ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘45’ ಚಿತ್ರದಲ್ಲಿ ಭರ್ಜರಿ ಗ್ರಾಫಿಕ್ಸ್‌

Published 16 ಮೇ 2024, 16:10 IST
Last Updated 16 ಮೇ 2024, 16:10 IST
ಅಕ್ಷರ ಗಾತ್ರ

ಶಿವರಾಜ್‌ಕುಮಾರ್, ಉಪೇಂದ್ರ, ರಾಜ್ ಬಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ‘45’ ಚಿತ್ರ ಸೆಟ್ಟೇರಿ ವರ್ಷ ಕಳೆದಿದೆ. ಈ ವರ್ಷ ಚಿತ್ರ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಈ ಹಿಂದೆ ಘೋಷಿಸಿತ್ತು. ಆದರೆ ಚಿತ್ರದಲ್ಲಿ ಗ್ರಾಫಿಕ್ಸ್‌ನ ಭಾಗ ಹೆಚ್ಚಿರುವುದರಿಂದ ಈ ವರ್ಷ ಚಿತ್ರ ತೆರೆಗೆ ಬರುವುದು ಕಷ್ಟ ಎನ್ನುತ್ತಿದೆ ಚಿತ್ರ ತಂಡದ ಮೂಲಗಳು. 

ಸೂರಜ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಎಂ ರಮೇಶ್ ರೆಡ್ಡಿ ಚಿತ್ರವನ್ನು ನಿರ್ಮಿಸುತ್ತಿದ್ದು, ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನಿರ್ದೇಶನವಿದೆ. ‘ಶಿವರಾಜ್‌ಕುಮಾರ್‌ ಚುನಾವಣೆ ಪ್ರಚಾರಕ್ಕೆ ತೆರೆಳಿರುವುದರಿಂದ ಚಿತ್ರೀಕರಣ ನಿಂತಿತ್ತು. ಈಗಾಗಲೇ ನಾಲ್ಕು ಹಂತಗಳ ಚಿತ್ರೀಕರಣ ಪೂರ್ಣಗೊಂಡಿದ್ದು, ಇನ್ನೆರಡು ಹಂತದ ಚಿತ್ರೀಕರಣ ಬಾಕಿಯಿದೆ. ಎಲ್ಲ ನಟರ ಡೇಟ್‌ ಹೊಂದಾಣಿಕೆ ಸಮಸ್ಯೆಯಿಂದ ಚಿತ್ರೀಕರಣ ಅಂದುಕೊಂಡಷ್ಟು ವೇಗವಾಗಿ ನಡೆದಿಲ್ಲ. ಚಿತ್ರದಲ್ಲಿ ಸಾಕಷ್ಟು ಗ್ರಾಫಿಕ್ಸ್‌ ಇದ್ದು, ಬೆಂಗಳೂರು, ಹೈದ್ರಾಬಾದ್‌, ಲಂಡನ್‌ಗಳಲ್ಲಿ ಇದರ ಕೆಲಸ ನಡೆಯುತ್ತಿದೆ’ ಎನ್ನುತ್ತಾರೆ ನಿರ್ಮಾಪಕ ರಮೇಶ್‌ ರೆಡ್ಡಿ. 

‘ಮನುಷ್ಯನ ಸಾವಿನ ನಂತರದ ಹಾಸ್ಯಮಯ ಕಥಾ ಹಂದರವನ್ನು ಈ ಚಿತ್ರ ಹೊಂದಿದ್ದು, ಸ್ವರ್ಗ, ನರಕಗಳ ಗ್ರಾಫಿಕ್ಸ್‌ ಲೋಕವೇ ಚಿತ್ರದಲ್ಲಿದೆ’ ಎನ್ನುತ್ತಿದೆ ಚಿತ್ರತಂಡ. ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದು, ಸತ್ಯ ಹೆಗಡೆ ಛಾಯಾಚಿತ್ರಗ್ರಹಣವಿದೆ.

ಬೆಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಕನ್ನಡವಲ್ಲದೆ ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲೂ ಮೂಡಿಬರುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT