ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಧೈರ್ಯಂ’ಗೆ ಧ್ರುವ ಸರ್ಜಾ ಸಾಥ್‌ 

Published 12 ಫೆಬ್ರುವರಿ 2024, 0:17 IST
Last Updated 12 ಫೆಬ್ರುವರಿ 2024, 0:17 IST
ಅಕ್ಷರ ಗಾತ್ರ

ವಿವಾನ್.ಕೆ ಮತ್ತು ಅನುಷಾ ರೈ ಜೋಡಿಯಾಗಿ ನಟಿಸಿರುವ ‘ಧೈರ್ಯಂ ಸರ್ವತ್ರ ಸಾಧನಂ’ ಚಿತ್ರದ ಟ್ರೇಲರ್‌ ಇತ್ತೀಗಷ್ಟೇ ಬಿಡುಗಡೆಗೊಂಡಿದೆ. ನಟ ಧ್ರುವ ಸರ್ಜಾ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಎ.ಆರ್.ಸಾಯಿರಾಮ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವ ಚಿತ್ರಕ್ಕೆ ಎ.ಪಿ.ಪ್ರೊಡಕ್ಷನ್ ಅಡಿಯಲ್ಲಿ ಆನಂದ್ ಬಾಬು.ಜಿ ಬಂಡವಾಳ ಹೂಡಿದ್ದಾರೆ.

‘ಹಲವು ಭಾಗಗಳು ಸೇರಿ ಒಂದು ಉತ್ಪನ್ನ ಸಿದ್ಧವಾಗುತ್ತದೆ. ಅದೇ ರೀತಿ ಹಲವರು ಸೇರಿಕೊಂಡು ಚಿತ್ರ ಸಿದ್ಧಗೊಂಡಿದೆ. ಇದೊಂದು ಸತ್ಯ ಘಟನೆ ಆಧಾರಿತ ಚಿತ್ರ. ಯಾರ ಕಥೆ, ಎಲ್ಲಿ ನಡೆದಿದ್ದು? ಎಂಬುದನ್ನು ಚಿತ್ರದ ಕೊನೆಯಲ್ಲಿ ಆ ವ್ಯಕ್ತಿಗಳ ಭಾವಚಿತ್ರ ಹಾಗೂ ಪೂರ್ಣ ವಿವರದೊಂದಿಗೆ ತೋರಿಸಿದ್ದೇವೆ. ಆ ವ್ಯಕ್ತಿಗಳ ಬಳಿ ಅನುಮತಿ ಪಡೆದು, ಘಟನೆ ನಡೆದ ಸ್ಥಳಗಳಲ್ಲಿಯೇ ಚಿತ್ರೀಕರಣ ನಡೆಸಲಾಗಿದೆ’ ಎಂದು ನಿರ್ದೇಶಕರು ಹೇಳಿದರು.

ಯಶ್‌ಶೆಟ್ಟಿ, ಬಲರಾಜವಾಡಿ, ಚಕ್ರವರ್ತಿ ಚಂದ್ರಚೂಡ್ ಮೊದಲಾದವರು ತಾರಾಗಣದಲ್ಲಿದ್ದಾರೆ. ಐದು ಹಾಡುಗಳಿದ್ದು, ಜ್ಯೂಡಾಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ರವಿಕುಮಾರ್ ಸನಾ ಛಾಯಾಗ್ರಹಣ, ಶ್ರೀಕಾಂತ್ ಸಂಕಲನ ಚಿತ್ರಕ್ಕಿದೆ. ತುಮಕೂರು, ಕೊರಟಗೆರೆ, ದೇವರಾಯನದುರ್ಗ ಮೊದಲಾದೆಡೆ ಚಿತ್ರೀಕರಣಗೊಂಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT