ಸೋಮವಾರ, ಆಗಸ್ಟ್ 8, 2022
25 °C

ಹಾಲಿಡೇ ಮೂಡ್‌ನಲ್ಲಿ ಪಿಗ್ಗಿ–ನಿಕ್: ಇನ್‌ಸ್ಟಾದಲ್ಲಿ ಹಾಟ್ ಚಿತ್ರಗಳ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಹಾಲಿ ಡೇ ಮೂಡ್‌ನಲ್ಲಿದ್ದಾರೆ. ಟ್ರೆಂಡಿ ಮತ್ತು ಹಾಟ್ ಉಡುಪುಗಳ ಮೂಲಕ ಬೀಚ್‌ನಲ್ಲಿ ತೆಗೆದ ಚಿತ್ರ ಮತ್ತು ವಿಡಿಯೊಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಗಮನ ಸೆಳೆದಿದ್ಧಾರೆ.

ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳಲ್ಲಿ ಪತಿ ಜೊತೆ ಕಳೆದ ಕ್ಷಣಗಳ ಚಿತ್ರಗಳನ್ನು  79.9 ಮಿಲಿಯನ್ ಅನುಯಾಯಿಗಳಿರುವ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಪ್ರವಾಸದ ಚಿತ್ರಗಳಿಗೆ  #islandgirl ಮತ್ತು #photodump ಎಂಬ ಹ್ಯಾಶ್‌ಟ್ಯಾಗ್‌ ಕೊಟ್ಟಿದ್ದಾರೆ. 

ಮೊದಲ ಚಿತ್ರದಲ್ಲಿ ಪ್ರಿಯಾಂಕಾ, ನಿಕ್ ಅವರ ಕೆನ್ನೆಗಳಿಗೆ ಚುಂಬಿಸುತ್ತಿದ್ದು, ದಂಪತಿಗಳು ವಿಹಾರ ನೌಕೆಯಲ್ಲಿ ಸಂತಸಪಡುತ್ತಿದ್ದಾರೆ.

ಸಮುದ್ರತೀರದಲ್ಲಿ ಓಟ, ಚುಟುಕು ನಿದ್ರೆ, ಸಮುದ್ರದಲ್ಲಿ ಈಜುವುದು, ಬೀಚ್‌ನಲ್ಲಿ ಎಳನೀರು ಸವಿಯುವುದು.. ಹೀಗೆ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಬಿಕಿನಿ, ಈಜುಡುಗೆಯಲ್ಲಿ ಪ್ರಿಯಾಂಕಾ ಮನಮೋಹಕವಾಗಿ ಕಾಣಿಸಿಕೊಂಡಿದ್ದಾರೆ.

ನೀಲಿ ಬಣ್ಣದ ಬಿಕಿನಿಯಲ್ಲಿ ಪ್ರಿಯಾಂಕಾ ಬೆಡ್ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಚಿತ್ರ ಅಭಿಮಾನಿಗಳ ಮೈಬಿಸಿ ಏರಿಸಿದೆ.

ಮತ್ತೊಂದು ಫೋಟೊದಲ್ಲಿ, ಪ್ರಿಯಾಂಕಾ ಅವರು ಹಳದಿ ಈಜುಡುಗೆಯಲ್ಲಿ ಓಡುತ್ತಿರುವ ಬೇವಾಚ್ ಕ್ಷಣ ಅಭಿಮಾನಿಗಳಿಗೆ ಇಷ್ಟವಾಗಿದ.

ಸಮುದ್ರದ ಮುಂದೆ ದಂಪತಿಯ ಹಾಟ್ ಚಿತ್ರಗಳು ಇನ್‌ಸ್ಟಾಗ್ರಾಮ್‌ನಲ್ಲಿ ಮತ್ತಷ್ಟು ಗಮನ ಸೆಳೆದಿವೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು