ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಎಸ್‌, ಕೆಎಎಸ್‌, ಕೆಪಿಎಸ್‌ಸಿ ಮಾದರಿ ಪ್ರಶ್ನೋತ್ತರ

ಸಾಮಾನ್ಯ ಜ್ಞಾನ
Last Updated 20 ಏಪ್ರಿಲ್ 2023, 0:30 IST
ಅಕ್ಷರ ಗಾತ್ರ

1) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) 1972ರಲ್ಲಿ ಹುಲಿ ಕಾರ್ಯಪಡೆ ಸಿದ್ಧಪಡಿಸಿದ ವರದಿಯಲ್ಲಿ ‘ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹುಲಿಗಳ ಸಂರಕ್ಷಣೆಗೆ ತಕ್ಷಣವೇ ಅಗತ್ಯ ಕ್ರಮ ತೆಗೆದುಕೊಳ್ಳದಿದ್ದರೆ, ಅವು ಅಳಿದು ಹೋಗುತ್ತವೆ’ ಎಂದು ಹೇಳಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ 1973ರ ಏಪ್ರಿಲ್‌ನಲ್ಲಿ ಹುಲಿಯೋಜನೆ ಆರಂಭಿಸಿತು. ಈಗ ದೇಶದಲ್ಲಿ ಹುಲಿಯೋಜನೆ ಆರಂಭವಾಗಿ 50 ವರ್ಷಗಳಾಗಿವೆ.
2022ರ ಹುಲಿ ಗಣತಿಯ ಪ್ರಕಾರ ದೇಶದಾದ್ಯಂತ 3167 ಹುಲಿಗಳು ಇವೆ.

2) ಹುಲಿ ಯೋಜನೆ ಆರಂಭಿಸುವ ಮೊದಲೇ, ಅಂದರೆ 1973ರಲ್ಲಿ ಬಂಡಿಪುರ ಪ್ರದೇಶದಲ್ಲಿ ಹುಲಿ ಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳಲಾಗಿತ್ತು. 1900ರಲ್ಲೇ ಮೈಸೂರಿನ ಅರಸರು ‘ಮೈಸೂರು ಅರಣ್ಯ ಕಾಯ್ದೆ‘ಜಾರಿಗೆ ತಂದಿದ್ದರು. ಬಂಡಿಪುರದ ಕೆಲವು ಭಾಗಗಳನ್ನು ಗುರುತಿಸಿ ಅಲ್ಲಿ ಬೇಟೆಯಾಡುವುದನ್ನು ನಿಷೇಧಿಸಲಾಗಿತ್ತು.

3) ಹುಲಿ ಯೋಜನೆಯ ಸುವರ್ಣ ಸಂಭ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿಯವರು ಬಂಡಿಪುರದಲ್ಲಿ ಸಫಾರಿ ನಡೆಸಿದರು. ಕಾಡೆಮ್ಮೆ ಸಹಿತ ಹಲವು ಪ್ರಾಣಿಗಳನ್ನು ಕಂಡರು. ಆದರೆ ಹುಲಿಯ ದರ್ಶನ ಮಾತ್ರ ಆಗಲಿಲ್ಲ.

4) ಹುಲಿ ಯೋಜನೆ ಆರಂಭವಾದಾಗ ದೇಶದಲ್ಲಿ 1827 ಹುಲಿಗಳಿದ್ದವು. ಪ್ರಸ್ತುತ ಜಗತ್ತಿನಲ್ಲಿರುವ ಶೇ 75ರಷ್ಟು ಹುಲಿಗಳು ನಮ್ಮ ದೇಶದಲ್ಲಿಯೇ ಇವೆ.

ಉತ್ತರ ಸಂಕೇತ:-
ಎ) ಮೊದಲ ಎರಡು ಹೇಳಿಕೆಗಳು ಮಾತ್ರ ಸರಿ
ಬಿ) ಕೊನೆಯ ಎರಡು ಹೇಳಿಕೆಗಳು ಮಾತ್ರ ಸರಿ
ಸಿ) ಎಲ್ಲಾ ಹೇಳಿಕೆಗಳು ಸರಿ ಡಿ) ಎಲ್ಲಾ ಹೇಳಿಕೆಗಳು ತಪ್ಪು

ಉತ್ತರ: ಸಿ

2) ಯಾವ ನಗರಗಳನ್ನು ಛತ್ರಪತಿ ಸಂಭಾಜಿ ನಗರ ಮತ್ತು ಧಾರಾಶಿವ ನಗರ ಎಂದು ಮರು ನಾಮಕರಣ ಮಾಡಲಾಗಿದೆ.

ಎ) ಔರಂಗಾಬಾದ್ ಮತ್ತು ಒಸ್ಮಾನಾಬಾದ್
ಬಿ) ಹೈದರಾಬಾದ್ ಮತ್ತು ಕಲಬುರ್ಗಿ
ಸಿ) ಔರಂಗಾಬಾದ್ ಮತ್ತು ವಡೋದರಾ
ಡಿ) ಮೇಲಿನ ಯಾವುದೂ ಅಲ್ಲ

ಉತ್ತರ: ಎ

3) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ‘ಅರ್ಟಿಮಿಸ್ 1, 2, 3’ ಎಂಬ ಯೋಜನೆಯ ಮೂಲಕ ಚಂದ್ರನ ಅಂಗಳಕ್ಕೆ ಮಾನವರನ್ನು ಕಳುಹಿಸುವ ಗುರಿಯನ್ನು ನಾಸಾ ಹೊಂದಿದೆ.

2) ಚಂದ್ರನ ಅಂಗಳದಲ್ಲಿ ಸದ್ಯದಲ್ಲಿಯೇ ಸಂಪರ್ಕ ಸಾಧನಗಳ ಸಹಾಯದಿಂದ 4ಜಿ ಕೆಲಸ ಮಾಡಲಿವೆ, ಅವು 2025ರಲ್ಲಿ ಗಗನಯಾತ್ರಿಗಳು ಚಂದ್ರನ ಅಂಗಳದಲ್ಲಿ ಕಾಲಿಟ್ಟ ಸಂದರ್ಭದಲ್ಲಿ ಸಹಾಯ ಮಾಡಲಿವೆ

3) ಚಂದ್ರನಲ್ಲಿ ಹೈಸ್ಪೀಡ್ ವೈರ್‌ಲೆಸ್ ಸಂಪರ್ಕದ ಮೂಲ ಸೌಕರ್ಯಗಳ ನಿರ್ಮಾಣಕ್ಕೆ ಅಗತ್ಯ ಉಪಕರಣಗಳನ್ನು ಸ್ಪೇಸ್-ಎಕ್ಸ್ ಗಗನ ನೌಕೆಯ ಮೂಲಕ ಕಳುಹಿಸಲಾಗುತ್ತದೆ.

4) ಚಂದ್ರನ ಮೇಲೆ ಹೈಸ್ಪೀಡ್ ವೈರ್‌ಲೆಸ್ ಸಂಪರ್ಕದ ಮೂಲಸೌಕರ್ಯಗಳನ್ನು ಸ್ಥಾಪಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ಟೆಲಿಕಾಂ ದಿಗ್ಗಜ ನೊಕಿಯಾ ನಡುವೆ ಒಪ್ಪಂದ ಮಾಡಿಕೊಂಡಿವೆ.

5) ನಾಸಾ ಹೊಸದಾಗಿ ಆರಂಭಿಸಿದ ‘ಚಂದ್ರನಿಂದ ಮಂಗಳಕ್ಕೆ ಯೋಜನೆ’ ಮುಖ್ಯಸ್ಥರಾಗಿ ಭಾರತೀಯ ಮೂಲದ ಅಮಿತ್ ಕ್ಷತ್ರಿಯ ನೇಮಕ ಮಾಡಲಾಗಿದೆ.

ಉತ್ತರ ಸಂಕೇತಗಳು:

ಎ) 1,4 ಮತ್ತು 5 ಹೇಳಿಕೆಗಳು ಮಾತ್ರ ಸರಿಯಾಗಿವೆ
ಬಿ) 2, 3 ಮತ್ತು 5 ಹೇಳಿಗಳು ಮಾತ್ರ ಸರಿಯಾಗಿವೆ
ಸಿ) 1 ರಿಂದ 5ರವರೆಗಿನ ಎಲ್ಲ ಹೇಳಿಕೆಗಳೂ ಸರಿಯಾಗಿವೆ
ಡಿ) 1,4 ಮತ್ತು 5 ಹೇಳಿಕೆಗಳು ಮಾತ್ರ ಸರಿಯಾಗಿವೆ

ಉತ್ತರ:ಸಿ

4) ಇತ್ತೀಚಿಗೆ ‘ಇಂಡಿಯಾ ಜಸ್ಟಿಸ್ ರಿಪೋರ್ಟ್-2022’ ಬಿಡುಗಡೆಯಾಗಿದೆ ಆ ಹಿನ್ನೆಲೆಯಲ್ಲಿ ನೀಡಲಾದ ಹೇಳಿಕೆಗಳನ್ನು ಗಮನಿಸಿ

1) ಈ ವರದಿಯು ಪೊಲೀಸ್, ಕಾರಾಗೃಹಗಳು, ನ್ಯಾಯಾಂಗ ಮತ್ತು ಕಾನೂನು ಸಹಾಯ ಈ ಮೊದಲಾದ ವಿಷಯಗಳಲ್ಲಿ ಸಮಗ್ರ ಮೌಲ್ಯಮಾಪನ ಮಾಡಿದೆ. ಅದರಲ್ಲಿ ಕರ್ನಾಟಕ ರಾಜ್ಯವು ಅಗ್ರ ಸ್ಥಾನದಲ್ಲಿದೆ.

2) ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ 18 ದೊಡ್ಡ, ಮಧ್ಯಮ ಗಾತ್ರದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದೆ. ನಂತರದ ಸ್ಥಾನಗಳನ್ನು ತಮಿಳುನಾಡು, ತೆಲಂಗಾಣ, ಗುಜರಾತ್ ಮತ್ತು ಆಂಧ್ರಪ್ರದೇಶ ರಾಜ್ಯಗಳು ಪಡೆದಿವೆ.

3) ಭಾರತವು 20,076 ನ್ಯಾಯಾಧೀಶರನ್ನು ಹೊಂದಿದ್ದು, ಸುಮಾರು ಶೇ 22 ಮಂಜೂರಾದ ಹುದ್ದೆಗಳು ನೇಮಕವಾಕದೇ ಖಾಲಿ ಇವೆ.

4) ಜೈಲುಗಳಲ್ಲಿ ಜಾಗವೇ ಇಲ್ಲ! 100 ಜನ ಕೈದಿಗಳನ್ನು ತುಂಬುವ ಸಾಮರ್ಥ್ಯ ಜೈಲುಗಳದ್ದು ಎಂದಾದರೆ ಅವುಗಳಲ್ಲಿ ತುಂಬಿರುವ ಕೈದಿಗಳ ಸಂಖ್ಯೆ 130ರಷ್ಟಿದೆ. ಅಂದರೆ ಶೇ 130ರಷ್ಟು ಕೈದಿಗಳನ್ನು ತುಂಬಲಾಗಿದೆ. ಆ ಕೈದಿಗಳ ಪೈಕಿ ಮೂರನೇ ಎರಡರಷ್ಟು ಕೈದಿಗಳು ತನಿಖೆ ಅಥವಾ ವಿಚಾರಣೆಯ ಪೂರ್ಣಗೊಳ್ಳುವಿಕೆಗಾಗಿ ಕಾಯುತ್ತಿದ್ದಾರೆ.

ಉತ್ತರ ಸಂಕೇತಗಳು
ಎ) 1, 2, ಮತ್ತು 4ಮಾತ್ರ ಸರಿಯಾಗಿದೆ
ಬಿ) 1, 3 ಮತ್ತು 4 ಮಾತ್ರ ಸರಿಯಾಗಿದೆ
ಸಿ) 2, 3 ಮತ್ತು 4 ಮಾತ್ರ ಸರಿಯಾಗಿದೆ
ಡಿ) 1 ರಿಂದ 4ರ ತನಕದ ಎಲ್ಲಾ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

5) ಕೆಳಗೆ ಎರಡು ಹೇಳಿಕೆಗಳನ್ನು ಕೊಟ್ಟಿದೆ, `ಎ' ಪ್ರತಿಪಾದನೆ, `ಆರ್' ಸಮರ್ಥನೆ ಆಗಿವೆ. ಕೊಟ್ಟಿರುವ ಸಂಕೇತಗಳಿಂದ ನಿಮ್ಮ ಉತ್ತರ ಆಯ್ಕೆಮಾಡಿ.

ಪ್ರತಿಪಾದನೆ(ಎ):- ಮಲೇಷ್ಯಾ ಸೇರಿದಂತೆ 18 ದೇಶಗಳು ಭಾರತೀಯ ಕರೆನ್ಸಿಯನ್ನು ಅಂತಾರಾಷ್ಟೀಯ ವ್ಯಾಪಾರ ವಹಿವಾಟು ಮಾಡಲು ಬಳಸಲು ಒಪ್ಪಿವೆ.

ಸಮರ್ಥನೆ(ಆರ್): ರಷ್ಯಾ ದೇಶವು ಉಕ್ರೇನ್ ದೇಶದ ಮೇಲೆ ಮಾಡಿದ ದಾಳಿಯ ನಂತರದಲ್ಲಿ ಉಂಟಾದ ಅಂತಾರಾಷ್ಟೀಯ ಪರಿಸ್ಥಿತಿಗಳು.

ಉತ್ತರ ಸಂಕೇತ:
ಎ) `ಎ' ಮತ್ತು `ಆರ್' ಎರಡೂ ಸರಿ ಆದರೆ `ಎ'ಗೆ ಸರಿಯಾದ ವಿವರಣೆ `ಆರ್' ಅಲ್ಲ
ಬಿ) `ಎ' ಮತ್ತು `ಆರ್' ಎರಡೂ ಸರಿ ಹಾಗೂ `ಎ'ಗೆ ಸರಿಯಾದ ಕಾರಣ `ಆರ್' ಆಗಿದೆ
ಸಿ) `ಎ' ತಪ್ಪಾಗಿದೆ ಆದರೆ `ಆರ್' ಸರಿಯಾಗಿದೆ
ಡಿ) `ಎ' ಸರಿಯಾಗಿದೆ ಆದರೆ `ಆರ್' ತಪ್ಪಾಗಿದೆ

ಉತ್ತರ: ಬಿ

6) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಕಳೆದ 10 ವರ್ಷಗಳಿಂದ ಯಾವುದೇ ವ್ಯವಹಾರ ನಡೆಸದೇ ಇರುವ 10.24 ಕೋಟಿ ಖಾತೆಗಳಿವೆ.

2) ಕಳೆದ 10 ವರ್ಷದಲ್ಲಿ ವ್ಯವಹಾರ ನಡೆಸದೇ ಇರುವ ಖಾತೆಗಳನ್ನು ವಾರಸುದಾರರಿಲ್ಲದ ಖಾತೆಗಳೆಂದು ಕರೆಯುತ್ತಾರೆ

3) ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ವಾರಸುದಾರರಿಲ್ಲದ ಖಾತೆಗಳಲ್ಲಿ 35,012 ಕೋಟಿ ರೂಪಾಯಿಗಳಷ್ಟು ಹಣ ಇದೆ.

4) ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ಅತಿಹೆಚ್ಚು ವಾರಸುದಾರು ಇಲ್ಲದ ಖಾತೆಗಳಿವೆ.

ಉತ್ತರ ಸಂಕೇತಗಳು:

ಎ) ಹೇಳಿಕೆ 2 ಮತ್ತು 3 ಮಾತ್ರ ಸರಿಯಾಗಿದೆ
ಬಿ) ಹೇಳಿಕೆ 1 ಮತ್ತು 3 ಮಾತ್ರ ಸರಿಯಾಗಿದೆ
ಸಿ) ಹೇಳಿಕೆ 1 ರಿಂದ 4ರ ತನಕ ಎಲ್ಲಾ ಹೇಳಿಕೆಗಳು ಸರಿಯಾಗಿವೆ
ಡಿ) ಯಾವ ಹೇಳಿಕೆಗಳು ಸರಿಯಾಗಿಲ್ಲ

ಉತ್ತರ: ಸಿ

7) ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯನೆಯಡಿ ಮೈಸೂರಿನ ‘ವಿಶ್ವ ಪ್ರಸಿದ್ದ ರೋಸ್ ವುಡ್ ಇನ್‌ಲೆ ಕಲೆ’ (ಹುದುಗು ಕಲೆ) ತರಲಾಗುತ್ತಿದೆ

2) ರೋಸ್‌ವುಡ್ ಮರದ ಮೇಲ್ಮೈಯನ್ನು ಚಿನ್ನ, ಬೆಳ್ಳಿ, ಪ್ಲಾಸ್ಟಿಕ್ ಮತ್ತು ಮರದ ವಿವಿಧ ಬಣ್ಣದ ತುಂಡುಗಳಿಂದ ಹುದುಗಿಸುವ ಮೂಲಕ ಅಲಂಕರಿಸುತ್ತಾರೆ. ಈ ಹಿಂದೆಲ್ಲಾ ಈ ಕೆಲಸಕ್ಕೆ ಆನೆಯ ದಂತವನ್ನು ಉಪಯೋಗಿಸಲಾಗುತ್ತಿತ್ತು

3) ರೋಸ್ ವುಡ್ ಹುದುಗು ಕಲೆಯ ಕೆತ್ತನೆಯ ಕೆಲಸವನ್ನು 17ನೇ ಶತಮಾನದಲ್ಲಿ ಮೈಸೂರು ರಾಜಮನೆತನದವರು ಪೋಷಿಸಿ ಬೆಳೆಸಿದರು. ಒಂದು ಕಾಲದಲ್ಲಿ 20 ಸಾವಿರಕ್ಕೂ ಹೆಚ್ಚು ಮಂದಿ ಈ ಕಲಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇಂದು ಸುಮಾರು 2 ಸಾವಿರ ಕಲಾವಿದರು ಮಾತ್ರ ಕೆಲಸ ಮಾಡುತ್ತಿದ್ದಾರೆ.

4) ಹುದುಗು ಕಲೆ ಪೋಷಣೆಗಾಗಿ ಕೌಶಲಾಭಿವೃದ್ಧಿಗೆ ತರಬೇತಿ, ಕಲಾವಿದರ ಸಮಸ್ಯೆಯನ್ನು ಪಟ್ಟಿ ಮಾಡಿ ಪರಿಹರಿಸುವುದು, ಆಸಕ್ತ ಯುವ ಜನರಿಗೆ ಕಲೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದು ಮೊದಲಾದವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿರುವ `ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ’ ಮಾಡಲಾಗುತ್ತದೆ.

ಉತ್ತರ ಸಂಕೇತಗಳು
ಎ) 1, 2 ಮತ್ತು 3ನೇ ಹೇಳಿಕೆಗಳು ಮಾತ್ರಸರಿಯಾಗಿವೆ.
ಬಿ 1 ಮತ್ತು 2ನೇ ಹೇಳಿಕೆ ಮಾತ್ರ ಸರಿಯಾಗಿವೆ.
ಸಿ) 1 ರಿಂದ 4ನೇ ಹೇಳಿಕೆ ತನಕ ಎಲ್ಲವೂ ಸರಿಯಾಗಿವೆ
ಡಿ) 2 ಮತ್ತು 3 ಹೇಳಿಕೆಗಳು ಮಾತ್ರ ಸರಿಯಾಗಿವೆ

ಉತ್ತರ: ಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT