ಮತ್ತೆ ಬಂತು ಟೇಕಿಟ್‌ಈಸಿ ಊರ್ವಸಿ

7

ಮತ್ತೆ ಬಂತು ಟೇಕಿಟ್‌ಈಸಿ ಊರ್ವಸಿ

Published:
Updated:
Deccan Herald

ಊರ್ವಸಿ ಅಂದೊಡನೆ ಟೇಕಿಟ್‌ ಈಸಿ ಪಾಲಿಸಿ ಹಾಡು ನೆನಪಾಗದೇ ಇರದು. 28 ವರ್ಷಗಳೇ ಕಳೆದುಹೋಗಿವೆ. ಆ ಹಾಡು, ನೃತ್ಯದ ಸೊಬಗು, ಪಾರದರ್ಶಕ ಬಸ್‌ ಯಾವುದರ ಚರಿಸ್ಮಾವೂ ಕಡಿಮೆಯಾಗಿಲ್ಲ. ಪ್ರಭುದೇವ ಹಾಕಿದ್ದ ಜಾಳುಜಾಳು ಪ್ಯಾಂಟು ಬ್ಯಾಗಿ ಪ್ಯಾಂಟ್‌ ಹೆಸರಿನಲ್ಲಿ ಜನಪ್ರಿಯವಾಗಿತ್ತು.

ಎ.ಆರ್‌. ರೆಹಮಾನ್‌ ಸಂಗೀತ ನಿರ್ದೇಶನದ ಈ ಹಾಡು ಮತ್ತೊಮ್ಮೆ ತೆರೆಗಪ್ಪಳಿಸಲಿದೆ. ಯೋಯೋ ಹನಿಸಿಂಗ್‌ ಈ ಹಾಡನ್ನು ಮರು ಕಂಪೋಸ್‌ ಮಾಡುತ್ತಿದ್ದಾರೆ. ಆದರೆ ಪಲ್ಲವಿಗೇನೂ ಧಕ್ಕೆ ತರುತ್ತಿಲ್ಲ. ಊರ್ವಸಿ ಹಾಡು, ಕಾದಲನ್‌ (ತಮಿಳು), ಪ್ರೇಮಿಕುಡು (ತೆಲುಗು) ಹಾಗೂ ಹಮ್‌ಸೆ ಹೈ ಮುಖಾಬಲಾ (ಹಿಂದಿ)ಗೆ ಡಬ್‌ ಆಗಿತ್ತು. ಶಂಕರ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಭುದೇವ ಕೋರಿಯೋಗ್ರಫರ್‌ನಿಂದ ನಾಯಕನಟನಾಗಿ ಬಡ್ತಿ ಪಡೆದ ಚಿತ್ರವದು.

ಈಗ ತೆಲುಗು ಚಿತ್ರ ‘ಅರ್ಜುನ್‌ ರೆಡ್ಡಿಯ ಹಿಂದಿ ಅವತರಣಿಕೆಯಲ್ಲಿ ಮತ್ತೊಮ್ಮೆ ಊರ್ವಸಿ ಮಿಂಚಲಿದ್ದಾಳೆ’ ಬಾಲಿವುಡ್ ಚಾಕಲೇಟ್ ಬಾಯ್‌ ಶಾಹಿದ್ ಕಪೂರ್‌ ನಟಿಸುತ್ತಿದ್ದಾರೆ.

ಈ ಹಾಡಿನಲ್ಲಿ ‘ಭರತ್ ಅನೆ ನೇನು’ ಚಿತ್ರದ ಮೂಲಕ ಖ್ಯಾತಿ ಗಳಿಸಿದ ನಟಿ ಕಿಯಾರ ಅಡ್ವಾಣಿ ಕುಣಿಯಲಿದ್ದಾರೆ. ‘ಈ ಹಾಡಿನ ಊರ್ವಶಿ... ಊರ್ವಶಿ... ಪಲ್ಲವಿಯನ್ನು ಹಾಗೆಯೇ ಉಳಿಸಿಕೊಳ್ಳುತ್ತೇವೆ. ಆದರೆ ಚರಣಗಳನ್ನು ಬದಲಾಯಿಸುತ್ತೇವೆ. ಹಾಡಿನಲ್ಲಿ ಶಾಹಿದ್ ಮತ್ತು ಕಿಯಾರಾ ಕುಣಿಯಲಿದ್ದಾರೆ’ ಎಂದು ಕೊರಿಯೊಗ್ರಾಫರ್ ಸಂಜಯ್‌ ಶೆಟ್ಟಿ ತಿಳಿಸಿದ್ದಾರೆ. 

‘ನನಗೆ ಪ್ರಭುದೇವಾ ಅವರ ನೃತ್ಯವೆಂದರೆ ತುಂಬಾ ಇಷ್ಟ. ಅವರು ನಟಿಸಿದ್ದ ಹಾಡಿನಲ್ಲಿ ನನಗೆ ಅವಕಾಶ ದೊರೆತಿರುವುದು ಸಂತೋಷದ ವಿಷಯ. ಶಾಹಿದ್‌ ಅವರೂ ತುಂಬಾ ಚೆನ್ನಾಗಿ ನೃತ್ಯ ಮಾಡುತ್ತಾರೆ. ಅವರೊಂದಿಗೆ ಕುಣಿಯುವುದು ತುಂಬಾ ಕಷ್ಟ’ ಎನ್ನುತ್ತಾರೆ ನಟಿ ಕಿಯಾರ ಅಡ್ವಾಣಿ.

‘ಊರ್ವಶಿ’ ಹಾಡನ್ನು ಅದ್ದೂರಿಯಾಗಿ ಚಿತ್ರಿಸಿದ್ದ ನಿರ್ದೇಶಕ ಶಂಕರ್ ಅವರು, ಮೊದಲ ಬಾರಿಗೆ ಪಾರದರ್ಶಕ ಬಸ್‌ ಬಳಕೆ ಮಾಡಿದ್ದರು. ಹಾಡಿನಲ್ಲಿ ಖ್ಯಾತ ಹಾಸ್ಯ ನಟ ವಡಿವೇಲು ಅವರೂ ಪ್ರಭುದೇವಾ ಅವರೊಂದಿಗೆ ಹೆಜ್ಜೆ ಹಾಕಿದ್ದರು.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !