ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಕಜ್ಜಿಯ ಕನಸುಗಳು ಕಾದಂಬರಿಗೂ 50 ವರ್ಷ, ಸಿನಿಮಾಗೂ 50 ದಿನಗಳ ಸಂಭ್ರಮ

Last Updated 17 ಜನವರಿ 2020, 9:32 IST
ಅಕ್ಷರ ಗಾತ್ರ

‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ 50 ವರ್ಷ ತುಂಬಿರುವ ಬೆನ್ನಲ್ಲೇ ಈ ಕಾದಂಬರಿಯನ್ನು ಆಧರಿಸಿ ಪಿ.ಶೇಷಾದ್ರಿ ನಿರ್ಮಿಸಿರುವ ‘ಮೂಕಜ್ಜಿಯ ಕನಸುಗಳು’ ಚಿತ್ರಕ್ಕೂ ಈಗ 50 ದಿನಗಳನ್ನು ಪೂರೈಸಿದ ಸಂಭ್ರಮ.

ರಾಜ್ಯದಲ್ಲಿ 50 ದಿನ ಪೂರೈಸಿ ಮುನ್ನಡೆಯುತ್ತಿರುವ ಈ ಚಿತ್ರವನ್ನು ಫೆಬ್ರುವರಿಎರಡನೇ ವಾರದಿಂದ ಅಮೆರಿಕದ ಹತ್ತು ಕೇಂದ್ರಗಳಲ್ಲಿ ಬಿಡುಗಡೆ ಮಾಡುತ್ತಿರುವುದಾಗಿಚಿತ್ರದ ನಿರ್ದೇಶ ಪಿ.ಶೇಷಾದ್ರಿ ತಿಳಿಸಿದ್ದಾರೆ.

ರಾಷ್ಟ್ರೀಯ ಚಿತ್ರ ಭಂಡಾರಕ್ಕೆ ಆಯ್ಕೆಯಾಗಿರುವ ಈ ಚಿತ್ರವು, ಬೆಂಗಳೂರು11ನೇ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ (ಫೆಬ್ರುವರಿ 2019) ಕನ್ನಡ ಚಲನಚಿತ್ರ ವಿಭಾಗದ ಸ್ಪರ್ಧೆ ಪ್ರಥಮ ಬಹುಮಾನ ಪಡೆದಿತ್ತು. ಟೊರೊಂಟೊ ಐಎಫ್‌ಎಫ್‌ಎಸ್‌ಎ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶನ ಕಂಡಿತ್ತು. 2018ನೇ ಸಾಲಿನ ರಾಜ್ಯ ಪ್ರಶಸ್ತಿಯು ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲಿ ಸಿಕ್ಕಿದೆ.

‘ಇಂದು ‘ಮೂಕಜ್ಜಿ’ ಐವತ್ತನೇ ದಿನದ ಅಭೂತಪೂರ್ವ ಪ್ರದರ್ಶನವನ್ನು ಪೂರೈಸುತ್ತಿದ್ದಾಳೆ! ಇದಕ್ಕೆ ಕಾರಣರಾದ, ಸಹೃದಯ ಪ್ರೇಕ್ಷಕರಿಗೆ, ಚಿತ್ರಮಂದಿರ ಒದಗಿಸಿದವರಿಗೆ, ಪ್ರತ್ಯಕ್ಷ, ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮೂಕಜ್ಜಿ ತಂಡ ತಲೆಬಾಗಿ ವಂದಿಸುತ್ತಿದೆ. ಫೆಬ್ರುವರಿ ಎರಡನೇ ವಾರದಿಂದ ಅಮೆರಿಕದ ಹತ್ತು ಕೇಂದ್ರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವುದು ಮತ್ತೊಂದು ಸಂಭ್ರಮದ ಸಂಗತಿ. ಇದಕ್ಕಿಂತ ನಾವಿನ್ನೇನು ನಿರೀಕ್ಷಿಸಲು ಸಾಧ್ಯ? ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು’ ಎಂದುಶೇಷಾದ್ರಿ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಗಾಯಕಿ ಹಾಗೂ ಕಲಾವಿದೆ ಬಿ. ಜಯಶ್ರೀ ಅವರು ಮೂಕಜ್ಜಿಯಾಗಿ ಅಭಿನಯಿಸಿದ್ದಾರೆ.ಚಿತ್ರದ ಪಾತ್ರಗಳು ‘ಕುಂದಾಪ್ರ ಕನ್ನಡ’ದಲ್ಲಿ ಸಂಭಾಷಣೆ ನಡೆಸುತ್ತವೆ. ಈ ಸಿನಿಮಾಕ್ಕೆ ಭಾಸ್ಕರ್ ಛಾಯಾಗ್ರಹಣ, ಕೆಂಪರಾಜು ಸಂಕಲನ, ಪ್ರವೀಣ್ ಗೋಡ್ಖಿಂಡಿ ಅವರ ಸಂಗೀತ ಸಂಯೋಜನೆ ಇದೆ.

ಶೇಷಾದ್ರಿ ಸೇರಿ ಒಂಬತ್ತು ಜನ ಈ ಚಿತ್ರದ ನಿರ್ಮಾಣಕ್ಕೆ ಹಣ ಹೂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT