ಬರಡು ಭೂಮಿಯಲ್ಲಿ ಹಸಿರೊತ್ತ ಮರಗಳು..!

ಸೋಮವಾರ, ಜೂನ್ 17, 2019
27 °C

ಬರಡು ಭೂಮಿಯಲ್ಲಿ ಹಸಿರೊತ್ತ ಮರಗಳು..!

Published:
Updated:
Prajavani

ಪಾಂಡವಪುರ: ಬರಡು ಭೂಮಿಯಲ್ಲಿ ರೈತರೊಬ್ಬರು ನೆಟ್ಟು ಬೆಳೆಸಿದ 30ಕ್ಕೂ ಹೆಚ್ಚು ಮರಗಳು ಇದೀಗ ಹಸಿರೊತ್ತಿದ್ದು, ಪಕ್ಷಿಗಳಿಗೆ ಆಶ್ರಯ ತಾಣವಾಗುವ ಜತೆ, ನೆರಳು ನೀಡುತ್ತಿವೆ.

ತಾಲ್ಲೂಕಿನ ಹಾರೋಹಳ್ಳಿ ಗ್ರಾಮದ ರೈತ ದಿ. ಕೆ.ಪಾಪಯ್ಯ ತಮ್ಮ ಮಳೆಯಾಶ್ರಿತ ಜಮೀನಿನಲ್ಲಿ ಆಲ, ಬಸರಿ, ಹುಣಸೆ ಸೇರಿದಂತೆ ಇನ್ನಿತರ ಮರಗಳನ್ನು ಬೆಳೆಸಿ, ಪರಿಸರ ಪ್ರೇಮ ಮೆರೆದಿದ್ದಾರೆ.

ತನ್ನ ಬರಡು ಭೂಮಿಯಲ್ಲಿ ನೆಟ್ಟ ಗಿಡಗಳನ್ನು ಉಳಿಸಿಕೊಳ್ಳಲಿಕ್ಕಾಗಿ 1 ಕಿ.ಮೀ. ದೂರದಿಂದ ಬಿಂದಿಗೆಯಲ್ಲಿ ನೀರನ್ನು ಹೊತ್ತು ತಂದಿದ್ದಾರೆ. ಇದೀಗ ಇವು ಮರಗಳಾಗಿದ್ದು, ಅಸಂಖ್ಯಾತ ಪಕ್ಷಿಗಳಿಗೆ ಆಸರೆಯ ತಾಣವಾಗಿವೆ. ಹಕ್ಕಿಗಳ ಹಸಿವನ್ನು ತಣಿಸುತ್ತಿವೆ. ಈ ಹಾದಿಯಲ್ಲಿ ಸಾಗುವ ಬಹುತೇಕರು ಈ ಆಲದ ಮರಗಳ ನೆರಳಿನಲ್ಲಿ ಸ್ವಲ್ಪ ಹೊತ್ತು ಕೂತು ವಿರಮಿಸುವ ಚಿತ್ರಣ ಗಮನ ಸೆಳೆಯಲಿದೆ.

ಮಳೆಯನ್ನೇ ನಂಬಿ ಬೇಸಾಯ ಮಾಡುತ್ತಿದ್ದ ರೈತ ಪಾಪಯ್ಯ ತನ್ನ ಜಮೀನಿನ ಬದುವಿನ ಸುತ್ತ ಗಿಡಗಳನ್ನು ನೆಟ್ಟು ಬೆಳೆಸಿದರು. ಕೆಲವು ವರ್ಷ ಮಳೆ ಬಿದ್ದರೆ, ಮತ್ತೆ ಕೆಲವು ವರ್ಷ ಮಳೆಯೇ ಆಗುತ್ತಿರಲಿಲ್ಲ. ಹೀಗಾಗಿ ಬೇಸಾಯ ಅಷ್ಟು ಸುಲಭವಾಗಿರಲಿಲ್ಲ. ಬೇಸಾಯಕ್ಕಿಂತ ಹೆಚ್ಚಾಗಿ ಗಿಡಗಳನ್ನು ನೆಟ್ಟು ಬೆಳೆಸುವಲ್ಲೇ ಆಸಕ್ತಿ ವಹಿಸಿದರು. ಮಕ್ಕಳಂತೆ ಸಾಕಿ, ಸಲುಹಿದರು.

ರೈತ ಪಾಪಯ್ಯ ನಿಧನರಾಗಿದ್ದಾರೆ. ಆದರೆ ಅವರು ಬೆಳೆಸಿದ ಮರಗಳು ಹಸಿರೊತ್ತು ನಳನಳಿಸುತ್ತಿವೆ. ‘ಮನೆಗೊಂದು ಮರ, ಊರಿಗೊಂದು ವನ’ ಎಂಬಂತೆ ಪಾಪಯ್ಯನಂಥವರು ಊರಿಗೊಬ್ಬರಿದ್ದರೆ ಸಾಕು. ಹಸಿರು ಸಮೃದ್ದಿಯಾಗಬಲ್ಲದು ಎನ್ನುತ್ತಾರೆ ಗ್ರಾಮಸ್ಥರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !