ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬಾರಿ ವಾಚ್ ಪತ್ತೆ: ವಿಮಾನ ನಿಲ್ದಾಣದಲ್ಲೇ ₹ 6.88 ಲಕ್ಷ ತೆರಿಗೆ ಕಟ್ಟಿದ ಶಾರುಕ್

Last Updated 12 ನವೆಂಬರ್ 2022, 14:38 IST
ಅಕ್ಷರ ಗಾತ್ರ

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ₹6.88 ಲಕ್ಷ ಕಸ್ಟಮ್ಸ್ ಸುಂಕ ಕಟ್ಟಿದ್ದಾರೆ. ದುಬೈನಿಂದ ಖಾಸಗಿ ಜೆಟ್‌ನಲ್ಲಿ ಆಗಮಿಸಿದ ಶಾರುಕ್ ಮತ್ತು ಅವರ ತಂಡದ ಐವರು ಸದಸ್ಯರ ಬ್ಯಾಗ್‌ನಲ್ಲಿ ₹ 18 ಲಕ್ಷ ಮೌಲ್ಯದ ದುಬಾರಿ ಕೈಗಡಿಯಾರಗಳು ಪತ್ತೆಯಾದ ಹಿನ್ನೆಲೆಯಲ್ಲಿ ಸುಂಕ ವಸೂಲಿ ಮಾಡಲಾಗಿದೆ.

ಶಾರುಕ್ ಅವರ ಪರವಾಗಿ ಅವರ ಬಾಡಿಗಾರ್ಡ್ ರವಿಶಂಕರ್ ಸಿಂಗ್ ಸುಂಕವನ್ನು ಕಟ್ಟಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿ ತಿಳಿಸಿದ್ದಾರೆ. ತಡರಾತ್ರಿ 12.30ರ ಸುಮಾರಿಗೆ ಶಾರುಕ್ ಖಾನ್ ಅವರು, ತಮ್ಮ ಮ್ಯಾನೇಜರ್ ಪೂಜಾ ಡಲ್ಡಾನಿಯಾ, ಸಿಂಗ್ ಮತ್ತು ಇತರರ ಜೊತೆ ಚಾರ್ಟರ್ಡ್ ವಿಮಾನದಲ್ಲಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಬ್ಯಾಗೇಜ್ ಪರಿಶೀಲನೆ ವೇಳೆ ಕಸ್ಟಮ್ಸ್ ಅಧಿಕಾರಿಗಳು 6 ಬ್ಯಾಗ್‌ಗಳ ಪೈಕಿ ಎರಡರಲ್ಲಿ 6 ಐಷಾರಾಮಿ ಕೈಗಡಿಯಾರಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಬಳಿಕ, ವಾಚ್‌ಗಳ ಮೌಲ್ಯ ₹17.86 ಲಕ್ಷ ಎಂದು ಮೌಲ್ಯಮಾಪನ ಮಾಡಲಾಗಿದ್ದು, 6.88 ಲಕ್ಷ ಕಸ್ಟಮ್ಸ್ ಸುಂಕ ವಸೂಲಿ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT