ಹೈದರಾಬಾದ್: ನಾಗಾರ್ಜುನ ನಾಯಕನಾಗಿ ಅಭಿನಯಿಸುತ್ತಿರುವ 'ಓಂ ನಮೋ ವೆಂಕಟೇಶಾಯ' ತೆಲುಗು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ನಾಯಕಿ ಪ್ರಗ್ಯಾ ಜೈಸ್ವಾಲ್ ಬರೋಬ್ಬರಿ 14 ಕೆಜಿ ಬಂಗಾರದ ಲೆಹೆಂಗಾ ಧರಿಸಿದ್ದು, ಫಸ್ಟ್ ಲುಕ್ನಲ್ಲಿ ಪ್ರಗ್ಯಾ ಬಂಗಾರದ ಚೆಲುವೆಯಾಗಿ ಮಿಂಚಿದ್ದಾರೆ.
ಸಿನಿಮಾದ ಹಾಡೊಂದರಲ್ಲಿ ನಾಯಕಿ ಈ ಲೆಹೆಂಗಾ ಧರಿಸಿದ್ದು, ಇದು ಅಪ್ಪಟ ಬಂಗಾರದಿಂದ ಮಾಡಿದ ಲೆಹೆಂಗಾ ಎಂದು ನಾಗಾರ್ಜುನ ಟ್ವೀಟ್ ಮಾಡಿದ್ದಾರೆ .
ರಾಘವೇಂದ್ರ ರಾವ್ ನಿರ್ದೇಶನದ ಓಂ ನಮೋ ವೆಂಕಟೇಶಾಯ ಚಿತ್ರ ಭಕ್ತಿ ಪ್ರಧಾನ ಚಿತ್ರವಾಗಿದ್ದು, ಪ್ರಗ್ಯಾ ಜೈಸ್ವಾಲ್ ಮತ್ತು ಅನುಷ್ಕಾ ಶೆಟ್ಟಿ ನಾಯಕಿಯರಾಗಿದ್ದಾರೆ.
ವೆಂಕಟೇಶ್ವರ ದೇವರ ಭಕ್ತನಾದ ಹಾತಿ ರಾಮ್ ಬಾಬಾ ಅವರ ಜೀವನಾಧರಿತ ಕತೆ ಇದಾಗಿದ್ದು, ಮುಂದಿನ ವರ್ಷ ತೆರೆಕಾಣಲಿದೆ.