ಬೆಲ್‌ ಬಾಟಂಗೆ ಭರ್ಜರಿ ಯಶಸ್ಸು

ಬುಧವಾರ, ಮೇ 22, 2019
32 °C

ಬೆಲ್‌ ಬಾಟಂಗೆ ಭರ್ಜರಿ ಯಶಸ್ಸು

Published:
Updated:
Prajavani

ರಿಷಬ್‌ ಶೆಟ್ಟಿ ನಾಯಕ ನಟನಾಗಿ ಅಭಿನಯಿಸಿರುವ, ಜಯತೀರ್ಥ ನಿರ್ದೇಶನದ ‘ಬೆಲ್‌ ಬಾಟಂ’ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಚಿತ್ರ ನಿರ್ಮಾಣಕ್ಕೆ ಹಾಕಿರುವ ದುಡ್ಡು ಮೊದಲ ವಾರದಲ್ಲೇ ನಿರ್ಮಾಪಕರ ಜೇಬು ಸೇರಿದೆ.

‘ಎರಡನೇ ವಾರದಲ್ಲಿ ರಾಜ್ಯದ ಇನ್ನಷ್ಟು ಚಿತ್ರಮಂದಿರಗಳಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲು ವಿತರಕರು ಮುಂದಾಗಿದ್ದಾರೆ. ಜೊತೆಗೆ ವಿದೇಶಗಳಲ್ಲೂ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ಮಾರ್ಚ್‌ ತಿಂಗಳ ಮೊದಲ ವಾರದಿಂದ ಯುರೋಪ್‌ನ ರಾಷ್ಟ್ರಗಳಲ್ಲೂ ‘ಬೆಲ್‌ ಬಾಟಂ’ ಬಿಡುಗಡೆ ಕಾಣಲಿದೆ’ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ಪ್ರಮೋದ್‌ ಶೆಟ್ಟಿ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಚಿತ್ರವು ನಿರೀಕ್ಷೆಗೂ ಮೀರಿ ಕಲೆಕ್ಷನ್‌ ಮಾಡಿದೆ. ಟಿ.ವಿ. ರೈಟ್ಸ್‌ ಸಹ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದೆ. ಮುಂದಿನ ಕೆಲವು ವಾರಗಳ ಕಾಲ ಚಿತ್ರ ಓಡುವ ಲಕ್ಷಣ ಕಾಣಿಸುತ್ತಿದೆ’ ಎಂದು ಪ್ರಮೋದ್‌ ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದ ಯಶಸ್ಸಿನಿಂದ ಹಿಗ್ಗಿರುವ ನಿರ್ದೇಶಕ ಜಯತೀರ್ಥ, ‘ಎಲ್ಲ ವಯೋಮಾನದವರೂ ಈ ಚಿತ್ರವನ್ನು ಆಸ್ವಾದಿಸುತ್ತಿದ್ದಾರೆ. ಯುವಕರು 80ರ ದಶಕದ ಚಿತ್ರಣಗಳನ್ನು ಇಷ್ಟಪಡುತ್ತಿದ್ದರೆ ಮಧ್ಯ ವಯಸ್ಸು ದಾಟಿರುವವರು ತಾವು ಯುವಕರಾಗಿದ್ದಾಗಿನ ಕಾಲವನ್ನು ನೆನಪಿಸಿಕೊಂಡು ಹಿಗ್ಗುತ್ತಿದ್ದಾರೆ’ ಎಂದರು.

ನಾಯಕ ರಿಷಬ್‌ ಶಟ್ಟಿ, ಕಥೆಗಾರ ದಯಾನಂದ್‌, ಕಲಾವಿದರಾದ ಶಿವಮಣಿ, ಪಿ.ಡಿ. ಸತೀಶ್‌, ಸುಜಯ್‌ ಶಾಸ್ತ್ರಿ, ವಸ್ತ್ರವಿನ್ಯಾಸಕಿ ಪ್ರಗತಿ ಮತ್ತಿತರರು ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !