31 ಎಂಜಿನಿಯರ್‌ಗಳು ಮಾತೃ ಇಲಾಖೆಗೆ

7
* ಪಾಲಿಕೆಯಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದರು *

31 ಎಂಜಿನಿಯರ್‌ಗಳು ಮಾತೃ ಇಲಾಖೆಗೆ

Published:
Updated:

ಬೆಂಗಳೂರು: ಬಿಬಿಎಂಪಿಯಲ್ಲಿ ಹಲವು ವರ್ಷಗಳಿಂದ ಠಿಕಾಣಿ ಹೂಡಿದ್ದ 31 ಎಂಜಿನಿಯರ್‌ಗಳನ್ನು ಮಾತೃ ಇಲಾಖೆಗೆ ಕಳುಹಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಸೋಮವಾರ ಆದೇಶಿಸಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿವರ್ಷ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳು ನಡೆಯುತ್ತವೆ. ಹಾಗಾಗಿ ದೊಡ್ಡ ಸಂಖ್ಯೆಯ ಎಂಜಿನಿಯರ್‌ಗಳ ಅಗತ್ಯವಿದೆ. ಈ ಕಾರಣಕ್ಕೆ ಎಂಜಿನಿಯರ್‌ಗಳು ಎರವಲು ಸೇವೆಯ ಮೇಲೆ ಪಾಲಿಕೆಗೆ ಬರುತ್ತಾರೆ. ಈ ಅವಕಾಶಕ್ಕಾಗಿ ಎಂಜಿನಿಯರುಗಳ ನಡುವೆ ಸದಾ ಪೈಪೋಟಿ ನಡೆಯುತ್ತಲೇ ಇರುತ್ತದೆ. ಲೋಕೋಪಯೋಗಿ ಇಲಾಖೆಯ 101 ಎಂಜಿನಿಯರ್‌ಗಳು ಪಾಲಿಕೆಯಲ್ಲಿ ಸುಮಾರು 10 ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ.

ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೌಕರಿ ಭರ್ತಿ) ನಿಯಮಗಳು 1977ರ ನಿಯಮ 16ರ ಅಡಿಯಲ್ಲಿ ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಸಮಾನ ವೇತನ ಶ್ರೇಣಿಗೆ ನೇಮಕ ಮಾಡಲು ಅವಕಾಶ ಇದೆ. ಕರ್ನಾಟಕ ನಾಗರಿಕ ಸೇವಾ ನಿಯಮ 50 (3) ಹಾಗೂ 419 (ಬಿ) ಪ್ರಕಾರ ನಿಯೋಜನಾ ಅವಧಿಯನ್ನು ಮೂರು ವರ್ಷಕ್ಕೆ ಮಿತಿಗೊಳಿಸಲಾಗಿದೆ. ಅನಿವಾರ್ಯ ಸಂದರ್ಭಗಳಲ್ಲಿ ಈ ಅವಧಿಯನ್ನು ಒಂದು ವರ್ಷ ವಿಸ್ತರಿಸಬಹುದು. ಮೂರು ವರ್ಷ ಪೂರೈಸಿರುವ ಎಂಜಿನಿಯರ್‌ಗಳನ್ನು ಮಾತೃ ಇಲಾಖೆಗೆ ಕಳುಹಿಸುವಂತೆ ನಗರಾಭಿವೃದ್ಧಿ ಇಲಾಖೆ 2016ರಲ್ಲಿ ನಿರ್ದೇಶನ ನೀಡಿತ್ತು. ಆ ಬಳಿಕ ನಾಲ್ಕೈದು ಅಧಿಕಾರಿಗಳಷ್ಟೇ ಮಾತೃ ಇಲಾಖೆಗೆ ಮರಳಿದ್ದರು. ಸುಮಾರು 200 ಅಧಿಕಾರಿಗಳು ಪಾಲಿಕೆಯಲ್ಲೇ ಉಳಿದಿದ್ದರು.

‘ಪಾಲಿಕೆಯಲ್ಲಿ ಈ ಎಂಜಿನಿಯರ್‌ಗಳು 3 ವರ್ಷಗಳಿಗಿಂತ ಹೆಚ್ಚು ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವೆ ಪಾಲಿಕೆಗೆ ಅಗತ್ಯ ಇಲ್ಲ. ಆಡಳಿತಾತ್ಮಕ ದೃಷ್ಟಿಯಿಂದ ಮಾತೃ ಇಲಾಖೆಗೆ ಕೂಡಲೇ ವಾಪಸ್‌ ಕಳುಹಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಕಾರ್ಯನಿರ್ವಾಹಕ ಎಂಜಿನಿಯರ್‌ಗಳು

ಹೆಸರು; ಮಾತೃ ಇಲಾಖೆ

ಶೇಷಾದ್ರಿ; ಕೆಎಸ್‌ಎಫ್‌ಸಿ

ಎಂ.ಸಿ.ಲಕ್ಷ್ಮೀಶ್‌; ಕೆಎಸ್‌ಎಫ್‌ಸಿ

ಬಿ.ಎಸ್‌.ಮುಕುಂದ್‌; ಕೆಎಸ್‌ಎಫ್‌ಸಿ

ಎಂ.ಕೆಂಪೇಗೌಡ; ಕೆಎಸ್‌ಎಫ್‌ಸಿ

ಕೆ.ಸಿ.ಉಮೇಶ್‌; ಕೆಪಿಟಿಸಿಎಲ್‌

ಮೋಹನ್ ಗೌಡ; ಕೆಎಸ್ಎಫ್‌ಸಿ

ಕೆ.ಎಂ.ವಾಸು; ಕೆಎಸ್‌ಎಫ್‌ಸಿ

ಎಸ್‌.ಶಿವಕುಮಾರ್; ಕೆಎಸ್‌ಎಫ್‌ಸಿ

ಎಂ.ಶಾಂತಕುಮಾರ್‌; ಲೋಕೋಪಯೋಗಿ

ಆರ್‌.ಮಾಲತೇಶ್‌; ಲೋಕೋ‍ಪಯೋಗಿ

 

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು

ಹೆಸರು; ಮಾತೃ ಇಲಾಖೆ

ಸಿ.ಟಿ.ಆಂಜನಪ್ಪ; ಲೋಕೋಪಯೋಗಿ

ಬಿ.ಎ.ಮಹದೇವ್; ಲೋಕೋ‍ಪಯೋಗಿ

ರಜನಿಕಾಂತ್‌ ಮಲ್ಲಿ; ಲೋಕೋಪಯೋಗಿ

ಜಿ.ಡಿ.ಜಯರಾಂ; ಲೋಕೋಪಯೋಗಿ

ಜೆ.ಆರ್.ಭಾಸ್ಕರ್‌; ಲೋಕೋಪಯೋಗಿ

ಆರ್‌.ಕೆ.ಶಶಿಧರ್; ಲೋಕೋ‍ಪಯೋಗಿ

ಎಸ್‌.ಪಿ.ವಿಜಯಕುಮಾರ್‌; ಲೋಕೋಪಯೋಗಿ

ಕೆ.ಸಿ.ಅಶ್ವತ್ಥರೆಡ್ಡಿ; ಲೋಕೋಪಯೋಗಿ

ಅಂದಾನಗೌಡ ಸಿ.ಹಳೇಮನಿ; ಲೋಕೋ‍ಪಯೋಗಿ

ಕೆ.ಎನ್‌.ರಮೇಶ್‌–ಲೋಕೋಪಯೋಗಿ

ಮಹಮ್ಮದ್‌ ನಯಿಮ್‌ ತುಲ್ಲಾಖಾನ್‌; ಲೋಕೋ‍ಪಯೋಗಿ

ಆರ್‌.ಎಸ್‌.‍ಪರಮೇಶ್‌; ಲೋಕೋಪಯೋಗಿ

ಶಿವಲಿಂಗೇಗೌಡ; ಲೋಕೋಪಯೋಗಿ

ಮೊಹಮ್ಮದ್‌ ಒಬೇದುಲ್ಲಾ ಷರೀಫ್; ಲೋಕೋಪಯೋಗಿ

ಎಸ್‌.ಎಂ.ರಾಮಚಂದ್ರಮೂರ್ತಿ; ಲೋಕೋ‍ಪಯೋಗಿ

ಆರ್‌.ಜಿ.ಪ್ರೇಮಾನಂದಮೂರ್ತಿ; ಲೋಕೋಪಯೋಗಿ

ಆರ್.ವಿ. ವಿಜಯಗೋಪಾಲ್‌; ಲೋಕೋ‍ಪಯೋಗಿ

ಮುಬಾಷಿರ್‌ ಅಹಮದ್‌; ಲೋಕೋಪಯೋಗಿ

ಸೀಮಾಬ್‌ ಅತ್ತರ್‌; ಲೋಕೋಪಯೋಗಿ

ಟಿ.ಕೃಷ್ಣಪ್ಪ; ಲೋಕೋ‍ಪಯೋಗಿ

ಎ.ಸಿ.ರಾಜು; ಲೋಕೋಪಯೋಗಿ

ಎರವಲು ಸೇವೆಯ ಅಧಿಕಾರಿಗಳು (5 ವರ್ಷಗಳಿಗಿಂತ ಹೆಚ್ಚಿನ ಅವಧಿಗೆ)

ಅಧಿಕಾರಿಗಳು; ಸಂಖ್ಯೆ

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು; 12

ಸಹಾಯಕ ನಿರ್ದೇಶಕ (ನಗರ ಯೋಜನೆ); 1

ಸಹಾಯಕ ಎಂಜಿನಿಯರ್‌ಗಳು; 68

ಕಿರಿಯ ಎಂಜಿನಿಯರ್‌ಗಳು; 28

ಪರಿಸರ ಎಂಜಿನಿಯರ್‌ಗಳು; 2

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !