ಗುರುವಾರ , ನವೆಂಬರ್ 21, 2019
25 °C

ವಿದ್ಯಾರ್ಥಿವೇತನ ಕೈಪಿಡಿ

Published:
Updated:

ವಿದ್ಯಾರ್ಥಿವೇತನ: ಮೊನಾಶ್‌ ವಿಶ್ವವಿದ್ಯಾಲಯ ‘ಆಲ್ಫ್ರೆಡ್‌ ರಿಸರ್ಚ್‌ ಅಲಯನ್ಸ್‌ ಆನರ್ಸ್‌’ ವಿದ್ಯಾರ್ಥಿವೇತನ–2019  

ವಿವರ: ಆಸ್ಟ್ರೇಲಿಯಾದ ಮೊನಾಶ್‌ ವಿಶ್ವವಿದ್ಯಾಲಯವು ಈ ಕಾರ್ಯಕ್ರಮದಡಿ ಆಯ್ಕೆಯಾಗುವ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡುತ್ತದೆ. ಅಲ್ಲದೆ ಒಟ್ಟಾರೆ ಇಬ್ಬರು ವಿದ್ವಾಂಸರಿಗೆ ಪ್ರಶಸ್ತಿಯನ್ನೂ ನೀಡಲಿದೆ. 

ಅರ್ಹತೆ: ಮೊನಾಶ್ ಕ್ಯಾಂಪಸ್‌ನಲ್ಲಿ ಪೂರ್ಣ ಕಾಲಿಕವಾಗಿ ಆಲ್ಫ್ರೆಡ್ ರಿಸರ್ಚ್ ಅಲಯನ್ಸ್ (ಎಆರ್‌ಎ) ಆನರ್ಸ್‌ ಕಾರ್ಯಕ್ರಮದಡಿ ವ್ಯಾಸಂಗ ಮಾಡಬಯಸುವ ವಿದ್ಯಾರ್ಥಿಗಳು ಪದವಿ ಹಂತದಲ್ಲಿ ಶೇ 80 ಅಥವಾ ಅದಕ್ಕಿಂತ ಹೆಚ್ಚು ಸರಾಸರಿ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.

ಆರ್ಥಿಕ ನೆರವು: ಆಯ್ಕೆಯಾಗುವ ಇಬ್ಬರು ವಿದ್ವಾಂಸರಿಗೆ ತಲಾ ₹ 2.93 ಲಕ್ಷ (6,000 ಆಸ್ಟ್ರೇಲಿಯನ್‌ ಡಾಲರ್‌) ಆರ್ಥಿಕ ನೆರವು ದೊರೆಯುತ್ತದೆ.

ಕೊನೆಯ ದಿನ: 2019ರ ನವೆಂಬರ್‌ 6

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ: http://www.b4s.in/praja/AHS2

***

ಗ್ಲೋಬಲ್ ಯೂನಿವರ್ಸಿಟಿಸ್‌ ಅಸೋಶಿಯೇಷನ್ ರಷ್ಯನ್ ಸ್ಕಾಲರ್‌ಶಿಪ್‌ಗೆ ಆಹ್ವಾನಿಸಿದೆ. ಇದು ಅಂತರರಾಷ್ಟೀಯ ಮಟ್ಟದ ಸ್ಕಾಲರ್‌ಶಿಪ್ ಆಗಿದ್ದು ರಷ್ಯನ್ ಯೂನಿವರ್ಸಿಟಿಗಳಲ್ಲಿ ಓದುತ್ತಿರುವ ಬೇರೆ ಬೇರೆ ದೇಶದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್ 18. ಹೆಚ್ಚಿನ ಮಾಹಿತಿಗೆ https://od.globaluni.ru/en.

***

ವಿದ್ಯಾರ್ಥಿವೇತನ: ಇನ್‌ಸ್ಪೈರ್‌ ವಿದ್ಯಾರ್ಥಿವೇತನ 2019

ವಿವರ: ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳಲ್ಲಿ ಪಿಎಚ್‌.ಡಿ. ಅಧ್ಯಯನಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆದುಕೊಳ್ಳಬಹುದು. ಈ ಯೋಜನೆಯಡಿ 1000 ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತದೆ. ಮೂಲ ಮತ್ತು ಅನ್ವಯಿಕ ವಿಜ್ಞಾನ ಸೇರಿದಂತೆ ಎಂಜಿನಿಯರಿಂಗ್‌, ಕೃಷಿ, ಫಾರ್ಮಸಿ, ವೈದ್ಯಕೀಯ, ಪಶು ವಿಜ್ಞಾನ ವಿಷಯಗಳಲ್ಲಿ ಪಿಎಚ್‌.ಡಿ. ಮಾಡುವವರು ಈ ಸೌಲಭ್ಯ ಪಡೆಯಬಹುದು.

ಅರ್ಹತೆ: ಎಂ.ಎಸ್‌ಸಿ. ಅಥವಾ ಸಂಯೋಜಿತ ಎಂ.ಎಸ್‌./ಎಂ.ಎಸ್‌ಸಿ.ಪದವಿಯಲ್ಲಿ ಸರಾಸರಿ ಶೇ 70ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾಗಿರುವವರು ಅರ್ಜಿ ಸಲ್ಲಿಸಬಹುದು. ಎಂಜಿನಿಯರಿಂಗ್‌, ವೈದ್ಯಕೀಯ, ಫಾರ್ಮಾಸ್ಯೂಟಿಕಲ್‌, ಕೃಷಿ ಮತ್ತು ಪಶು ವಿಜ್ಞಾನ ವಿಷಯಗಳಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ್‍ಯಾಂಕ್‌ ಪಡೆದಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು. 

ಆರ್ಥಿಕ ನೆರವು: ಆಯ್ಕೆಯಾಗುವ ಸಾವಿರ ಫೆಲೊಗಳಿಗೆ ಕೇಂದ್ರ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಫೆಲೋಶಿಪ್‌ ಮತ್ತು ಸಂಶೋಧನಾ ಅನುದಾನವು ಐದು ವರ್ಷಗಳವರೆಗೆ ಅಥವಾ ಪಿಎಚ್‌.ಡಿ. ಪದವಿ ಪೂರ್ಣಗೊಳ್ಳುವವರೆಗೆ ದೊರೆಯಲಿದೆ. 

ಅರ್ಜಿ ಸಲ್ಲಿಸಲು ಕೊನೆಯ ದಿನ: 2019ರ ನವೆಂಬರ್‌ 6

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನ್‌ ಮೂಲಕ

ಮಾಹಿತಿಗೆ:  http://www.b4s.in/praja/INF2

***
ಕೃಪೆ: buddy4study.com

ಪ್ರತಿಕ್ರಿಯಿಸಿ (+)