ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಇ ಆರ್ಕಿಟೆಕ್ಚರ್‌: ಸಿಇಟಿ ರ‍್ಯಾಂಕ್‌ ಪಟ್ಟಿಗೆ ತಡೆ

Last Updated 3 ನವೆಂಬರ್ 2020, 18:04 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಸಾಲಿನ ಬಿಇ ಆರ್ಕಿಟೆಕ್ಚರ್‌ ಪ್ರವೇಶಾತಿಗೆ ಅ. 30ರಂದು ಪ್ರಕಟಿಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ರ‍್ಯಾಂಕ್‌ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಡೆಹಿಡಿದಿದೆ.

ವಿದ್ಯಾರ್ಥಿ ಪಿಯುಸಿಯಲ್ಲಿ (12ನೇ ತರಗತಿ) ಗಳಿಸಿರುವ ಒಟ್ಟು ಅಂಕದ ಶೇ 50ರಷ್ಟು ಮತ್ತು ಜೆಇಇ/ನಾಟಾ (ನ್ಯಾಷನಲ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಇನ್‌ ಆರ್ಕಿಟೆಕ್ಚರ್‌) ಪರೀಕ್ಷೆಯಲ್ಲಿ ಗಳಿಸಿರುವ ಒಟ್ಟು ಅಂಕದಲ್ಲಿ ಯಾವುದರಲ್ಲಿ
ಹೆಚ್ಚು ಅಂಕ ಗಳಿಸಿದ್ದಾರೊ ಅದರ ಶೇ 50ರಷ್ಟು ಸೇರಿಸಿ ಕೆಇಎ ರ‍್ಯಾಂಕ್‌ ಪಟ್ಟಿ ಪ್ರಕಟಿಸಿತ್ತು. ಆದರೆ, ಪ್ರಸಕ್ತ ಸಾಲಿನ ಜೆಇಇ ಪರೀಕ್ಷೆ ಫಲಿತಾಂಶದ ಎನ್‌ಟಿಎ ಅಂಕವನ್ನು ಶೇಕಡಾವಾರು ಮಾದರಿ
ಯಲ್ಲಿ ನೀಡಿದೆ. ಅದರ ಆಧಾರದಲ್ಲಿ ರ‍್ಯಾಂಕ್‌ ಪಟ್ಟಿಯನ್ನು ಕೆಇಎ ಪ್ರಕಟಿಸಿದೆ.

ಆದರೆ, ಈ ರೀತಿ ರ‍್ಯಾಂಕ್‌ ಪಟ್ಟಿ ತಯಾರಿಸುವ ಸಂದರ್ಭದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಅನೇಕ ವಿದ್ಯಾರ್ಥಿಗಳು ದೂರಿದ್ದಾರೆ. ಅಲ್ಲದೆ, ರ‍್ಯಾಂಕ್‌ ಪಟ್ಟಿ ಯನ್ನು ಮರುಪರಿಶೀಲಿಸಬೇಕು ಎಂದೂ ಮನವಿ ಮಾಡಿದ್ದಾರೆ. ಹೀಗಾಗಿ ಪಟ್ಟಿಯನ್ನು ತಡೆಹಿಡಿಯಲಾಗಿದೆ. ಸಂಬಂಧಪಟ್ಟ ಸಂಸ್ಥೆಗಳಿಂದ ಸ್ಪಷ್ಟೀಕರಣ ಪಡೆದ ಬಳಿಕ ರ‍್ಯಾಂಕ್‌ ಪಟ್ಟಿಯ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೆಇಎ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT