ಇಂಗ್ಲಿಷ್ ಭಾಷಾ ತರಬೇತಿ: ಬ್ರಿಟಿಷ್ ಕೌನ್ಸಿಲ್‌ತರಬೇತಿ

ಮಂಗಳವಾರ, ಮಾರ್ಚ್ 19, 2019
28 °C

ಇಂಗ್ಲಿಷ್ ಭಾಷಾ ತರಬೇತಿ: ಬ್ರಿಟಿಷ್ ಕೌನ್ಸಿಲ್‌ತರಬೇತಿ

Published:
Updated:

ವಿದೇಶಗಳಲ್ಲಿ ಶಿಕ್ಷಣ ಮತ್ತು ಉದ್ಯೋಗ ಪಡೆಯಲು ಬಹುತೇಕ ಕಡ್ಡಾಯವಾಗಿರುವ ‘ಇಂಟರ್‌ನ್ಯಾಷನಲ್  ಇಂಗ್ಲಿಷ್‌ ಲ್ಯಾಂಗ್ವೇಜ್ ಟೆಸ್ಟಿಂಗ್ ಸಿಸ್ಟಮ್’ (ಐಇಎಲ್‍ಟಿಎಸ್) ಕುರಿತು ಚುಟುಕು ತರಬೇತಿ ಕೋರ್ಸನ್ನು ಬ್ರಿಟಿಷ್ ಕೌನ್ಸಿಲ್ ಆಯೋಜಿಸಿದೆ. ಬೆಂಗಳೂರಿನಲ್ಲಿರುವ ಬ್ರಿಟಿಷ್ ಕೌನ್ಸಿಲ್ ಕಚೇರಿಯಲ್ಲಿ ಮಾರ್ಚ್ 12ರಿಂದ 15ರವರೆಗೆ ಈ ಕೋರ್ಸ್ ನಡೆಯುತ್ತದೆ.

ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗಾಗಿ ಕೋರ್ಸ್ ಶುಲ್ಕವನ್ನು ₹ 11 ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಬ್ರಿಟಿಷ್ ಕೌನ್ಸಿಲ್ ಲೈಬ್ರರಿಯಲ್ಲಿ ನುರಿತ ಶಿಕ್ಷಕರು ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.

ಐಇಎಲ್‍ಟಿಎಸ್ ಪರೀಕ್ಷೆಗೆ ಮುಖ್ಯವಾಗಿರುವ ಮಾತು, ಆಲಿಕೆ, ಓದು ಮತ್ತು ಬರಹ ಈ ನಾಲ್ಕು ವಿಷಯಗಳಲ್ಲಿ ಕೌಶಲ ತರಬೇತಿಯನ್ನು ವಿದ್ಯಾರ್ಥಿಗಳು ಮತ್ತು ಐಇಎಲ್‍ಟಿಎಸ್ ಪರೀಕ್ಷಾರ್ಥಿಗಳಿಗೆ ನೀಡಲಾಗುತ್ತದೆ.

ಕೋರ್ಸ್‍ಗೆ ಕೇವಲ 20 ಜನರಿಗೆ ಮಾತ್ರ ಅವಕಾಶವಿದೆ.  ಕಡಿಮೆ ವಿದ್ಯಾರ್ಥಿಗಳಿರುವುದರಿಂದ ಶಿಕ್ಷಕರು ವೈಯಕ್ತಿಕವಾಗಿ ವಿದ್ಯಾರ್ಥಿಗಳ ಮೇಲೆ ಗಮನ ಹರಿಸಿ ತರಬೇತಿ ನೀಡಲಿದ್ದಾರೆ. ಪ್ರಶಿಕ್ಷಣಾರ್ಥಿಗಳು ಬ್ರಿಟಿಷ್ ಕೌನ್ಸಿಲ್‍ನಿಂದ ತರಬೇತಿ ಪ್ರಮಾಣಪತ್ರವನ್ನೂ ಪಡೆಯಲಿದ್ದಾರೆ ಎಂದು ಬ್ರಿಟಿಷ್ ಕೌನ್ಸಿಲ್ ಪ್ರಕಟಣೆಯಲ್ಲಿ ತಿಳಿಸಿದೆ.

ಸಮಯ: ಪ್ರತಿದಿನ ಬೆಳಿಗ್ಗೆ 11ರಿಂದ ಸಂಜೆ 4 ಗಂಟೆ. ಸ್ಥಳ: ಬ್ರಿಟಿಷ್ ಕೌನ್ಸಿಲ್ ಲೈಬ್ರರಿ, ಪ್ರೆಸ್ಟಿಜ್ ತಖ್ತ್ 23, ಕಸ್ತೂರ ಬಾ ರಸ್ತೆ ಕ್ರಾಸ್, ಶಾಂತಲಾ ನಗರ, ಅಶೋಕ ನಗರ, ಬೆಂಗಳೂರು 560001.

ಕೋರ್ಸ್‍ಗೆ ನೋಂದಣಿ ಮಾಡಿಕೊಳ್ಳಲು ಇಚ್ಛಿಸುವವರು ಇಲ್ಲಿ ಕರೆ ಮಾಡಬೇಕು: 0120 4569000 ಅಥವಾ 0120 6684353. ಇಮೇಲ್: IndiaCustomercare@britishcouncil.org

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !