ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ಪ್ರಶ್ನೋತ್ತರ | ವಿಜ್ಞಾನ: ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣ

Published 5 ಸೆಪ್ಟೆಂಬರ್ 2023, 23:30 IST
Last Updated 5 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ
ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಪರ್ಯಾಯ ಉತ್ತರಗಳನ್ನು ನೀಡಲಾಗಿದೆ. ಅವುಗಳಲ್ಲಿ ಸೂಕ್ತವಾದ ಉತ್ತರವನ್ನು ಆರಿಸಿ, ಅದರ ಕ್ರಮಾಕ್ಷರದೊಂದಿಗೆ ಪೂರ್ಣ ಉತ್ತರವನ್ನು ಬರೆಯಿರಿ.

1) ರಾಸಾಯನಿಕ ಕ್ರಿಯೆ ನಡೆದಿದೆ ಎನ್ನಲು ಈ ಕೆಳಗಿನ ಯಾವುದೆಲ್ಲವೂ ಸಹಾಯ ಮಾಡುತ್ತದೆ?

1) ಸ್ಥಿತಿ ಬದಲಾವಣೆ

2) ಬಣ್ಣದಲ್ಲಿ ಬದಲಾವಣೆ

3) ಅನಿಲದ ಬಿಡುಗಡೆ

4) ತಾಪದಲ್ಲಿ ಬದಲಾವಣೆ

ಮೇಲಿನ ಯಾವೆಲ್ಲವೂ ಸರಿಯಾಗಿದೆ?

ಉತ್ತರ ಸಂಕೇತಗಳು

ಎ) 1 ಮಾತ್ರ ಬಿ) 2 ಮತ್ತು 3 ಮಾತ್ರ

ಸಿ) 1 ಮತ್ತು 4 ಮಾತ್ರ ಡಿ) 1 ರಿಂದ 4ರ ತನಕ ಎಲ್ಲವೂ

ಉತ್ತರ:- (ಡಿ) 1 ರಿಂದ 4ರ ತನಕ ಎಲ್ಲವೂ

2) ಉತ್ಪನ್ನಗಳೊಂದಿಗೆ ಉಷ್ಣ ಬಿಡುಗಡೆಯಾಗುವ ಕ್ರಿಯೆಗಳನ್ನು ಏನೆಂದು ಕರೆಯುವರು?

ಎ) ಬಹಿರುಷ್ಣ ಕ್ರಿಯೆ ಬಿ) ಅಂತರುಷ್ಣ ಕ್ರಿಯೆ

ಸಿ) ಸ್ಥಾನಪಲ್ಲಟ ಕ್ರಿಯೆ ಡಿ) ಪ್ರಕ್ಷೇಪನ ಕ್ರಿಯೆ.

ಉತ್ತರ:- (ಎ) ಬಹಿರುಷ್ಣ ಕ್ರಿಯೆ

3) ಕ್ರಿಯೆಗಳಿಂದ ವಸ್ತುಗಳು ಆಕ್ಸಿಜನ್ ಕಳೆದುಕೊಳ್ಳುವುದು ಅಥವಾ ಹೈಡ್ರೋಜನ್ ಪಡೆದುಕೊಳ್ಳುವುದಕ್ಕೆ ಏನೆಂದು ಕರೆಯುವರು?

ಎ) ಉತ್ಕರ್ಷಣ ಬಿ) ಅಪಕರ್ಷಣ

ಸಿ) ದ್ವಿಸ್ಥಾನಪಲ್ಲಟ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:- (ಬಿ) ಅಪಕರ್ಷಣ

4) ಕಬ್ಬಿಣದ ಚೂರುಗಳಿಗೆ ಸಾರಯುಕ್ತ ಹೈಡ್ರೋಕ್ಲೋರಿಕ್ ಆಮ್ಲವನ್ನು ಸೇರಿಸಿದಾಗ ಏನಾಗುತ್ತದೆ? ಸರಿಯಾದ ಉತ್ತರವನ್ನು ಗುರುತು ಹಾಕಿ

ಎ) ಹೈಡ್ರೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತದೆ

ಬಿ) ಕ್ಲೋರಿನ್ ಅನಿಲ ಮತ್ತು ಕಬ್ಬೀನದ ಹೈಡ್ರಾಕ್ಸೈಡ್‌ ಉಂಟಾಗುತ್ತದೆ.

ಸಿ) ಯಾವುದೇ ಕ್ರಿಯೆ ನಡೆಯುವುದಿಲ್ಲ

ಡಿ) ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತವೆ

ಉತ್ತರ:- (ಎ) ಹೈಡ್ರೋಜನ್ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್ ಉಂಟಾಗುತ್ತದೆ

5) ಕ್ಯಾಲ್ಸಿಯಂ ಕಾರ್ಬೋನೇಟ್ ಅನ್ನು ಕಾಯಿಸಿದಾಗ …………. ಮತ್ತು ………………ಆಗಿ ವಿಭಜನೆಗೊಳ್ಳುವುದು

ಎ) ಕ್ಯಾಲ್ಸಿಯಂ ಆಕ್ಸೈಡ್‌ ಮತ್ತು ಕಾರ್ಬನ್ ಡೈ ಆಕ್ಸೈಡ್‌

ಬಿ) ಕ್ಯಾಲ್ಸಿಯಂ ಕ್ಲೋರೈಡ್ ಮತ್ತು ಆಕ್ಸಿಜನ್

ಸಿ) ಮ್ಯಾಂಗನಿಸ್ ಆಕ್ಸೈಡ್‌ ಮತ್ತು ಕಾರ್ಬನ್ ಡೈ ಆಕ್ಸೈಡ್‌

ಡಿ) ಕಾರ್ಬನ್ ಮೊನಾಕ್ಸೈಡ್‌ ಮತ್ತು ಹೈಡ್ರೋಜನ್

ಉತ್ತರ:-(ಎ) ಕ್ಯಾಲ್ಸಿಯಂ ಆಕ್ಸೈಡ್‌ ಮತ್ತು ಕಾರ್ಬನ್ ಡೈ ಆಕ್ಸೈಡ್‌

6) ಕಬ್ಬಿಣವು ತಾಮ್ರದ ಸಲ್ಫೇಟ್‌ನಲ್ಲಿರುವ ತಾಮ್ರವನ್ನು ಸ್ಥಾನಪಲ್ಲಟಗೊಳಿಸಿ ಕಬ್ಬಿಣದ ಸಲ್ಫೇಟ್ ಆಗುವುದರಿಂದ ದ್ರಾವಣದ……………… ಆಗುವುದು

ಎ) ಅಳತೆ ಬದಲಾವಣೆ ಬಿ) ಕಿಣ್ವಗಳು ನಾಶವಾಗುವುದು

ಸಿ) ಬಣ್ಣ ಬದಲಾವಣೆ ಡಿ) ಮೇಲಿನ ಯಾವುದೂ ಅಲ್ಲ

ಉತ್ತರ:-(ಸಿ) ಬಣ್ಣ ಬದಲಾವಣೆ

7) Fe2o2 +2Al Al2 + 2 Fe ಮೇಲಿನ ಕ್ರಿಯೆಯು ಇದಕ್ಕೆ ಉದಾಹರಣೆಯಾಗಿದೆ.

ಎ) ಸಂಯೋಗ ಕ್ರಿಯೆ ಬಿ) ದ್ವಿ ಸ್ಥಾನಪಲ್ಲಟ ಕ್ರಿಯೆ

ಸಿ) ವಿಭನೆ ಕ್ರಿಯೆ ಡಿ) ಸ್ಥಾನಪಲ್ಲಟ ಕ್ರಿಯೆ

ಉತ್ತರ: (ಡಿ) ಸ್ಥಾನಪಲ್ಲಟ ಕ್ರಿಯೆ

ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ

1) ರಾಸಾಯನಿಕ ಕ್ರಿಯೆ ಎಂದರೇನು?

ಉತ್ತರ:- ಒಂದು ವಸ್ತುವಿನ ರಾಸಾಯನಿಕ ಗುಣಗಳಲ್ಲಿ ಬದಲಾವಣೆ ಉಂಟು ಮಾಡುವ ಕ್ರಿಯೆಯನ್ನು ರಾಸಾಯನಿಕ ಕ್ರಿಯೆ ಎನ್ನುವರು.

2) ಕಬ್ಬಿಣದ ವಸ್ತುಗಳಿಗೆ ಬಣ್ಣವನ್ನು ಏಕೆ ಹಚ್ಚುತ್ತಾರೆ?

ಉತ್ತರ:- ತುಕ್ಕು ಹಿಡಿಯುವುದನ್ನು ತಡೆಗಟ್ಟಲು ಕಬ್ಬಿಣದ ವಸ್ತುಗಳಿಗೆ ಬಣ್ಣ ಹಚ್ಚುತ್ತಾರೆ.

3) ಪ್ರಕ್ಷೇಪನ ಕ್ರಿಯೆ ಎಂದರೇನು?

ಉತ್ತರ:- ರಾಸಾಯನಿಕ ಕ್ರಿಯೆಯಲ್ಲಿ ಜಲ ವಿಲೀನಗೊಳ್ಳದ ವಸ್ತು ಉಂಟಾಗುವುದನ್ನು ಪ್ರಕ್ಷೇಪನ ಕ್ರಿಯೆ ಎನ್ನುವರು

4) ಯಾವುದನ್ನು ಉತ್ಕರ್ಷಣ ಮತ್ತು ಅಪಕರ್ಷಣ ಕ್ರಿಯೆ ಎನ್ನುವರು?

ಉತ್ತರ:- ರಾಸಾಯನಿಕ ಕ್ರಿಯೆಯಲ್ಲಿ ವಸ್ತುವೊಂದು ಆಕ್ಸಿಜನ್ ಪಡೆದುಕೊಂಡರೆ ಅದು ಉತ್ಕರ್ಷಣಗೊಂಡಿದೆ ಎನ್ನುತ್ತೇವೆ.

ರಾಸಾಯನಿಕ ಕ್ರಿಯೆಯಲ್ಲಿ ವಸ್ತುವೊಂದು ಆಕ್ಸಿಜನ್ ಕಳೆದುಕೊಂಡರೆ ಅದು ಅಪಕರ್ಷಣಗೊಂಡಿದೆ ಎನ್ನುತ್ತೇವೆ.

5) ರೆಡಾಕ್ಸ್ ಕ್ರಿಯೆಗಳ ಬಗ್ಗೆ ಬರೆಯಿರಿ

ಉತ್ತರ:- ರಾಸಾಯನಿಕ ಕ್ರಿಯೆಯಲ್ಲಿ ಒಂದು ಪ್ರತಿವರ್ತಕವು ಉತ್ಕರ್ಷಣಗೊಂಡರೆ ಮತ್ತೊಂದು ಪ್ರತಿವರ್ತಕವು ಅಪಕರ್ಷಣ ಗೊಳ್ಳುತ್ತದೆ ಇಂತಹ ಕ್ರಿಯೆಗಳನ್ನು ಉತ್ಕರ್ಷಣ-ಅಪಕರ್ಷಣ ಅಥವಾ ರೆಡಾಕ್ಸ್ ಕ್ರಿಯೆಗಳು ಎನ್ನುವರು

6) ಒಂದೊಂದು ಉದಾಹರಣೆಯೊಂದಿಗೆ ಇವುಗಳನ್ನು ವಿವರಿಸಿ

ಅ) ನಶಿಸುವಿಕೆ ಬ) ಕಮಟುವಿಕೆ

ಉತ್ತರ:-

ನಶಿಸುವಿಕೆ:- ಲೋಹಗಳು ತಮ್ಮ ಸುತ್ತಲಿನ ತೇವಾಂಶ, ಆಮ್ಲಗಳ ಪರಿಣಾಮ ತಮ್ಮ ಹೊಳಪನ್ನು ಕಳೆದುಕೊಂಡು ಕ್ರಮೇಣ ನಾಶವಾಗಲು ಆರಂಭಿಸುತ್ತವೆ ಈ ಪ್ರಕ್ರಿಯೆಗೆ ನಶಿಸುವಿಕೆ ಎನ್ನುವರು. ಉದಾ:- ಕಬ್ಬಿಣ ತುಕ್ಕು ಹಿಡಿಯುವುದು

ಕಮಟುವಿಕೆ:- ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೆ ಒಳಗಾಗಿ ವಾಸನೆ ಮತ್ತು ರುಚಿಯಲ್ಲಿ ಬದಲಾವಣೆ ಹೊಂದುವುದನ್ನು ಕಮಟುವಿಕೆ ಎನ್ನುವರು. ಉದಾ:- ಹಲವು ದಿನಗಳಿಂದ ಸಂಗ್ರಹಿಸಿಟ್ಟ ಎಣ್ಣೆಯಿಂದ ತಯಾರಿಸಿದ ಪದಾರ್ಥಗಳು ಕಮಟುವಿಕೆಗೆ ಒಳಗಾಗಿ ತನ್ನ ಮೂಲ ರುಚಿ ಹಾಗೂ ವಾಸನೆಯನ್ನು ಕಳೆದುಕೊಂಡು ತಿನ್ನಲು ಯೋಗ್ಯವಲ್ಲದವುಗಳಾಗಿ ಬದಲಾಗುತ್ತವೆ

7) ಮೆಗ್ನೇಷಿಯಂ ಪಟ್ಟಿಯನ್ನು ಗಾಳಿಯಲ್ಲಿ ಉರಿಸುವ ಮೊದಲು ಸ್ವಚ್ಛಗೊಳಿಸಬೇಕು. ಏಕೆ?

ಉತ್ತರ:- ಮೆಗ್ನೇಷಿಯಂ ಪಟ್ಟಿಯನ್ನು ಗಾಳಿಗೆ ತೆರೆದಿಟ್ಟಾಗ ಆಕ್ಸಿಜನ್ನೊಡನೆ ವರ್ತಿಸಿ ಮೇಲ್ಪದರವು ಮೆಗ್ನೇಷಿಯಂ ಆಕ್ಸೈಡ್‌ ಆಗಿರುತ್ತದೆ. ಆದ್ದರಿಂದ ಅದನ್ನು ಸ್ವಚ್ಛಗೊಳಿಸಬೇಕು

( ಮುಂದುವರಿಯುವುದು…….)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT