ಹಸಿರು ದೀಪಾವಳಿಗೆ ಬೆಳಕಿನ ಆರತಿ

7
ಪಟಾಕಿ ಬಿಟ್ಟು ಹಣತೆ ಬೆಳಗಿದ ಹೊನ್ನೂರಿನ ಭೀಮ್‌ರಾವ್‌ ರಾಮ್‌ಜೀ ಪ್ರೌಢಶಾಲೆ ಮಕ್ಕಳುಡ

ಹಸಿರು ದೀಪಾವಳಿಗೆ ಬೆಳಕಿನ ಆರತಿ

Published:
Updated:
Deccan Herald

ಯಳಂದೂರು: ‘ದೀಪದಿಂದ ದೀಪವ, ಹಚ್ಚಬೇಕು ಮಾನವ, ಪ್ರೀತಿಯಿಂದ ಪ್ರೀತಿ ಹಂಚಿರೋ’ ಎನ್ನುತ್ತಲೇ ಹಣತೆ ಹಿಡಿದು ಸಾಗಿದ ವಿದ್ಯಾರ್ಥಿಗಳು. ಕೊಠಡಿಯ ತುಂಬಾ ಬಿಡಿಸಿದ್ದ ರಂಗೋಲಿ ಚಿತ್ತಾರದ ಮೇಲೆ ಹಣತೆಗಳನ್ನಿಟ್ಟು ಜ್ಯೋತಿ ಬೆಳಗಿದ ಶಿಕ್ಷಕರು. ಹಸಿರು ಪರಿಸರ ನಿರ್ಮಾಣಕ್ಕಾಗಿ ಪಟಾಕಿ ಹೊತ್ತಿಸದಂತೆ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಮುಖ್ಯ ಶಿಕ್ಷಕ.

ತಾಲ್ಲೂಕಿನ ಹೊನ್ನೂರು ಗ್ರಾಮದ ಡಾ.ಭೀಮ್‌ರಾವ್‌ ರಾಮ್‌ಜೀ ಪ್ರೌಢಶಾಲೆಯ ಅಂಗಳದಲ್ಲಿ ಸೋಮವಾರ ಮಕ್ಕಳಿಗಾಗಿ ಏರ್ಪಡಿಸಿದ್ದ ‘ಹಸಿರು ದೀಪಾವಳಿ, ಪ್ರಕೃತಿ ನಳನಳಿಸಲಿ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಿವು.

‘ಸಾಹಸಕ್ಕಾಗಿ ಇಲ್ಲವೇ ಮನಸ್ಸಿನ ತುಡಿತಕ್ಕಾಗಿ ಹೊಸ ಮಾದರಿ ಸಿಡಿಮದ್ದುಗಳು ಮಕ್ಕಳನ್ನು ಆಕರ್ಷಿಸುತ್ತವೆ. ಮೋಜಿಗಾಗಿ ಹಚ್ಚುವ ಏರೋಪ್ಲೇನ್‌, ಡಬ್ಬದಲ್ಲಿ ಇಟ್ಟು ಸ್ಫೋಟಿಸುವ ಲಕ್ಷ್ಮಿ ಪಟಾಕಿ ಎಚ್ಚರ ತಪ್ಪಿದರೆ ಹಬ್ಬದ ಸಂಭ್ರಮ ಕಿತ್ತುಕೊಳ್ಳುತ್ತವೆ. ಇವು ಶಬ್ದ, ವಾಯು ಮತ್ತು ಬೆಳಕಿನ ಮಾಲಿನ್ಯ ಉಂಟುಮಾಡುತ್ತವೆ. ಇದರ ಅರಿವು ಮೂಡಿಸಲು ಶಾಲೆಯಲ್ಲಿ ದೀಪ ಹಚ್ಚುವ ಮೂಲಕ ನಾಡಿನ ಸಂಸ್ಕೃತಿ ಮತ್ತು ಹಬ್ಬದ ಹಿರಿಮೆ ಸಾರುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ’ ಎಂದು ಮುಖ್ಯಶಿಕ್ಷಕ ಎನ್‌.ಪ್ರಮೋದ್‌ ಚಂದ್ರನ್ ಹೇಳಿದರು.

ದೀಪಾವಳಿ ಮೊದಲ ದಿನ ನರಕ ಚತುರ್ದಶಿ. ನರಕಾಸುರನನ್ನು ಕೃಷ್ಣನು ಕೊಂದು ತರುಣಿಯರನ್ನು ಪಾರುಮಾಡಿದ ದಿನ. ಬಲಿಪಾಡ್ಯಮಿ ವರ್ಷದ ಪವಿತ್ರ ದಿನಗಳಲ್ಲಿ ಒಂದು. ಬಲಿಯನ್ನು ವಿಷ್ಣು ಪಾತಾಳಕ್ಕೆ ತಳ್ಳಿದ ದಿನ. ಬಾಲಕೃಷ್ಣ ಗೋವರ್ಧನ ಗಿರಿ ಎತ್ತಿ ಹಸು ಮತ್ತು ಗಿರಿ ಪೂಜೆ ಮಾಡುವ ಮೂಲಕ ಪರಿಸರ ಸಂರಕ್ಷಣೆಗೆ ಮನ್ನಣೆ ನೀಡಿದ್ದ ಆಚರಣೆ. ಹಾಗಾಗಿ ನಮ್ಮ ಮಕ್ಕಳು ದೀಪ ಹಚ್ಚಿ ಜ್ಞಾನದ ಬೆಳಕು ವಿಸ್ತರಿಸಕೊಳ್ಳಬೇಕು ಎಂದು ಯೋಗೀಶ್‌ ಆರಾಧ್ಯಮಠ
ಅವರು ಹಬ್ಬದ ಮಹತ್ವವನ್ನು ತಿಳಿಸಿದರು.

ಪಟಾಕಿಯಿಂದ ಬರುವ ಹೊಗೆಯಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಟಾಕಿ ಕಿಡಿ ಕಣ್ಣಿಗೆ ಬಿದ್ದು ಶಾಶ್ವತ ಅಂಧತ್ವ ಉಂಟಾಗುತ್ತದೆ. ಹೀಗಾಗಿ, ಮಕ್ಕಳು ಪಟಾಕಿ ಸಿಡಿಸುವುದರಿಂದ ದೂರ ಇರಬೇಕು. ದೀಪ ಹಚ್ಚುವ ಮೂಲಕ ಪರಿಸರಸ್ನೇಹಿ ಹಬ್ಬವನ್ನು ಆಚರಿಸಬೇಕು ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹದೇವ ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !