ಈ ಕಾರಣಕ್ಕೆ ಮತ್ತೆ ಸುದ್ದಿಯಾದ ಬಾಲಯ್ಯ..!

7

ಈ ಕಾರಣಕ್ಕೆ ಮತ್ತೆ ಸುದ್ದಿಯಾದ ಬಾಲಯ್ಯ..!

Published:
Updated:
Deccan Herald

ತೆಲಗು ಚಿತ್ರನಟ ಹಾಗೂ ಹಿಂದೂಪುರ ಶಾಸಕ ನಂದಮೂರಿ ಬಾಲಕೃಷ್ಣ ಅವರು ಸಿನಿಮಾವಷ್ಟೇ ಅಲ್ಲ, ವಿವಾದಗಳಿಂದಲೂ  ಸುದ್ದಿಯಾಗುತ್ತಿದ್ದರು. ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಅಯ್ಯೋ ಮತ್ತೆ ಯಾವ ವಿವಾದವನ್ನು ಬಾಲಯ್ಯ ಮೈಮೇಲೆ ಎಳೆದುಕೊಂಡರಪ್ಪ ಅಂತೀರಾ. ಅಭಿಮಾನಿಗಳು ಚಿಂತೆ ಪಡುವುದು ಬೇಡ. ಒಳ್ಳೆಯ ವಿಚಾರವೊಂದಕ್ಕೆ ಬಾಲಯ್ಯ ಈ ಬಾರಿ ಸುದ್ದಿಯಾಗಿದ್ದಾರೆ.

ಎನ್‌ಟಿಆರ್ ಬಯೋಪಿಕ್ ಕತೆಯನ್ನಾಧರಿಸಿದ ‘ಎನ್‌ಟಿಆರ್ ಕಥಾನಾಯಕುಡು’ ಸಿನಿಮಾದಲ್ಲಿ ನಟ ಬಾಲಕೃಷ್ಣ ನಟಿಸುತ್ತಿದ್ದಾರೆ. ಅದರ ಚಿತ್ರೀಕರಣವು ಈಚೆಗೆ ಹಂಸಾಲದೇವಿ ಪ್ರದೇಶದಲ್ಲಿ ನಡೆಯುತ್ತಿತ್ತು. ಆ ಬಗ್ಗೆ ತಿಳಿದ ಕ್ಯಾನ್ಸರ್ ಪೀಡಿತ ವೃದ್ಧ, ಅಲ್ಲಿಗೆ ಹೋಗಿದ್ದರು.

ನಾನು ನಿಮ್ಮ ಅಭಿಮಾನಿ ಎಂದು ಬಾಲಯ್ಯ ಅವರನ್ನು ಭೇಟಿ ಮಾಡಿದ ಆ ವೃದ್ಧ, ‘ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೊಡಿಸಲು ನನ್ನ ಬಳಿ ಹಣವಿಲ್ಲ. ಇದರಿಂದಾಗಿ ತುಂಬಾ ಕಷ್ಟದಲ್ಲಿದ್ದೇನೆ’ ಎಂದು ಅಳಲನ್ನು ತೋಡಿಕೊಂಡು ಸಹಾಯಕ್ಕಾಗಿ ಗೋಗರೆದಿದ್ದಾರೆ.

ವೃದ್ಧನ ಪರಿಸ್ಥಿತಿ ಕಂಡು ಮರುಕಪಟ್ಟ ಬಾಲಯ್ಯ, ‘ಹೈದರಾಬಾದ್‌ನಲ್ಲಿರುವ ‘ಬಸವತಾರಕಂ ಕ್ಯಾನ್ಸರ್ ಹಾಸ್ಪಿಟಲ್‌’ನ ಸಿಬ್ಬಂದಿಗೆ ಕರೆ ಮಾಡಿ, ‘ವೃದ್ಧನೊಬ್ಬನನ್ನು ಕಳುಹಿಸಿಕೊಡುತ್ತಿದ್ದೇನೆ. ಅವರು ನನ್ನ ಅಭಿಮಾನಿ. ಅವರಿಗೆ ಉಚಿತವಾಗಿ ಗುಣಮಟ್ಟದ ಚಿಕಿತ್ಸೆ ನೀಡಿ’ ಎಂದು ಸೂಚಿಸಿದ್ದಾರೆ. ಅದಕ್ಕೆ ಪ್ರತಿಫಲವಾಗಿ ಆ ವೃದ್ಧ, ಬಾಲಯ್ಯ ಅವರ ಕಾಲಿಗೆ ನಮಸ್ಕಾರ ಮಾಡಿ ಕೃತಜ್ಞತೆ ಸಲ್ಲಿಸಿದ್ದಾರೆ.

ಬಾಲಯ್ಯ ಅವರ ಕಾಲಿಗೆ ವೃದ್ಧ ನಮಸ್ಕಾರ ಮಾಡುತ್ತಿರುವಾಗಲೇ ಸ್ಥಳದಲ್ಲಿದ್ದ ಸಾರ್ವಜನಿಕನೊಬ್ಬ ಫೋಟೊಗಳನ್ನು ಸೆರೆಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಅವು ಹೆಚ್ಚು ವೈರಲ್ ಆಗಿದ್ದು, ಬಾಲಯ್ಯ ಅವರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ. ಕೆಲವರು, ‘ಸದಾ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ಬಾಲಯ್ಯ ಅವರ ಇನ್ನೊಂದು ಮುಖವಿದು’ ಕಾಮೆಂಟ್ ಮಾಡಿದ್ದಾರೆ.

ಅಭಿಮಾನಿಗಳೊಂದಿಗೆ ಅನುಚಿತವಾಗಿ ವರ್ತಿಸಿದಲ್ಲದೇ ಅವರ ಮೇಲೆ ಹಲ್ಲೆ ಮಾಡಿ ಬಾಲಯ್ಯ ಸುದ್ದಿಯಾಗಿದ್ದರು. ಕಮ್ಮಂನಲ್ಲಿ ಈಚೆಗೆ ಅವರು ನಡೆಸಿದ ರೋಡ್ ಷೊ ವೇಳೆ ಅಭಿಮಾನಗಳಿಗೆ ಥಳಿಸಿ ಟೀಕೆಗೆ ಒಳಗಾಗಿದ್ದರು. ಆ ಸಂಬಂಧ ಬಾಲಯ್ಯ ಅವರ ಚಿತ್ರಗಳಿದ್ದ ಫ್ಲೆಕ್ಸ್‌ಗಳನ್ನು ಸುಟ್ಟು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !