ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Cinema News: ಶೂಟಿಂಗ್ ಅಖಾಡದಲ್ಲಿ ‘ಅಧಿಪತ್ರ’

Published 6 ಡಿಸೆಂಬರ್ 2023, 17:48 IST
Last Updated 6 ಡಿಸೆಂಬರ್ 2023, 17:48 IST
ಅಕ್ಷರ ಗಾತ್ರ

‘ಬಿಗ್‌ಬಾಸ್‌’ ವಿಜೇತ ರೂಪೇಶ್ ಶೆಟ್ಟಿ ನಟನೆಯ ‘ಅಧಿಪತ್ರ’ ಸಿನಿಮಾದ ಶೂಟಿಂಗ್‌ ಭರದಿಂದ ಸಾಗಿದೆ. ಚಿತ್ರತಂಡ ಸದ್ಯ ಕುಂದಾಪುರದ ಕೆರಾಡಿ ಭಾಗದಲ್ಲಿ ಚಿತ್ರೀಕರಣ ನಡೆಸುತ್ತಿದೆ. ಈಗಾಗಲೇ ಎರಡು ವಾರಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಪೊಲೀಸ್‌ ಅಧಿಕಾರಿಯಾಗಿ ರೂಪೇಶ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ತುಳು ಸಿನಿಮಾರಂಗದಿಂದ ಚಂದನವನಕ್ಕೆ ಕಾಲಿಡುತ್ತಿರುವ ರೂಪೇಶ್‌, ಸಿನಿಮಾದ ನಾನಾ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ನಟನಾಗಿ ಮತ್ತು ನಿರ್ದೇಶಕನಾಗಿ ಅವರು ತುಳು ಚಿತ್ರರಂಗದಲ್ಲಿ ಮಿಂಚಿದ್ದಾರೆ. ತುಳುವಿನ ‘ಸರ್ಕಸ್‌’ ಅವರಿಗೆ ಖ್ಯಾತಿ ತಂದ ಸಿನಿಮಾ. ‘ಡೇಂಜರ್ ಝೋನ್’, ‘ನಿಶ್ಶಬ್ದ-2’, ‘ಅನುಷ್ಕಾ’, ‘ಮಂಕು ಭಾಯ್‌ ಫಾಕ್ಸಿ ರಾಣಿ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿರುವ ರೂಪೇಶ್‌ ಇದೀಗ ಹೊಸ ಪ್ರಾಜೆಕ್ಟ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದಲ್ಲಿ ರೂಪೇಶ್‌ಗೆ ನಾಯಕಿಯಾಗಿ ‘ಬೃಹತಿ’ ಎಂಬ ಪಾತ್ರದಲ್ಲಿ ನಿರೂಪಕಿ ಜಾಹ್ನವಿ ನಟಿಸಿದ್ದು, ಇದು ಅವರ ಚೊಚ್ಚಲ ಸಿನಿಮಾ. 

ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇರುವ ಚಯನ್ ಶೆಟ್ಟಿ, ‘ಅಧಿಪತ್ರ’ ಚಿತ್ರದ ಮೂಲಕ ನಿರ್ದೇಶಕರಾಗಿದ್ದಾರೆ. ಕೆ.ಆರ್. ಸಿನಿಕಂಬೈನ್ಸ್ ಬ್ಯಾನರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿದೆ ಎಂದಿದೆ ಚಿತ್ರತಂಡ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT