ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್‌–3’ ಚಿತ್ರದಲ್ಲಿ ರಣವೀರ್‌ ಸಿಂಗ್‌!

Published 9 ಆಗಸ್ಟ್ 2023, 9:11 IST
Last Updated 9 ಆಗಸ್ಟ್ 2023, 9:11 IST
ಅಕ್ಷರ ಗಾತ್ರ

ಮುಂಬೈ: ಫರ್ಹಾನ್ ಅಖ್ತರ್ ನಿರ್ದೇಶನದ ‘ಡಾನ್‌–3’ ಚಿತ್ರದಲ್ಲಿ ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಕಾಣಿಸಿಕೊಳ್ಳಲಿದ್ದಾರೆ.

ಈ ಸಂಬಂಧ ಎಕ್ಸೆಲ್‌ ಎಂಟರ್‌ಟೈನ್‌ಮೈಂಟ್‌ ನಿರ್ಮಾಣ ಸಂಸ್ಥೆ ವಿಡಿಯೊವೊಂದನ್ನು ಹಂಚಿಕೊಂಡು, ’ಡಾನ್‌–3 ಚಿತ್ರವು ಹೊಸ ಪ್ರಪಂಚ ಸೃಷ್ಟಿಸಲಿದೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದೆ.

ಡಾನ್ ಒಂದು ಮತ್ತು ಎರಡೂ ಭಾಗಗಳಲ್ಲಿ ಬಾಲಿವುಡ್‌ ಬಾದ್‌ಷಾ ಶಾರುಖ್‌ ಖಾನ್‌ ಅಭಿನಯಿಸಿದ್ದರು. ಆದರೆ ಇದೀಗ ರಣವೀರ್‌ ಸಿಂಗ್‌ ಸಿನಿ ಪ್ರೇಕ್ಷಕರ ಎದುರು ‘ಡಾನ್‌‘ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಬಾಲಿವುಡ್‌ ಸೂಪರ್‌ಸ್ಟಾರ್‌ ಅಮಿತಾಬ್ ಬಚ್ಚನ್‌ ನಟನೆಯ 1978ರ ಡಾನ್ ಚಿತ್ರದ ಅದೇ ಹೆಸರಿನ ಹಕ್ಕನ್ನು ಎಕ್ಸೆಲ್‌ ಎಂಟರ್‌ಟೈನ್‌ಮೈಂಟ್‌ ನಿರ್ಮಾಣ ಸಂಸ್ಥೆ ಪಡೆದುಕೊಂಡಿದೆ.

ಬಹುಮುಖ ಪ್ರತಿಭೆಯುಳ್ಳ ನಟ ರಣವೀರ್‌ ಸಿಂಗ್‌ ಅವರ ನಟನೆಯ ಮೂಲಕ ಡಾನ್‌ ಚಿತ್ರದ ಸರಣಿಯು ಹೊಸ ಆಯಾಮ ಪಡೆದುಕೊಳ್ಳಲಿದೆ ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ತಿಳಿಸಿದ್ದಾರೆ.

ಡಾನ್–3 ಚಿತ್ರಕ್ಕೆ ಪುಷ್ಕರ್ ಮತ್ತು ಗಾಯತ್ರಿ ಕಥೆ ಬರೆದಿದ್ದಾರೆ. ಶಂಕರ್ ಮಹಾದೇವನ್, ಎಹ್ಸಾನ್ ನೂರಾನಿ ಮತ್ತು ಲಾಯ್ ಮೆಂಡೋನ್ಸಾ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರ ಮೂಡಿಬರಲಿದೆ.

ಈ ಚಿತ್ರವು 2025ಕ್ಕೆ ತೆರೆ ಮೇಲೆ ಬರಲಿದೆ ಎಂದು ಚಿತ್ರತಂಡ ಹೇಳಿದೆ.

ಇತ್ತೀಚಿಗೆ ತೆರೆಕಂಡ ’ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಚಿತ್ರದಲ್ಲಿ ಆಲಿಯಾ ಭಟ್ ಜೊತೆಗೆ ರಣವೀರ್‌ ಸಿಂಗ್‌ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT