ಭರ್ಜರಿ ಹಾಸ್ಯದ ‘ಪ್ರೇಮಕಥ’

ಗುರುವಾರ , ಮಾರ್ಚ್ 21, 2019
25 °C

ಭರ್ಜರಿ ಹಾಸ್ಯದ ‘ಪ್ರೇಮಕಥ’

Published:
Updated:
Prajavani

ದುಲ್ಕರ್‌ ಸಲ್ಮಾನ್‌ ನಾಯಕನಟನಾಗಿರುವ ‘ಒರು ಯಮಂಡನ್‌ ಪ್ರೇಮಕಥ’ ಮಾಲಿವುಡ್‌ ಸಿನಿಪ್ರಿಯರಿಗೆ ಭರ್ಜರಿ ಮನರಂಜನೆ ನೀಡಲು ಬರಲಿದೆ. ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ಗೆ ಭಾರಿ ಪ‍್ರತಿಕ್ರಿಯೆ ವ್ಯಕ್ತವಾಗಿರುವುದು ಚಿತ್ರದ ಬಗೆಗಿನ ನಿರೀಕ್ಷೆಯನ್ನು ಸಾಬೀತು ಮಾಡಿದೆ. ಫಸ್ಟ್‌ ಲುಕ್ ಪೋಸ್ಟರ್‌ ಬಿಡುಗಡೆಯಾಗುತ್ತಲೇ ಸಾಮಾಜಿಕ ಮಾಧ್ಯಮಗಳಲ್ಲಿ ಲೈಕ್‌ ಮತ್ತು ಶೇರ್‌ ಆಗಲಾರಂಭಿಸಿದೆ. 

ದುಲ್ಕರ್‌, ಇಬ್ಬರು ನಾಯಕಿಯರೊಂದಿಗೆ ಡುಯೆಟ್‌ ಹಾಡಲಿದ್ದಾರೆ. ನಿಖಿಲಾ ವಿಮಲ್‌ ಮತ್ತು ಸಂಯುಕ್ತಾ ಮೆನನ್ ನಾಯಕನಟಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಒಂದೂವರೆ ವರ್ಷದ ಬಳಿಕ ಮಾಲಿವುಡ್‌ಗೆ ಮರಳಿರುವ ದುಲ್ಕರ್‌ಗೆ ತವರಿನ ಚಿತ್ರ ಅದ್ದೂರಿ ಸ್ವಾಗತವನ್ನೇ ನೀಡಿದೆ.

ಬಿ.ಸಿ. ನೌಫಾಲ್‌ ನಿರ್ದೇಶನದ ‘ಪ್ರೇಮಕಥ’ಕ್ಕೆ ಬಂಡವಾಳ ಹೂಡಿರುವುದು ಆಂಟೊ ಜೋಸೆಫ್‌ ಮತ್ತು ಸಿ.ಆರ್.ಸಲೀಂ. ಬಿಬಿನ್‌ ಜಾರ್ಜ್‌ ಮತ್ತು ವಿಷ್ಣು ಉನ್ನಿಕೃಷ್ಣನ್‌ ಸಂಭಾಷಣೆ ಬರೆದಿದ್ದಾರೆ. ಇದೇ ಜೋಡಿ ಸಂಭಾಷಣೆ ಬರೆದ ಅಮರ್‌ ಅಕ್ಬರ್‌ ಆ್ಯಂಟೊನಿ ಮತ್ತು ಕಟ್ಟಪಟ್ಟನಾಯಿಲೆ ಋತ್ವಿಕ್‌ ರೋಷನ್‌ ಸೂಪರ್‌ ಹಿಟ್‌ ಆಗಿತ್ತು. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !