ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಗೆ ಬರಲು ಸಜ್ಜಾದ ‘ಇತ್ಯಾದಿ’

Published 26 ಏಪ್ರಿಲ್ 2024, 1:22 IST
Last Updated 26 ಏಪ್ರಿಲ್ 2024, 1:22 IST
ಅಕ್ಷರ ಗಾತ್ರ

ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ ಹೊಸಬರ ‘ಇತ್ಯಾದಿ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಡಿ.ಯೋಗರಾಜ್ ನಿರ್ದೇಶನದ ಚಿತ್ರಕ್ಕೆ ಮಹೇಂದ್ರನ್, ಶ್ರೀನಿವಾಸ್ ಮತ್ತು ನೀಲಕಂಠನ್ ಬಂಡವಾಳ ಹೂಡಿದ್ದಾರೆ.

‘ಮರ್ಡರ್ ಮಿಸ್ಟ್ರಿ, ಕ್ರೈಂ, ಥ್ರಿಲ್ಲರ್ ಕಥೆಯನ್ನು ಒಳಗೊಂಡಿದೆ. ಶೇಕಡ 75ರಷ್ಟು ಕಾಲ್ಪನಿಕ ಕಥೆಯಾಗಿದ್ದು, ಮಿಕ್ಕಿದ್ದು ಸತ್ಯ ಘಟನೆ. ಶೃಂಗೇರಿ ಬಳಿ ಇರುವ ಬಿಳಿಗದ್ದೆ ಎಂಬ ಊರಿನಲ್ಲಿ ಕಲ್ಲು ದೇವರು ಇರುತ್ತದೆ. ಅದಕ್ಕೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕೆಂಬ ಆಸೆಯಾಗಿರುತ್ತದೆ. ಅದು ಕೊನೆಗೂ ಕಲ್ಲಾಗೇ ಹುಟ್ಟುತ್ತದೆ. ಊರಿನಲ್ಲಿರುವ ಗರ್ಭಣಿಯರು ಆ ಜಾಗಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ಆದರೆ ಅಲ್ಲಿಗೆ ಹೋದವರೆಲ್ಲಾ ಕೊಲೆಯಾಗುತ್ತಿರುತ್ತಾರೆ. ಇದನ್ನು ಮಾಡುವವರು ಯಾರು? ಯಾಕೆ? ಎಂಬುದನ್ನು ಕುತೂಹಲಕಾರಿಯಾಗಿ ತೋರಿಸಲಾಗಿದೆ’ ಎಂದರು ನಿರ್ದೇಶಕರು.

ನಾಯಕ ಸಚಿನ್‌ಗೆ ಡಾ.ಸೌಮ್ಯ ಜೋಡಿಯಾಗಿದ್ದಾರೆ. ಮಹೇಶ್.ಬಿ, ಅರ್ಚನಾ ಉದಯಕುಮಾರ್‌ ಮುಂತಾದವರು ನಟಿಸಿದ್ದಾರೆ. ಶೃಂಗೇರಿ, ಚಿಕ್ಕಮಗಳೂರು, ಆಗುಂಬೆ ಸುತ್ತಮುತ್ತಲು ಚಿತ್ರೀಕರಣಗೊಂಡಿದೆ. ಎರಡು ಹಾಡುಗಳಿಗೆ ಪುಣ್ಯೇಶ್ ಸಂಗೀತ ಸಂಯೋಜಿಸಿದ್ದು, ಭರಣಿ ಡಿ.ಯೋಗರಾಜ್-ಲಕ್ಷೀಕಾಂತ್ ಛಾಯಾಚಿತ್ರಗ್ರಹಣವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT