ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿಶುಂಠಿ ಇಳಿಕೆ, ಬೆಳ್ಳುಳ್ಳಿ ದರ ಹೆಚ್ಚಳ

ಮದುವೆ ಸಿಸನ್ ಆರಂಭ, ಕೆಲ ತರಕಾರಿಗಳ ಬೆಲೆ ಏರಿಕೆ
ಬಿ.ಜಿ.ಪ್ರವೀಣಕುಮಾರ
Published 24 ಡಿಸೆಂಬರ್ 2023, 6:08 IST
Last Updated 24 ಡಿಸೆಂಬರ್ 2023, 6:08 IST
ಅಕ್ಷರ ಗಾತ್ರ

ಯಾದಗಿರಿ: ಕೆಲ ತಿಂಗಳಿಂದ ಏರಿಕೆಯಾಗಿದ್ದ ಹಸಿ ಶುಂಠಿ ಬೆಲೆ ₹40 ಇಳಿಕೆಯಾಗಿದ್ದು, ಆದರೆ, ಬೆಳ್ಳುಳ್ಳಿ ದರ ಮತ್ತಷ್ಟು ಏರಿಕೆಯಾಗಿದೆ.

ಕಳೆದ ತಿಂಗಳಲ್ಲಿ ಹಸಿ ಶುಂಠಿ, ಬೆಳ್ಳುಳ್ಳಿ ದರ ದ್ವಿಶತಕ ದಾಟಿತ್ತು. ಈ ಬಾರಿ ಬೆಳ್ಳುಳ್ಳಿ ₹300ಗೆ ಒಂದು ಕೆ.ಜಿ ಮಾರಾಟವಾಗುತ್ತಿದ್ದು, ಮಾರುಕಟ್ಟೆಯಲ್ಲಿ ಅತಿ ಹೆಚ್ಚು ದರವಿದೆ.

ಕಳೆದ 6 –7 ತಿಂಗಳಿಂದಲೂ ಹಸಿ ಶುಂಠಿ ಕೆ.ಜಿಗೆ ₹220 ರಿಂದ 240 ತನಕ ಬೆಲೆ ಇತ್ತು. ಇದರ ಜತೆಗೆ ಬೆಳ್ಳುಳ್ಳಿ ದರವೂ ₹180 ರಿಂದ 200 ಇತ್ತು. ಕಳೆದ ಮೂರ್ನಾಲ್ಕು ದಿನಗಳಲ್ಲಿ ಬೆಳ್ಳಳ್ಳಿ ದರ ಏರಿಕೆಯಾಗುತ್ತಿದೆ.

ಈಗ ಮದುವೆ ಸಿಸನ್ ಆರಂಭವಾಗಿದ್ದು, ಕೆಲ ತರಕಾರಿಗಳ ಬೆಲೆಯೂ ಹೆಚ್ಚಾಗಿದೆ.

ನುಗ್ಗೆಕಾಯಿ ದರವೂ ಏರಿಕೆಯಾಗಿ ಕೆ.ಜಿಗೆ ₹140–150 ಮಾರಾಟವಾಗುತ್ತಿದೆ. ಇದರ ಜತೆಗೆ ಬದನೆಕಾಯಿ, ಹೀರೆಕಾಯಿ ದರವೂ ಹೆಚ್ಚಳವಾಗಿ ಕಳೆದ ತಿಂಗಳಿಗಿಂತ ಡಬಲ್‌ ಆಗಿದೆ. ಬೆಂಡೆಕಾಯಿ, ಸೋರೆಕಾಯಿ ದರ ಕೆ.ಜಿಗೆ ₹10 ರಿಂದ 20 ಹೆಚ್ಚಳವಾಗಿದೆ. ಆದರೆ, ಹೂಕೋಸು, ಗಜ್ಜರಿ, ಈರುಳ್ಳಿ ದರ ಕೆಜಿಗೆ ₹10 ರಿಂದ 20 ಇಳಿಕೆಯಾಗಿದ್ದು, ಗ್ರಾಹಕರಿಗೆ ಹೊರೆ ಕಡಿಮೆಯಾಗಿದೆ.

ಬೀನ್ಸ್, ಮೆಣಸಿನಕಾಯಿ, ಆಲೂಗಡ್ಡೆ, ಎಲೆಕೋಸು, ಚವಳೆಕಾಯಿ, ಸೌತೆಕಾಯಿ, ಮೂಲಂಗಿ, ಬಿಟ್‌ರೂಟ್, ಹೀರೆಕಾಯಿ, ಹಾಗಲಕಾಯಿ, ಅವರೆಕಾಯಿ, ತೊಂಡೆಕಾಯಿ ಕಳೆದ ತಿಂಗಳಿಂದ ಒಂದೇ ದರವನ್ನು ಕಾಪಾಡಿಕೊಂಡಿವೆ.

ಕಳೆದ ಒಂದು ವಾರದಿಂದ ತೊಂಡೆಕಾಯಿ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಕಲಬುರಗಿಯಲ್ಲಿ ₹70–80 ಒಂದು ಕೆಜಿ ದರವಿದೆ. ಈರುಳ್ಳಿ ಸೊಪ್ಪು ₹50–60, ಹಸಿ ಬಟಾಣಿ ₹60–70 ಒಂದು ಕೆಜಿ, 10ಗೆ 4 ನಿಂಬೆಹಣ್ಣು ಮಾರಾಟ ಮಾಡಲಾಗುತ್ತಿದೆ. ₹50–60 ಕರಿಬೇವು ಕೆಜಿ ಇದೆ.

ಸೊಪ್ಪುಗಳ ದರ:

ಸೊಪ್ಪುಗಳ ದರ ಈ ಬಾರಿ ತುಸು ಇಳಿಕೆಯಾಗಿದೆ. ಪಾಲಕ್‌, ಪುಂಡಿ ಪಲ್ಯೆ, ರಾಜಗಿರಿ ಸೊಪ್ಪು ₹10ಗೆ 1 ಕಟ್ಟು, ₹20ಗೆ ಮೂರು ಕಟ್ಟು ಮಾರಾಟ ಮಾಡಲಾಗುತ್ತಿದೆ.

ಕೊತಂಬರಿ, ಪುದೀನಾ ಸೊಪ್ಪು ₹15–20 ಒಂದು ದೊಡ್ಡ ಕಟ್ಟು ಮಾರಾಟ ಮಾಡಲಾಗಿದೆ. ಸಬ್ಬಸಗಿ ದೊಡ್ಡ ಕಟ್ಟು ₹15 ರಿಂದ 20ಗೆ ಮಾರಾಟ ಮಾಡಲಾಗುತ್ತಿದೆ. 

ಕೆಲ ತರಕಾರಿ ಸೊಪ್ಪುಗಳ ದರ ಏರಿಕೆಯಾಗಿದ್ದು ಕೆಲವು ಏರಿಕೆಯಾಗಿವೆ. ಇದರಿಂದ ಗ್ರಾಹಕರಿಗೆ ಅಷ್ಟೇನೂ ಹೊರೆ ಬೀಳುವುದಿಲ್ಲ
ಸುಧಾಕರ್‌ ಗ್ರಾಹಕ
ತರಕಾರಿ ಬೆಲೆಯಲ್ಲಿ ಏರಿಳಿಕೆಯಾಗಿದ್ದು ಬೆಳ್ಳುಳ್ಳಿಗೆ ಮಾತ್ರ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ದರವಿದೆ. ಗುಣಮಟ್ಟದ ಬೆಳ್ಳುಳ್ಳಿಗೆ ಬೇಡಿಕೆ ಹೆಚ್ಚಿದೆ
ಬಸವರಾಜ ಚಿಂತನಹಳ್ಳಿ ತರಕಾರಿ ವ್ಯಾಪಾರಿ

ತರಕಾರಿ; ದರ (ಪ್ರತಿ ಕೆ.ಜಿಗೆ ₹ಗಳಲ್ಲಿ) ಟೊಮೆಟೊ;20–25 ಬೀನ್ಸ್;70–80 ಮೆಣಸಿನಕಾಯಿ;50-60 ಹಸಿ ಶುಂಠಿ;180;200 ಬೆಳ್ಳುಳ್ಳಿ;300;320 ನುಗ್ಗೆಕಾಯಿ;140–150 ಆಲೂಗಡ್ಡೆ;25–30 ಈರುಳ್ಳಿ;40–50 ಬದನೆಕಾಯಿ;100–120 ಬೆಂಡೆಕಾಯಿ;70–80 ದೊಣ್ಣೆಮೆಣಸಿನಕಾಯಿ;70–80 ಎಲೆಕೋಸು;40–50 ಹೂಕೋಸು;60–70 ಚವಳೆಕಾಯಿ;70–80 ಗಜ್ಜರಿ;50-60 ಸೌತೆಕಾಯಿ;60–70 ಮೂಲಂಗಿ;50-60 ಸೋರೆಕಾಯಿ;60–70 ಬಿಟ್‌ರೂಟ್;50-60 ಹೀರೆಕಾಯಿ;100-120 ಹಾಗಲಕಾಯಿ;60-70 ಅವರೆಕಾಯಿ;70–80 ತೊಂಡೆಕಾಯಿ;70;80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT