ಮಂಗಳವಾರ, ಡಿಸೆಂಬರ್ 10, 2019
26 °C
Hu anda... drama

ಹೂಂ ಅಂದ... ಉಹೂಂ ಅಂದ... ನಾಟಕ ಪ್ರದರ್ಶನ

Published:
Updated:
Deccan Herald

ಬ್ರೆಕ್ಟ್‌ನ ಪಾಠ ನಾಟಕಗಳಲ್ಲಿ  ಒಂದಾದ ‘He who said yes, he who said no' ರೂಪಾಂತರವೇ ‘ಹೂಂ ಅಂದ, ಉಹೂಂ ಅಂದ’ ನಾಟಕ. ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವನ್ನು ಹಾಗೆಯೇ ಮುಂದುವರಿಸಬೇಕೇ ಅಥವಾ ಅದನ್ನು ಮುರಿದು ಕಟ್ಟಬೇಕೇ ಎಂಬ ಪ್ರಶ್ನೆಯನ್ನು ಈ ನಾಟಕ ನಮ್ಮ ಮುಂದಿಡುತ್ತದೆ. ‌

ಮೇಷ್ಟ್ರೊಂದಿಗೆ ಮಕ್ಕಳು ಚಾರಣಕ್ಕೆ ಹೊರಟಿದ್ದಾರೆ. ಅವರೊಟ್ಟಿಗೆ ಒಬ್ಬ ಸಣ್ಣ ಹುಡುಗನೂ ಬಂದಿದ್ದಾನೆ. ಕಾಯಿಲೆಯಿಂದ ಬಳಲುತ್ತಿರುವ ತಾಯಿಗಾಗಿ ಆತ ಮದ್ದು ತರಬೇಕಾಗಿದೆ. ಗುಡ್ಡ  ಹತ್ತುವಾಗ ಅವನಿಗೆ ಹುಷಾರು ತಪ್ಪುತ್ತದೆ. ಸಂಪ್ರದಾಯದ ಪ್ರಕಾರ ಅಂಥ ಸಂದರ್ಭದಲ್ಲಿ ಹುಷಾರು ತಪ್ಪಿದವರನ್ನು ಕಣಿವೆಗೆ ದೂಡಿ ಮುಂದಕ್ಕೆ ಹೋಗಬೇಕು. ಈ ನಿಯಮವನ್ನು ಪಾಲಿಸಬೇಕೇ ಅಥವಾ ಹೊಸ ನಿಯಮವನ್ನು ಪಾಲಿಸಬೇಕೇ? ಇದು ನಾಟಕದ ತಿರುಳು.

ವೈದೇಹಿಯವರು ಈ ನಾಟಕವನ್ನು ನಮ್ಮ ನೆಲಕ್ಕೆ ಒಗ್ಗಿಸಿಕೊಂಡು ಬೇರೆ ಕಥೆಯನ್ನು ಸೇರಿಸುವುದರ ಮೂಲಕ ಹಿಂದೆ ಬಿದ್ದವರನ್ನು ಜೊತೆಯಾಗಿ ಕರೆದುಕೊಂಡು ಸಾಗಬೇಕು ಅನ್ನುವ ಸಂದೇಶವನ್ನು ತಿಳಿಸುತ್ತಾರೆ. ಮಕ್ಕಳಿಗೆ ಆಪ್ತವಾಗುವಂತೆ ಈ ಪ್ರಯೋಗವನ್ನು ಸಿದ್ಧಪಡಿಸಲಾಗಿದೆ.

ಪ್ರದರ್ಶನ: ಶನಿವಾರ ಸಂಜೆ 7

ಪ್ರಸ್ತುತಿ: ಕಿನ್ನರಿ ಮೇಳ, ತುಮರಿ.

ಮೂಲ: ಬರ್ಟೋಲ್ಟ್‌ ಬ್ರೆಕ್ಟ್‌. ಕನ್ನಡಕ್ಕೆ–ವೈದೇಹಿ. ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ.

ಸಂಗೀತ:ಜಿ.ಎಸ್. ಮಂಜುನಾಥ್, ಶ್ರೀಕಾಂತ ಕಾಳಮಂಜಿ. 

ಸ್ಥಳ: ಅನೇಕ ರಂಗಮಂದಿರ, 3ನೇ ಮುಖ್ಯರಸ್ತೆ, ಐ.ಬಿ.ಓ ಲೇಔಟ್‌, ದುಬಾಸಿ ಪಾಳ್ಯ, ಮೈಸೂರು ರಸ್ತೆ, ಬೆಂಗಳೂರು.

ಪ್ರತಿಕ್ರಿಯಿಸಿ (+)