ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಕ್ವಿಜ್ 29 : ಮಸನೊಬು ಪುಕೊವುಕಾ ಯಾವ ಬಗೆಯ ಕೃಷಿಯನ್ನು ಪರಿಚಯಿಸಿದರು?

ಅಕ್ಷರ ಗಾತ್ರ

1. ಜಪಾನಿನ ‘ಮಸನೊಬು ಪುಕೊವುಕಾ’ ಯಾವ ಬಗೆಯ ಕೃಷಿಯನ್ನು ಪರಿಚಯಿಸಿದರು?
ಅ) ಒಣ ಬೇಸಾಯ ಆ) ರೇಷ್ಮೆ ಇ) ಸಾವಯವ ಈ) ಸಹಜ

2. ಕೆ. ಎಸ್. ನರಸಿಂಹಸ್ವಾಮಿಯವರ ಸಮಗ್ರ ಕವನಸಂಕಲನದ ಹೆಸರೇನು?
ಅ) ಮಲ್ಲಿಗೆಯ ಬಳ್ಳಿ ಆ) ಮಲ್ಲಿಗೆಯ ಹೂವು
ಇ) ಮಲ್ಲಿಗೆಯ ಮಾಲೆ ಈ) ಮಲ್ಲಿಗೆಯ ದಂಡೆ

3. ಭಾರತಕ್ಕೆ ಹಿಂಗಾರು ಮಾರುತ ಯಾವ ಸಮುದ್ರದ ಕಡೆಯಿಂದ ಬರುತ್ತದೆ?
ಅ) ಬಂಗಾಳಕೊಲ್ಲಿ ಆ) ಅರಬ್ಬಿ ಸಮುದ್ರ
ಇ) ಹಿಂದೂ ಮಹಾಸಾಗರ
ಈ) ಮೂರೂ ಕಡೆಗಳಿಂದ

4. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ಬಂದ ವರ್ಷ ಯಾವುದು?
ಅ) 1960 ಆ)1962 ಇ) 1968 ಈ) 1970

5. ಮುಂಬೈನ ದಲಾಲ್ ಸ್ಟ್ರೀಟ್‍ನಲ್ಲಿ ಇರುವ ಪ್ರಮುಖ ಮಾರುಕಟ್ಟೆ ಯಾವುದು?
ಅ) ಕೃಷಿ ಆ) ಷೇರು ಇ) ಮೀನು ) ತರಕಾರಿ

6. ‘ಕ್ಯೂಬಿಸಂ’ ಶೈಲಿಯ ಚಿತ್ರಕಲೆಯನ್ನು ಪರಿಚಯಿಸಿದ ಕಲಾವಿದ ಯಾರು ?
ಅ) ಪಿಕಾಸೋ ಆ) ರಾಫೆಲ್
ಇ) ಡಾಲಿ ಈ) ಮೈಕಲ್ ಆ್ಯಂಜಲೋ

7. ಇವುಗಳಲ್ಲಿ ನಾಸಿರುದ್ದೀನ್ ಷಾ ಅಭಿನಯಿಸಿರುವ ಕನ್ನಡ ಚಲನಚಿತ್ರ ಯಾವುದು?
ಅ) ವಂಶವೃಕ್ಷ ಆ) ಫಣಿಯಮ್ಮ
ಇ) ಮತದಾನ
ಈ) ತಬ್ಬಲಿಯು ನೀನಾದೆ ಮಗನೆ

8. ಒಂದೇ ರೀತಿಯ ರಚನೆ ಹೊಂದಿರುವ ಮತ್ತು ಒಂದೇ ಬಗೆಯ ಕಾರ್ಯಮಾಡುವ ಜೀವಕೋಶಗಳ ಗುಂಪನ್ನು ಏನೆನ್ನುತ್ತಾರೆ?
ಅ) ಅಂಗ ಆ) ಅಂಗಾಂಶ
ಇ) ಅಂಗರಾಗ ಈ) ಅಂಗಾಂಗ

9. ‘ಟೆನಿಸ್‍ನ ಕಾಶಿ’ಎನಿಸಿದ ವಿಂಬಲ್ಡನ್ ಯಾವ ಮಹಾನಗರದ ಬಳಿ ಇದೆ?
ಅ) ಲಂಡನ್ ಆ) ಬಕ್ರ್ಲಿ
ಇ)ಮ್ಯಾಂಚೆಸ್ಟರ್ ಈ)ಡೆವೋನ್

10. ‘ಸೊಮ್ನಾಂಬುಲಿಸಂ’ ಎಂದರೇನು?
ಅ) ನಿದ್ರಾಹೀನತೆ ಆ) ಅತಿನಿದ್ರೆ
ಇ) ನಿದ್ರಾಭಂಗ ಈ) ನಿದ್ರಾ ನಡಿಗೆ

ಹಿಂದಿನ ಸಂಚಿಕೆಯ ಸರಿ ಉತ್ತರಗಳು
1. ಭರತನಾಟ್ಯಂ 2. ರಂ.ಶ್ರೀ. ಮುಗಳಿ
3. ಹಿಮ್ಮಡಿ 4. ಗೊಮ್ಮಟ 5. ಹೃದಯಾಘಾತ
6. ರಾಷ್ಟ್ರಪತಿ 7. ನೀಲಗಿರಿ
8. ಸಿ.ಎಸ್. ಲೂಯಿಸ್ 9. ಬೆನೆಟ್ ಕೋಲ್ಮನ್ ಅಂಡ್ ಕೊ. 10. ಹದಿನಾಲ್ಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT