ಮುಂಬೈ: ದೇಶದ 36 ಭಾಷೆಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿದ್ದರೂ, ಲತಾ ಮಂಗೇಶ್ವರ್ ಅವರ ಹೆಸರು ಹೇಳಿದಾಕ್ಷಣ ಬಹುತೇಕರು ಥಟ್ಟನೇ ಗುನುಗುವ ಕೆಲವು ಹಾಡುಗಳಿವೆ. ಅನೇಕ ಹಾಡುಗಳು ಅವರ ಅಸ್ಮಿತೆಯಾಗಿ ನಿಲ್ಲುತ್ತವೆ.

‘ಕೆಲ ಹಾಡುಗಳು ನನ್ನ ಗೀತ ಗಾಯನ ಯಾನವನ್ನೇ ವಿವರಿಸುತ್ತವೆ. ಆ ಹಾಡುಗಳೇ ನನಗೆ ಅಸ್ಮಿತೆ ನೀಡಿವೆ’ ಎಂದು ಲತಾ ಮಂಗೇಶ್ವರ್ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ಪಿಟಿಐಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

‘ಗೀತೆ ರಚನೆಕಾರ ಗುಲ್ಜಾರ್ ನಿರ್ದೇಶನದ ‘ಕಿನಾರಾ’ (1977) ಚಿತ್ರದಲ್ಲಿ ಅವರೇ ಬರೆದ ‘ನಾಮ್ ಗುಮ್ ಜಾಯೇಗಾ...’ ಗೀತೆಯ ‘ಮೇರಿ ಆವಾಜ್ ಹಿ ಪೆಹಚಾನ್ ಹೈ’ ಎಂಬ ಸಾಲುಗಳು ಸಂಗೀತ ಕ್ಷೇತ್ರದ ನನ್ನ ಪಯಣವನ್ನು ಪ್ರತಿಬಿಂಬಿಸುತ್ತದೆ’ ಎಂದು ಅವರು ಸಂದರ್ಶನದಲ್ಲಿ ಹೇಳಿದ್ದರು.

‘ದಿಲ್ ಅಪ್ನಾ ಔರ್ ಪ್ರೀತ್ ಪರಾಯಿ’ (1960) ಚಿತ್ರದ ‘ಅಜೀಬ್ ದಾಸ್ತಾ ಹೈ ಏ..’ ಈಗಲೂ ಜನರ ನಾಲಿಗೆಯಲ್ಲಿ ನಲಿದಾಡುತ್ತಿರುವ ಗೀತೆ.

ಒಂಟಿತನದ ಬೇಗುದಿಯನ್ನು ತೆರೆದಿಡುವ ‘ಲಗ್ ಜಾ ಗಲೆ..’, ಪ್ರೇಮ– ಅದಕ್ಕಾಗಿನ ಹೋರಾಟವನ್ನು ಏಕಕಾಲಕ್ಕೆ ಕಟ್ಟಿಕೊಡುವ ‘ಪ್ಯಾರ್ ಕಿಯಾ ತೊ ಡರ್ನಾ ಕ್ಯಾ..’, ಪ್ರೀತಿಯೊಂದಿಗೆ ಬೆಸೆದ ತುಂಟತನವನ್ನು ಹೇಳುವ ‘ಬಾಹೋಂ ಮೆ ಚಲೆ ಆ..’ ಹಾಗೂ ಬಿಡುಗಡೆಗೆ ಹಾತೊರೆಯುವುದು, ಆಕಾಂಕ್ಷೆಯನ್ನು ವಿವರಿಸುವ ‘ಆಜ್ ಫಿರ್ ಜೀನೆ ಕಿ ತಮನ್ನಾ ಹೈ..’ – ಇವು ಈಗಲೂ, ಎಂದೆಂದಿಗೂ ಚಲನಚಿತ್ರ ಗೀತೆ ಪ್ರಿಯರನ್ನು ಕಾಡುವ, ಅವರು ಹಾಡುವ ಗೀತೆಗಳಾಗಿವೆ.

ಇವನ್ನೂ ಓದಿ...

ಲತಾ ದೀದಿ ನಿಧನ: ಶಿವಾಜಿ ಪಾರ್ಕ್ನಲ್ಲಿ ಇಂದು ಸಂಜೆ ಅಂತಿಮ ಸಂಸ್ಕಾರ

ನೆಹರೂ ಕಣ್ಣಲ್ಲಿ ಕಂಬನಿ ತರಿಸಿದ ಲತಾ ಹಾಡಿದ 'ಏ ಮೇರೆ ವತನ್ ಕೇ ಲೋಗೋ'

ಲತಾ ಮಂಗೇಶ್ಕರ್ | ಸಂಗೀತ ಸರಸ್ವತಿಯ ಕ್ರಿಕೆಟ್ ಪ್ರೀತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.