ ಎಂದು ಗ್ರಾಮದ ನಿಂಗು ಪಾಟೀಲ ತಿಳಿಸಿದರು.

ಮಳೆಯಾಶ್ರಿತ ಪ್ರದೇಶದ ಗ್ರಾಮಗಳಾದ ಬರದೇವನಾಳ, ಬಪ್ಪರಗಿ, ಹೊರಟ್ಟಿ, ಮದಲಿಂಗನಾಳ, ಶ್ರೀನಿವಾಸಪುರ, ಗುಂಡಲಗೇರಾ, ಅಮಲಿಹಾಳ, ಕರಿಬಾವಿ, ಮತ್ತಿತರ ಗ್ರಾಮಗಲ್ಲಿರುವ ರೈತರು ತಮ್ಮ ಕೃಷಿ ಚಟುವಟಿಗಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಈಗಾಗಲೇ ಬಹುತೇಕ ರೈತರು ಮುಂಗಾರು ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದರು. ಸಕಾಲಕ್ಕೆ ಮಳೆಯಾಗಿದ್ದರಿಂದಾಗಿ ತೊಗರಿ ಹಾಗೂ ಹತ್ತಿ ಬಿತ್ತನೆಯಲ್ಲಿ ಮುಂದಾಗಿರುವುದಾಗಿ ಗುಂಡಲಗೇರಾ ಗ್ರಾಮದ ರೈತ ಶಾಂತಗೌಡ ಕವಿತಾಳ ಹಾಗೂ ಮಂಜಲಾಪುರ ಹಳ್ಳಿ ಗ್ರಾಮದ ರೈತ ಪರಮಣ್ಣ ನೀಲಗಲ್ಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT