ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರಾಮತಿ ಲೋಕಸಭಾ ಕ್ಷೇತ್ರ: ನಿರ್ಧಾರ ಬದಲಿಸಿದ ವಿಜಯ್ ಶಿವತಾರೆ

Published 30 ಮಾರ್ಚ್ 2024, 13:12 IST
Last Updated 30 ಮಾರ್ಚ್ 2024, 13:12 IST
ಅಕ್ಷರ ಗಾತ್ರ

ಪುಣೆ: ಮಹಾರಾಷ್ಟ್ರದ ಬಾರಾಮತಿ ಲೋಕಸಭಾ ಕ್ಷೇತ್ರದಲ್ಲಿ ಪವಾರ್ ಕುಟುಂಬಕ್ಕೆ ವಿರುದ್ಧವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದ ಶಿವಸೇನಾ ಮುಖಂಡ ವಿಜಯ್ ಶಿವತಾರೆ ತಮ್ಮ ನಿಲುವು ಬದಲಿಸಿದ್ದು, ‘ಮಹಾಯುತಿ’ ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

ಬಾರಾಮತಿ ಕ್ಷೇತ್ರವು ಎನ್‌ಸಿಪಿ (ಶರದ್ ಪವಾರ್ ಬಣ)ದ ಭದ್ರಕೋಟೆಯಾಗಿದ್ದು, ಶರದ್ ಪವಾರ್ ಮಗಳು ಸುಪ್ರಿಯಾ ಸುಳೆ ಅವರನ್ನು ಮಹಾ ‘ವಿಕಾಸ ಅಘಾಡಿ ಕೂಟ’ವು ಅಭ್ಯರ್ಥಿಯಾಗಿ ಘೋಷಿಸಿದೆ. ಏಕನಾಥ ಶಿಂದೆ ಜೊತೆಗಿರುವ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರು ‘ಮಹಾಯುತಿ’ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಶಿವತಾರೆ ಘೋಷಣೆ ಮಾಡಿದ್ದು, ಆಡಳಿತಾರೂಢ ಎನ್‌ಸಿಪಿ ಮತ್ತು ಶಿವಸೇನಾ (ಅಜಿತ್ ಪವಾರ್ ಬಣ) ಕೂಟದಲ್ಲಿ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಶಿವತಾರೆ, ಬಾರಾಮತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪುರಂದರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ಅವರು ಗುರುವಾರ ಬೆಳಿಗ್ಗೆ ಮುಖ್ಯಮಂತ್ರಿ ಶಿಂದೆ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದರ ನಂತರ ಶನಿವಾರ ಪುಣೆ ಜಿಲ್ಲೆಯ ಪುರಂದರ ತಾಲ್ಲೂಕಿನಲ್ಲಿ ತಮ್ಮ ಬೆಂಬಲಿಗರೊಂದಿಗೆ ಚರ್ಚೆ ನಡೆಸಿದರು. 

‘ಮುಂದಿನ ತಲೆಮಾರು ಕಷ್ಟ ಪಡಬಾರದು ಎನ್ನುವ ದೃಷ್ಟಿಯಿಂದ ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಏಕನಾಥ ಶಿಂದೆ ಅವರ ಆಪ್ತ ಅಧಿಕಾರಿ ನನಗೆ ಕರೆ ಮಾಡಿ ಎರಡು ಗಂಟೆ ಕಾಲ ಮಾತನಾಡಿದರು’ ಎಂದು ಶಿವತಾರೆ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT