ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಮ್‌ ಮಿನಿಸ್ಟರ್‌ ಎಂಟ್ರಿಗೆ ಸಿದ್ಧ

Last Updated 29 ನವೆಂಬರ್ 2018, 19:30 IST
ಅಕ್ಷರ ಗಾತ್ರ

‘ರಿಯಲ್‌ ಸ್ಟಾರ್‌’ ಉಪೇಂದ್ರ ಅವರು ರಿಯಲ್‌ ಲೈಫ್‌ನಲ್ಲಿ ಹೊಸ ಪಕ್ಷ ಕಟ್ಟಿದ್ದೂ ಆಯಿತು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಎಲ್ಲಾ ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದಾಗಿ ಘೋಷಿಸಿದ್ದು ಈಗ ಹಳೆಯ ಸುದ್ದಿ. ಆದರೆ, ರೀಲ್ ಲೈಫ್‌ನಲ್ಲಿ ಅವರು ‘ಹೋಮ್‌ ಮಿನಿಸ್ಟರ್‌’ ಆಗಿ ಜನರ ಮುಂದೆ ಬರಲು ಸಜ್ಜಾಗಿದ್ದಾರೆ. ಈ ಚಿತ್ರದ ಶೀರ್ಷಿಕೆ ಕೇಳಿದರೆ ಇದು ರಾಜಕೀಯಕ್ಕೆ ಸಂಬಂಧಿಸಿದ ಚಿತ್ರ ಎನಿಸುವುದು ಸಹಜ. ಆದರೆ, ಅಸಲಿ ಕಥೆ ಅದಲ್ಲ. ಸಂಸಾರದಲ್ಲಿ ಹೆಂಡತಿಯೇ ‘ಹೋಮ್ ಮಿನಿಸ್ಟರ್’ ಎಂಬ ಪರಿಕಲ್ಪನೆ ಮೇಲೆ ಕಥೆ ಹೊಸೆಯಲಾಗಿದೆಯಂತೆ. ಸುಜಯ್ ಕೆ. ಶ್ರೀಹರಿ ಇದರ ನಿರ್ದೇಶಕರು. ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆದರೆ, ಚಿತ್ರತಂಡ ಇನ್ನೂ ದಿನಾಂಕ ನಿಗದಿಪಡಿಸಿಲ್ಲ.

ಈ ಸಿನಿಮಾದಲ್ಲಿ ಉಪೇಂದ್ರ ಅವರದು ಟೆಕಿ ಪಾತ್ರ. ಸುಂದರ ಬೆಡಗಿಯೊಬ್ಬಳ ಸುತ್ತ ಚಿತ್ರಕಥೆ ಸಾಗುತ್ತದೆಯಂತೆ. ಎಲ್ಲಾ ಪಾತ್ರಗಳು ಇಂದಿನ ದಿನಮಾನಕ್ಕೆ ಪ್ರಸ್ತುತವಾಗಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ನಟಿ ವೇದಿಕಾ ಮಹಿಳಾ ಪ್ರಧಾನ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಮೊಹ್ಮಮದ್‌ ಘಿಬ್ರನ್ ಸಂಗೀತ ಸಂಯೋಜಿಸಿದ್ದಾರೆ.ಶ್ರೀಹರಿ ಮತ್ತು ಪೂರ್ಣ ನಾಯ್ಡು ಬಂಡವಾಳ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT