ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Sikkim Election Results: 27 ಕ್ಷೇತ್ರಗಳಲ್ಲಿ ಎಸ್‌ಕೆಎಂಗೆ ಆರಂಭಿಕ ಮುನ್ನಡೆ

Published 2 ಜೂನ್ 2024, 3:35 IST
Last Updated 2 ಜೂನ್ 2024, 3:35 IST
ಅಕ್ಷರ ಗಾತ್ರ

ಗ್ಯಾಂಗ್‌ಟಕ್: ಸಿಕ್ಕಿಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಸ್‌ಡಿಎಫ್ ಪಕ್ಷವು ಕೇವಲ ಒಂದು ಕ್ಷೇತ್ರದಲ್ಲಿ ಆರಂಭಿಕ ಮುನ್ನಡೆ ಪಡೆದಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆದಿದೆ.

ರಾಜ್ಯದ 6 ಜಿಲ್ಲೆಗಳಲ್ಲೂ ಮತ ಎಣಿಕೆ ನಡೆಯುತ್ತಿದೆ.

ಮುಖ್ಯಮಂತ್ರಿ ಮತ್ತು ಎಸ್‌ಕೆಂ ಅಭ್ಯರ್ಥಿ ಪ್ರೇಮ್ ಸಿಂಗ್, ತಮಂಗ್ ಕ್ಷೇತ್ರದಲ್ಲಿ 1,400 ಮತಗಳಿಂದ ಮುನ್ನಡೆ ಪಡೆದಿದ್ದಾರೆ. ಎಸ್‌ಡಿಎಫ್ ನಾಯಕ ಸೋಮನಾಥ್ ಪೌಂಡ್ಯಲ್, ರಿನೋಕ್ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಮಾಜಿ ಮುಖ್ಯಮಂತ್ರಿ, ಎಸ್‌ಡಿಎಫ್ ವರಿಷ್ಠ ಪವನ್ ಕುಮಾರ್ ಚಾಮ್ಲಿಂಗ್ ಅವರು ಎಸ್‌ಕೆಂ ಅಭ್ಯರ್ಥಿ ರಾಜು ಬಾನ್ಸೆಟ್ ವಿರುದ್ಧ ಹಿನ್ನಡೆ ಪಡೆದಿದ್ದಾರೆ.

ಸಚಿವ ಸೋನಮ್ ಲಾಮಾ ಅವರು ಬಿಜೆಪಿ ಅಭ್ಯರ್ಥಿ ಸೆಟೆನ್ ತಾಶಿ ವಿರುದ್ಧ ಸಂಘ ಕ್ಷೇತ್ರದಲ್ಲಿ ಮುನ್ನಡೆ ಪಡೆದಿದ್ದಾರೆ.

ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಯ ಮತದಾನ ಏಪ್ರಿಲ್‌ 19 ರಂದು ಏಕಕಾಲದಲ್ಲಿ ನಡೆದಿತ್ತು.

ಸಿಕ್ಕಿಂನ 32 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. 2019ರಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಹಾಗೂ ಸಿಕ್ಕಿಂ ಡೆಮಾಕ್ರಟಿಕ್‌ ಫ್ರಂಟ್‌ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT