ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಎಸ್ಆರ್‌ಸಿಪಿ ಪ್ರಚಾರ ವಾಹನ ಗುದ್ದಿ ಬಾಲಕ ಸಾವು

Published 19 ಏಪ್ರಿಲ್ 2024, 14:01 IST
Last Updated 19 ಏಪ್ರಿಲ್ 2024, 14:01 IST
ಅಕ್ಷರ ಗಾತ್ರ

ರಾಜಂ (ಆಂಧ್ರ ಪ್ರದೇಶ): ಆಂಧ್ರಪ್ರದೇಶದ ರಾಜಂನಲ್ಲಿ ವೈಎಸ್ಆರ್‌ಸಿಪಿ ಪರ ಚುನಾವಣಾ ಪ್ರಚಾರ ನಡೆಸುತ್ತಿದ್ದ ವಾಹನ ಡಿಕ್ಕಿ ಹೊಡೆದು, 9 ವರ್ಷದ ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸ್‌ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.  

ಬಾಲಕ ಗುರುವಾರ ರಾತ್ರಿ ಬೊಬ್ಬಿಲಿ ಜಂಕ್ಷನ್‌ ರಸ್ತೆ ಬಳಿ 8 ಗಂಟೆ ಸುಮಾರಿಗೆ ತಿಂಡಿ ಖರೀದಿಸಲು ಬಂದಿದ್ದ ವೇಳೆ ವಿಧಾನಸಭೆ ಚುನಾವಣೆಗೆ ವೈಎಸ್‌ಆರ್‌ಸಿಪಿ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ವಾಹನ ಡಿಕ್ಕಿ ಹೊಡೆದಿದೆ. ಘಟನೆ ವೇಳೆ ಅಭ್ಯರ್ಥಿ ಪ್ರಚಾರದ ವಾಹನದಲ್ಲಿ ಇರಲಿಲ್ಲ. ಪ್ರಚಾರ ಮುಗಿದ ಬಳಿಕ ಚಾಲಕನು ವಾಹನದ ಟೈರ್‌ಗೆ ಗಾಳಿ ತುಂಬಿಸಲು ವಾಹನವನ್ನು ತೆಗೆದುಕೊಂಡು ಹೋದ ವೇಳೆ ಅಪಘಾತ ಸಂಭವಿಸಿದೆ. 

ಚಾಲಕ ಎಂ.ಸುಧೀರ್ (21) ಎಂಬಾತನನ್ನು ಬಂಧಿಸಲಾಗಿದ್ದು ಮರಣೋತ್ತರ ಪರೀಕ್ಷೆ ನಡೆಸಿ ಬಾಲಕನ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT