ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರೆಗೆ ಬರಲು ಸಜ್ಜಾದ ‘ಮಂಡ್ಯ ಹೈದ’

Published 15 ಜನವರಿ 2024, 19:16 IST
Last Updated 15 ಜನವರಿ 2024, 19:16 IST
ಅಕ್ಷರ ಗಾತ್ರ

ಅಭಯ್ ಚಂದ್ರಶೇಖರ್, ಭೂಮಿಕಾ ಜೋಡಿಯಾಗಿ ನಟಿಸಿರುವ ‘ಮಂಡ್ಯ ಹೈದ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ವಿ.ಶ್ರೀಕಾಂತ್ ಆ್ಯಕ್ಷನ್‌-ಕಟ್ ಹೇಳಿದ್ದು, ಚಂದ್ರಶೇಖರ್ ಚಿತ್ರವನ್ನು ನಿರ್ಮಿಸಿದ್ದಾರೆ.

‘ಮಂಡ್ಯ ಹೈದನೊಬ್ಬ ತನ್ನ ಪ್ರೀತಿಯನ್ನು ಉಳಿಸಿಕೊಳ್ಳಲು ಏನೇನೆಲ್ಲ ಸಾಹಸ ಮಾಡಿದ ಎಂಬುದನ್ನು ಹೇಳುವ ಚಿತ್ರವಿದು. ಸೆನ್ಸಾರ್ ಪ್ರಕ್ರಿಯೆ ಮುಗಿದಿದ್ದು, ಯು/ಎ ಪ್ರಮಾಣ ಪತ್ರ ಲಭಿಸಿದೆ. ಶೀಘ್ರದಲ್ಲಿ ಬಿಡುಗಡೆ ದಿನಾಂಕ ಘೋಷಿಸುತ್ತೇವೆ’ ಎಂದಿದ್ದಾರೆ ನಿರ್ದೇಶಕ ವಿ.ಶ್ರೀಕಾಂತ್.

ಚಿತ್ರದಲ್ಲಿ ಐದು ಹಾಡುಗಳಿದ್ದು, ಸುರೇಂದ್ರನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಛಾಯಾಚಿತ್ರಗ್ರಾಹಕರಾಗಿ ಮನುಗೌಡ ಕೆಲಸ ಮಾಡಿದ್ದಾರೆ. ಬಲ ರಾಜವಾಡಿ, ಸುನಂದ ಹಾಗೂ ನಿರ್ಮಾಪಕ ಚಂದ್ರಶೇಖರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT