ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಟ್ರಿಕ್ಸ್ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ

Last Updated 29 ಜನವರಿ 2020, 11:41 IST
ಅಕ್ಷರ ಗಾತ್ರ

‘ಮ್ಯಾಟ್ರಿಕ್ಸ್’ ಸರಣಿಯ ಸಿನಿಮಾದ ಪಾತ್ರವೊಂದರಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಅವರು ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಲಾಸ್ ಏಂಜಲಿಸ್‌ನಿಂದ ಬಂದಿದೆ.

ಜನಪ್ರಿಯ ನಟ ಕಿಯಾನು ರೀವ್ಸ್ ಅವರು ‘ಮ್ಯಾಟ್ರಿಕ್ಸ್ 4’ ಚಿತ್ರದಲ್ಲಿ ‘ನಿಯೊ’ ಪಾತ್ರದಲ್ಲಿ ತಮ್ಮ ಅಭಿಮಾನಿಗಳ ಮನ ರಂಜಿಸಲಿದ್ದಾರೆ. ಈ ಚಿತ್ರದಲ್ಲಿ ಪ್ರಿಯಾಂಕಾ ಅವರೂ ಒಂದು ಪಾತ್ರ ನಿಭಾಯಿಸುವ ಬಗ್ಗೆ ಅಂತಿಮ ಸುತ್ತಿನ ಮಾತುಕತೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.

ಆದರೆ, ಪ್ರಿಯಾಂಕಾ ಅವರು ನಿಭಾಯಿಸಲಿರುವ ಪಾತ್ರದ ಕುರಿತು ಹೆಚ್ಚಿನ ವಿವರಗಳನ್ನು ಗುಟ್ಟಾಗಿ ಇರಿಸಲಾಗಿದೆ. ಅಂದಹಾಗೆ, ಈ ಚಿತ್ರದ ಶೀರ್ಷಿಕೆ ಏನು ಎಂಬುದು ಇನ್ನಷ್ಟೇ ಅಂತಿಮ ಆಗಬೇಕಿದೆ. ಕೆರಿ–ಆ್ಯನ್ ಮಾಸ್ ಅವರು ‘ಟ್ರಿನಿಟಿ’ ಪಾತ್ರದಲ್ಲಿ, ಜೆಡಾ ಪಿಂಕೆಟ್ ಸ್ಮಿತ್ ಅವರು ‘ನಿಯೂಬಿ’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಮ್ಯಾಟ್ರಿಕ್ಸ್ ಸರಣಿಯ ಮೊದಲ ಸಿನಿಮಾ 1999ರಲ್ಲಿ ತೆರೆಗೆ ಬಂದಿತ್ತು. ಪ್ರಿಯಾಂಕಾ ಅವರು ಹಾಲಿವುಡ್‌ಗೆ ಅಪರಿಚಿತರೇನೂ ಅಲ್ಲ. ಅವರು ಶೀಘ್ರದಲ್ಲೇ, ನೆಟ್‌ಫ್ಲಿಕ್ಸ್‌ ಸರಣಿಯೊಂದರಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT