ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊನ್ನಿಯಿನ್ ಸೆಲ್ವಂ’ ಚಿತ್ರದ ಫೋಟೊ ವೈರಲ್: ರಾಣಿಯಂತೆ ಕಾಣುತ್ತಿರುವ ಐಶ್ವರ್ಯ ರೈ

Last Updated 25 ಆಗಸ್ಟ್ 2021, 6:41 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಐಶ್ವರ್ಯ ರೈ ಬಚ್ಚನ್, ಬಹು ದಿನಗಳ ಬಳಿಕ ಮಣಿರತ್ನಂ ನಿರ್ದೇಶನದ ‘ಪೊನ್ನಿಯಿನ್ ಸೆಲ್ವನ್‌’ಚಿತ್ರಕ್ಕ ಬಣ್ಣ ಹಚ್ಚಿರುವುದು ನಮಗೆಲ್ಲ ತಿಳಿದೇ ಇದೆ. ಇದೀಗ, ಚಿತ್ರದ ಸೆಟ್‌ನಿಂದ ಚಿತ್ರವೊಂದು ಹೊರಬಿದ್ದಿದ್ದು ಭಾರೀ ವೈರಲ್ ಆಗುತ್ತಿದೆ.

ಚಿತ್ರದ ಫೋಟೊವೊಂದು ಐಶ್ವರ್ಯ ರೈ ಬಚ್ಚನ್ ಅವರ ಸಾಮಾಜಿಕ ಜಾಲತಾಣದ ಫ್ಯಾನ್ ಪೇಜ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಫೋಟೊದಲ್ಲಿ ನಟಿಯು ಕೆಂಪು ಬಣ್ಣದ ಉಡುಗೆಯಲ್ಲಿ ಮಹಾರಾಣಿಯಂತೆ ಕಾಣುತ್ತಿದ್ದಾರೆ.

ಇತ್ತೀಚೆಗೆ ನಟಿ ಐಶ್ವರ್ಯ ರೈ, ಪುದುಚೇರಿಯಲ್ಲಿ ‘ಪೊನ್ನಿಯಿನ್ ಸೆಲ್ವನ್‌’ನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಚಿತ್ರದಲ್ಲಿ ವಿಕ್ರಮ್, ಕಾರ್ತಿ, ತ್ರಿಷಾ ಕೃಷ್ಣನ್, ಪ್ರಕಾಶ್ ರಾಜ್, ಜಯರಾಮ್, ಜಯಂ ರವಿ ಮತ್ತು ಐಶ್ವರ್ಯ ಲಕ್ಷ್ಮಿ ಸೇರಿದಂತೆ ಇತರರ ತಾರಾಗಣವಿದೆ. ಲೈಕಾ ಪ್ರೊಡಕ್ಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದೆ

ಕಳೆದ ತಿಂಗಳು, ಐಶ್ವರ್ಯ ರೈ ಬಚ್ಚನ್ ತನ್ನ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ನಲ್ಲಿ ‘ಪೊನ್ನಿಯನ್ ಸೆಲ್ವನ್‌’ನ ಮೊದಲ ಪೋಸ್ಟರ್ ಅನ್ನು ಹಂಚಿಕೊಳ್ಳುವ ಮೂಲಕ ಚಿತ್ರದಲ್ಲಿ ನಟಿಸುತ್ತಿರುವುದನ್ನು ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT