ಬುಧವಾರ, ನವೆಂಬರ್ 20, 2019
25 °C

ಪ್ರಜಾವಾಣಿ ಕ್ವಿಜ್ – 87

Published:
Updated:

1. ಯಾವ ಮೈದಾನಕ್ಕೆ ಅರುಣ್ ಜೇಟ್ಲಿಯವರ ಹೆಸರು ಇಡಲು ಚಿಂತಿಸಲಾಗಿದೆ?

ಅ) ಫಿರೋಜ್ ಷಾ ಕೋಟ್ಲಾ
ಆ) ಚೆಪಾಕ್ ಇ) ಚಿನ್ನಸ್ವಾಮಿ
ಈ) ವಾಂಖೆಡೆ‌

2. ಪ್ಲಾಸ್ಟಿಕ್ ಕೈಚೀಲಗಳನ್ನು ನಿಷೇಧಿಸಿದ ಮೊಟ್ಟ ಮೊದಲ ದೇಶ ಯಾವುದು?

ಅ) ಚೀನಾ ಆ) ಬಾಂಗ್ಲಾ ದೇಶ
ಇ) ಜಪಾನ್ ಈ) ಅಮೆರಿಕ

3. ‘ಕರ್ನಾಟಕ ಕುಲ ಪುರೋಹಿತ’ ಎಂಬ ಬಿರುದು ಯಾರಿಗೆ ಇತ್ತು?

ಅ) ಗಳಗನಾಥ ಆ) ರಾ.ಹ.ದೇಶಪಾಂಡೆ
ಇ) ಆಲೂರು ವೆಂಕಟರಾಯರು
ಈ) ಮೈಲಾರ ಮಹಾದೇವ

4. ಹೃದಯಾಘಾತವಾದಾಗ ನೀಡುವ ಪ್ರಥಮ ಚಿಕಿತ್ಸೆಯನ್ನು ಏನೆಂದು ಕರೆಯಲಾಗುತ್ತದೆ?

ಅ) ವಿಸಿಆರ್ ಆ) ಎಐಆರ್
ಇ) ಎನ್ಆರ್‌ಆರ್ ಈ) ಸಿಪಿಆರ್

5. ಇಂಗ್ಲೆಂಡ್‌ನ ರಾಷ್ಟ್ರಕವಿ ಯಾರು?

ಅ) ವಿಲಿಯಮ್ ವರ್ಡ್ಸ್‌ವರ್ತ್
ಆ) ವಿಲಿಯಂ ಶೇಕ್ಸ್‌ಪಿಯರ್
ಇ) ಪಿ.ಬಿ.ಶೆಲ್ಲಿ ಈ) ಜಾನ್‌ ಕೀಟ್ಸ್

6. ಬೆಂಕಿಯನ್ನು ಆರಿಸಲು ಸಾಧಾರಣವಾಗಿ ಯಾವ ಅನಿಲವನ್ನು ಬಳಸಲಾಗುತ್ತದೆ?

ಅ) ಆಮ್ಲಜನಕ ಆ) ಜಲಜನಕ ಇ) ಇಂಗಾಲದ ಡೈಆಕ್ಸೈಡ್ ಈ) ಇಂಗಾಲದ ಮೊನಾಕ್ಸೈಡ್

7. ‘ಬೋನ್ಸಾಯ್’ ಎಂಬುದು ಮೂಲತಃ ಯಾವ ಭಾಷೆಯ ಪದ?

ಅ) ಕೊರಿಯನ್‌ ಆ) ಇಂಗ್ಲಿಷ್
ಇ) ಜಾಪನೀಸ್ ಈ) ರಷ್ಯನ್

8. ಪ್ರಸಿದ್ಧವಾದ ಗೋಲ್ಡನ್ ಗೇಟ್ ಸೇತುವೆ ಎಲ್ಲಿದೆ?

ಅ) ಟೋಕಿಯೊ ಆ) ಲಂಡನ್ ಇ) ನ್ಯೂಯಾರ್ಕ್ ಈ) ಸ್ಯಾನ್ ಫ್ರಾನ್ಸಿಸ್ಕೊ

9. ಏಣಗಿ ಬಾಳಪ್ಪ ಯಾವ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ?

ಅ) ರಂಗಭೂಮಿ ಆ) ಕೃಷಿ
ಇ) ಸಾಹಿತ್ಯ ಈ) ಗೊಂಬೆಯಾಟ

10. ಜೀವ ವಿಮೆಯ ಸೌಲಭ್ಯಗಳನ್ನು ಹೆಚ್ಚಿಸುವ ಉತ್ಪನ್ನಗಳನ್ನು ಏನೆಂದು ಕರೆಯಲಾಗುತ್ತದೆ?

ಅ) ರೈಡರ್ ಆ) ಬೂಸ್ಟರ್ ಇ) ಟ್ರಾಕರ್ ಈ) ಸೆಕ್ಟರ್

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1.ಜಪಾನ್ 2.ಐವತ್ತು 3.ಭೂವಿಜ್ಞಾನ 4.ಲಕ್ಷ್ಮಿ 5.ಖಾಸಗಿ ಉದ್ಯೋಗ 6.ರುಬಯ್ಯತ್ 7.ವಿದೇಶಾಂಗ 8.ಎಚ್. ನರಸಿಂಹಯ್ಯ 9.ಯಮುನಾ 10. ಕಾಜಿರಂಗ

ಪ್ರತಿಕ್ರಿಯಿಸಿ (+)