ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್‌ ಪ್ರಕರಣ: ತೆಲುಗು ನಟ ರಾಜ್‌ ತರುಣ್‌ ಪ್ರೇಯಸಿ ಬಂಧನ

Published 31 ಜನವರಿ 2024, 13:57 IST
Last Updated 31 ಜನವರಿ 2024, 13:57 IST
ಅಕ್ಷರ ಗಾತ್ರ

ಹೈದರಾಬಾದ್‌: ಟಾಲಿವುಡ್‌ ನಟ ರಾಜ್‌ ತರುಣ್‌ ಅವರ ಪ್ರೇಯಸಿಯನ್ನು ಡ್ರಗ್ಸ್‌ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ಹೇಳಿದ್ದಾರೆ. 

ಆದರೆ ಪೊಲೀಸರು ಆ ಯುವತಿಯ ಹೆಸರನ್ನು ಪೊಲೀಸರು ಗೋಪ್ಯವಾಗಿ ಇಟ್ಟಿದ್ದಾರೆ. 

ಯುವತಿ ಗೋವಾದಿಂದ ಡ್ರಗ್ಸ್‌ ತಂದಿದ್ದರು. ಅದನ್ನು ಪೊಲೀಸರು ವಶಪಡಿಸಿದ್ದಾರೆ. ವಿಚಾರಣೆ ವೇಳೆ ನಾನು ನಟ ರಾಜ್‌ ತರುಣ್‌ ಪ್ರೇಯಸಿ ಎಂದು ಹೇಳಿರುವುದರಿಂದ ಆ ನಟನನ್ನು ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. 

ಉಯ್ಯಾಲ-ಜಂಪಾಲ’, ‘ಕುಮಾರಿ 21ಎಫ್’, ‘ಸಿನಿಮಾ ಚೂಪಿಸ್ತ ಮಾವ’ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ರಾಜ್ ತರುಣ್ ನಟಿಸಿದ್ದಾರೆ.

ಈ ಹಿಂದೆ ಟಾಲಿವುಡ್‌ನಲ್ಲಿ ನಟ ರವಿತೇಜ ಸಹೋದರ, ನಿರ್ದೇಶಕ ಪುರಿ ಜಗನ್ನಾಥ್, ನಟಿ ಚಾರ್ಮಿ, ಮುಮೈಥ್ ಖಾನ್ ಸೇರಿದಂತೆ ಕೆಲ ನಿರ್ಮಾಪಕರ ಹೆಸರುಗಳು ಕೇಳಿಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT