ಗುರುವಾರ , ಜನವರಿ 21, 2021
22 °C

ಜ. 15ಕ್ಕೆ ‘ಮಾಂಜ್ರಾ’ ಚಲನಚಿತ್ರ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಬೆಳಗಾವಿ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ನೈಜ ಘಟನೆ ಆಧಾರಿತ ‘ಮಾಂಜ್ರಾ’ ಚಲನಚಿತ್ರ ಜ. 15ರಂದು ಬಿಡುಗಡೆಯಾಗಲಿದೆ.

‘ಶ್ರೀ ದುರ್ಗಾ ಪರಮೇಶ್ವರಿ ಸಿನಿ ಪ್ರೊಡಕ್ಷನ್ಸ್‌ ಬ್ಯಾನರ್ ಅಡಿಯಲ್ಲಿ ₹ 8 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಅಪೂರ್ವ, ನಿತ್ಯಾ, ರಂಜನ್ ಪಣಗುತ್ತಿ ಅಭಿನಯಿಸಿರುವ ಈ ಚಿತ್ರದಲ್ಲಿ ಕನ್ನಡದ ಜೊತಗೆ ಮರಾಠಿ ಭಾಷೆಯನ್ನೂ ಅಲ್ಲಲ್ಲಿ ಬಳಸಲಾಗಿದೆ’ ಎಂದು ಚಿತ್ರದ ನಿರ್ದೇಶಕ ಮುತ್ತುರಾಜ ರೆಡ್ಡಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಈ ಚಿತ್ರದ ಪ್ರಚಾರಾರ್ಥ ರಾಜ್ಯದಾದ್ಯಂತ ‘ಮಾಂಜ್ರಾ ರಾಕ್‌ಸ್ಟಾರ್’ ಹೆಸರಿನಲ್ಲಿ ಡಿ. 6ರಂದು ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ನೃತ್ಯ, ಹಾಡುಗಾರಿಕೆ, ಏಕಪಾತ್ರಾಭಿನಯ ಹಾಗೂ ಮಿಮಿಕ್ರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮುತ್ತುರಾಜ ರೆಡ್ಡಿ ತಿಳಿಸಿದರು.

‘ದಾವಣಗೆರೆ ಸೇರಿ 5 ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ವಿಜೇತರಿಗೆ ಪ್ರಥಮ ಬಹುಮಾನವಾಗಿ ₹ 2 ಲಕ್ಷ, ದ್ವಿತೀಯ ಬಹುಮಾನ ₹ 1 ಲಕ್ಷ ಹಾಗೂ ತೃತೀಯ ಬಹುಮಾನವಾಗಿ ₹ 50 ಸಾವಿರ ನೀಡಲಾಗುವುದು. ಕಾರ್ಯಕ್ರಮಕ್ಕೆ ₹ 200 ಪ್ರವೇಶ ದರವಿದ್ದು, ಸ್ಪರ್ಧಿಗಳಿಗೆ ಎರಡು ಮಾಂಜ್ರಾ ಸಿನಿಮಾಗಳ ಟಿಕೆಟ್‌ಗಳನ್ನು ಉಚಿತವಾಗಿ ನೀಡಲಾಗುವುದು’ ಎಂದು ಹೇಳಿದರು.

ಮಾಹಿತಿಗೆ ಮೊ: 9110495858 ಸಂಪರ್ಕಿಸಬಹುದು.

ಚಿತ್ರದ ನಾಯಕ ರಂಜಿತ್‌ಸಿಂಗ್, ಬಾಲನಟಿ ನಮನಾ, ಗೀತಾ ಹಾಗೂ ಮಾರುತಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.