‘ಐ ಯಾಮ್ ಎಮರ್ಜೆನ್ಸಿ ರೆಡಿ’ ಅಭಿಯಾನ

7

‘ಐ ಯಾಮ್ ಎಮರ್ಜೆನ್ಸಿ ರೆಡಿ’ ಅಭಿಯಾನ

Published:
Updated:

ಬೆಂಗಳೂರು: ‘ಸಂಕಷ್ಟದ ಸ್ಥಿತಿಯಲ್ಲಿರುವವರನ್ನು ಆಸ್ಪತ್ರೆಗೆ ದಾಖಲಿಸಿ ಪ್ರಾಣ ಉಳಿಸುವ ವ್ಯಕ್ತಿಗೆ ‘ಉತ್ತಮ ಪರೋಪಕಾರಿ’ ಪ್ರಶಸ್ತಿ ನೀಡಲಾಗುವುದು’ ಎಂದು ಗ್ಲೆನ್ ಈಗಲ್ಸ್ ಗ್ಲೋಬಲ್ ಆಸ್ಪತ್ರೆಯ ಅಧ್ಯಕ್ಷ ಡಾ.ರವೀಂದ್ರನಾಥ್ ಹೇಳಿದರು.

ಬಿಜಿಎಸ್ ಗ್ಲೆನ್ ಈಗಲ್ಸ್ ಗ್ಲೋಬಲ್ ಆಸ್ಪತ್ರೆ ‘ಐ ಯಾಮ್ ಎಮರ್ಜೆನ್ಸಿ ರೆಡಿ’ ತುರ್ತು ಚಿಕಿತ್ಸಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ತುರ್ತು ಸಂದರ್ಭಗಳಲ್ಲಿ ರೋಗಿಗೆ ವೈದ್ಯಕೀಯ ನೆರವು ದೊರೆಯುವ ಮುನ್ನ ಪ್ರಥಮ ಚಿಕಿತ್ಸೆ ನೀಡಿ, ಆಗಬಹುದಾದ ಹಾನಿಯನ್ನು ತಪ್ಪಿಸುವ ಬಗ್ಗೆ ಸಾರ್ವಜನಿಕರಿಗೆ ತರಬೇತಿ ನೀಡುವುದು ಅಭಿಯಾನದ ಮೂಲ ಉದ್ದೇಶ’ ಎಂದು ತಿಳಿಸಿದರು.

ಚಾಲಕರು, ರಸ್ತೆ ಬದಿ ವ್ಯಾಪಾರಿಗಳು, ಕಾರ್ಪೊರೇಟ್ ಸಂಸ್ಥೆಗಳ ಸಿಬ್ಬಂದಿ, ಸಾಮಾಜಿಕ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ ಸೇರಿದಂತೆ ಇನ್ನೂ ಹಲವಾರು ಕ್ಷೇತ್ರಗಳ ಜನರಿಗೆ ಆಸ್ಪತ್ರೆ ವತಿಯಿಂದ ತರಬೇತಿ ನೀಡಲಾಗುವುದು. ತದನಂತರ ಅವರಿಗೆ ತುರ್ತು ಚಿಕಿತ್ಸಾ ಕಿಟ್ ಜೊತೆಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ಹೇಳಿದರು.

ಈ ವೇಳೆ ಆಸ್ಪತ್ರೆಯ 10 ಹೆಚ್ಚುವರಿ ಆಂಬುಲೆನ್ಸ್ ವಾಹನಗಳ ಸೇವೆಗೆ ಲೋಕಾರ್ಪಣೆಗೊಳಿಸಲಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !