ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಸ್ತ್ರ ತ್ಯಾಗ ಮಾಡಿ ಮನೆಗೆ ಬಾ: ಮತದಾನದ ಬಳಿಕ ಲಷ್ಕರ್ ಉಗ್ರನಿಗೆ ಸಹೋದರನ ಮನವಿ

Published 20 ಮೇ 2024, 6:45 IST
Last Updated 20 ಮೇ 2024, 6:45 IST
ಅಕ್ಷರ ಗಾತ್ರ

ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಮಾಡಿದ ಮತದಾರನೊಬ್ಬ ಶಸ್ತ್ರ ತ್ಯಾಗ ಮಾಡಿ, ಮನೆಗೆ ಹಿಂದಿರುಗು ಎಂದು ಲಷ್ಕರ್–ಎ–ತಯಬಾ(ಎಲ್‌ಇಟಿ) ಭಯೋತ್ಪಾದಕ ಸಂಘಟನೆ ಸೇರಿರುವ ಸಹೋದರನಿಗೆ ಮನವಿ ಮಾಡಿದ್ದಾರೆ.

ಶಾಂತಿ ನೆಲೆಸುವ ದೃಷ್ಟಿಯಿಂದ ಶರಣಾಗು ಎಂದು ಮತದಾನದ ಬಳಿಕ ಅವರು ಮನವಿ ಮಾಡಿದ್ದಾರೆ.

ರೌಫ್‌ ಅಹಮ್ಮದ್ ಲೋನ್ ಎಂಬುವವರ ಸಹೋದರ ಉಮರ್ ಲೋನ್ ಸಕ್ರಿಯ ಲಷ್ಕರ್–ಎ–ತಯಬಾ ಸಂಘಟನೆಯ ಉಗ್ರನಾಗಿದ್ದು, ಹಲವು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದಾನೆ.

‘ಮತದಾನ ನನ್ನ ಹಕ್ಕು, ಹಾಗಾಗಿ, ಮತದಾನ ಮಾಡಿದ್ದೇನೆ. ದಯವಿಟ್ಟು ಎಲ್ಲರೂ ಮತದಾನ ಮಾಡಿ ಎಂದು ನಾನು ಮನವಿ ಮಾಡುತ್ತೇನೆ. ಆ ಬಳಿಕ ಮಾತ್ರ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. ಮತಗಟ್ಟೆಗೆ ಬನ್ನಿ, ಮತ ಹಾಕಿ’ ಎಂದು ರೌಫ್‌ ಅಹಮ್ಮದ್ ಲೋನ್ ಹೇಳಿದ್ದಾರೆ.

ಭದ್ರತಾ ಪಡೆ ಮುಂದೆ ಶರಣಾಗುವಂತೆ ನನ್ನ ಸಹೋದರ ಉಮರ್‌ಗೆ ಮನವಿ ಮಾಡುತ್ತೇನೆ. ಅದು ಅತ್ಯಂತ ಒಳ್ಳೆಯ ಕೆಲಸವಾಗಲಿದೆ. ಆಗ,ಅವನು ಅವನ ಮನೆ ಮತ್ತು ತಾಯಿ ಬಳಿಗೆ ಬರಬಹುದು’ ಎಂದು ಲೋನ್ ಹೇಳಿದ್ದಾರೆ.

ಈ ವರ್ಷದ ಏಪ್ರಿಲ್‌ನಲ್ಲಿ ಉಮರ್ ತಾಯಿ ಸಹ ಶರಣಾಗತಿಗೆ ಮನವಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT