ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಪೂಜಾ ಹೆಗ್ಡೆಗೆ ಕೋವಿಡ್‌ ಸೋಂಕು

Last Updated 26 ಏಪ್ರಿಲ್ 2021, 10:33 IST
ಅಕ್ಷರ ಗಾತ್ರ

ತೆಲುಗು ನಟ ಪ್ರಭಾಸ್‌ ಅವರಿಗೆ ‘ರಾಧೇಶ್ಯಾಂ’ ಚಿತ್ರದಲ್ಲಿ ಜೋಡಿಯಾಗಿರುವ ಬಹುಭಾಷಾ ನಟಿ ಪೂಜಾ ಹೆಗ್ಡೆ ಅವರಿಗೆ ಕೊರೊನಾ ಸೋಂಕು ತಗುಲಿದೆ.

ಈ ಬಗ್ಗೆ ಟ್ವಿಟರ್‌ನಲ್ಲಿ ಹೇಳಿಕೊಂಡಿರುವ ಅವರು, ನನಗೆ ಕೋವಿಡ್‌ ಆವರಿಸಿದೆ. ಮನೆಯಲ್ಲಿ ಕ್ವಾರಂಟೈನ್‌ನಲ್ಲಿ ಇದ್ದೇನೆ. ನನ್ನ ಜೊತೆ ಇತ್ತೀಚೆಗೆ ಸಂಪರ್ಕಕ್ಕೆ ಬಂದ ಎಲ್ಲರೂ ಪರೀಕ್ಷಿಸಿಕೊಳ್ಳಿ. ನಾನು ಚೇತರಿಸಿಕೊಳ್ಳುತ್ತೀದ್ದೇನೆ. ಎಲ್ಲರೂ ಮನೆಯಲ್ಲಿರಿ. ಕ್ಷೇಮವಾಗಿರಿ. ಕಾಳಜಿ ವಹಿಸಿ ಎಂದಿದ್ದಾರೆ.

ಪೂಜಾ ಅವರಿಗೆ ತಮಿಳು, ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಸಾಕಷ್ಟು ಬೇಡಿಕೆ ಇದೆ. ಅಖಿಲ್ಅಕ್ಕಿನೇನಿ ನಟನೆಯ ‘ಮೋಸ್ಟ್ ಎಲಿಜೆಬಲ್ ಬ್ಯಾಚುಲರ್’ ಚಿತ್ರದಲ್ಲಿ ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್ ಪಾತ್ರದಲ್ಲಿ ಅವರು ಇದ್ದಾರೆ. ಚಿರಂಜೀವಿ ಅಭಿನಯದ ಆಚಾರ್ಯ ಸಿನಿಮಾದಲ್ಲಿ ರಾಮ್ ಚರಣ್ ಅವರಿಗೆ ಜೋಡಿಯಾಗಿ ಪೂಜಾ ನಟಿಸುತ್ತಿದ್ದಾರೆ. ಅದು ನೀಲಾಂಬರಿ ಎಂಬ ಅತಿಥಿ ಪಾತ್ರವಾಗಿದೆ.

ಕೈಯಲ್ಲಿ ಹತ್ತಾರು ಚಿತ್ರಗಳಿದ್ದರೂ ಸದ್ಯ ಪೂಜಾ ಅವರ ಸಿನಿಚಟುವಟಿಕೆಗಳಿಗೆ ತಾತ್ಕಾಲಿಕ ಬ್ರೇಕ್‌ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT