ಶುಕ್ರವಾರ, ಆಗಸ್ಟ್ 14, 2020
27 °C

ಸುಶಾಂತ್ ಸಿಂಗ್ ರಜಪೂತ್ 'ನೇಣಿಗೆ ಬಳಸಿದ್ದ ಬಟ್ಟೆಯ ಸಾಮರ್ಥ್ಯ ಪರೀಕ್ಷೆ'

ಪಿಟಿಐ Updated:

ಅಕ್ಷರ ಗಾತ್ರ : | |

prajavani

ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‍ ನೇಣು ಬಿಗಿದುಕೊಳ್ಳಲು ಬಳಸಿದ್ದ ಬಟ್ಟೆ, ನಟನ ತೂಕಕ್ಕೆ ಸಮನಾದ ಭಾರ ಹೊರಲು ಶಕ್ತವಾಗಿತ್ತೇ ಎಂಬುದನ್ನು ಪರೀಕ್ಷೆಗೊಳಪಡಿಸಲು ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ.

ತನಿಖೆಯ ಭಾಗವಾಗಿ ಈ ಪರೀಕ್ಷೆ ನಡೆಯಲಿದೆ. ತನಿಖಾಧಿಕಾರಿಗಳ ಪ್ರಕಾರ, ಸುಶಾಂತ್‍ ತಾನು ನೇಣು ಹಾಕಿಕೊಳ್ಳಲು ಹತ್ತಿಯಿಂದ ತಯಾರಿಸಲಾಗಿದ್ದ, ರಾತ್ರಿ ದಿರಿಸಿನ, ಹಸಿರು ಬಣ್ಣದ ಗೌನ್‍ ಬಳಸಿದ್ದರು.

ಆದರೆ, ಶವದ ಬಳಿ ಯಾವುದೇ ಮರಣಪತ್ರ ದೊರೆತಿರಲಿಲ್ಲ. ಈ ಗೌನ್‍ ಅನ್ನೂ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬರಲು ಕನಿಷ್ಠ ಮೂರು ದಿನ ಬೇಕು ಎಂದು ಪೊಲೀಸ್‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾವಿನ ನಿಖರ ಕಾರಣ ತಿಳಿಯುವ ಸಲುವಾಗಿ ನಟನ ಕತ್ತಿನ ಸುತ್ತ ಮೂಡಿದ್ದ ಗುರುತುಗಳು ಹಾಗೂ ಗೌನ್‍ನ ಭಾರ ಹೊರುವ ಸಾಮರ್ಥ್ಯ ಅಂದಾಜಿಸಲಾಗುತ್ತಿದೆ. ಪರೀಕ್ಷೆಯಿಂದ ಈ ಗೌನ್‌ಗೆ ನಟನ ತೂಕವಾದ 80 ಕೆ.ಜಿ ಭಾರ ಹೊರುವ ಸಾಮರ್ಥ್ಯ ಇದೆಯೇ ಎಂಬುದು ಗೊತ್ತಾಗಲಿದೆ. ಇದರಿಂದ ಸಾವಿನ ಹಿಂದೆ ಬೇರೆ ಷಡ್ಯಂತ್ರವಿತ್ತೇ ಎಂದೂ ತಿಳಿಯಬಹುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು