ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಛೂ ಮಂತರ್‌’ ಎಂದ ‘ಅವತಾರ ಪುರುಷ’

Published 12 ಮಾರ್ಚ್ 2024, 23:56 IST
Last Updated 12 ಮಾರ್ಚ್ 2024, 23:56 IST
ಅಕ್ಷರ ಗಾತ್ರ

‘ಅವತಾರ ಪುರುಷ’, ‘ಗುರು ಶಿಷ್ಯರು’ ಸಿನಿಮಾ ಬಳಿಕ ತೆರೆ ಮೇಲೆ ಮೋಡಿ ಮಾಡಲು ಸ್ಯಾಂಡಲ್‌ವುಡ್‌ನ ‘ಅಧ್ಯಕ್ಷ’ ಶರಣ್‌ ಮತ್ತೊಮ್ಮೆ ಬರುತ್ತಿದ್ದಾರೆ. ಶರಣ್ ಅಭಿನಯದ ‘ಅವತಾರ ಪುರುಷ–2’ ಮಾರ್ಚ್‌ 22ರಂದು ಹಾಗೂ ‘ಛೂ ಮಂತರ್’ ಸಿನಿಮಾಗಳು ಏಪ್ರಿಲ್‌ 5ರಂದು ತೆರೆಗೆ ಬರುತ್ತಿವೆ.

ಸಿಂಪಲ್‌ ಸುನಿ ನಿರ್ದೇಶನದ ‘ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ’ ಸಿನಿಮಾ 2022ರ ಮೇ 6ರಂದು ತೆರೆಕಂಡಿತ್ತು. ಇದೇ ಸಿನಿಮಾದ ಎರಡನೇ ಭಾಗ ‘ಅವತಾರ ಪುರುಷ–ತ್ರಿಶಂಕು ಪಯಣ’ ಮಾರ್ಚ್‌ 22ರಂದು ತೆರೆಕಾಣುತ್ತಿದೆ. ಚುಟು–ಚುಟು ಜೋಡಿ ಶರಣ್‌ ಹಾಗೂ ಆಶಿಕಾ ರಂಗನಾಥ್‌ ಅಭಿನಯದ ಈ ಸಿನಿಮಾದಲ್ಲಿ ಸಾಯಿಕುಮಾರ್‌, ಶ್ರೀನಗರ ಕಿಟ್ಟಿ ನಟಿಸಿದ್ದಾರೆ. ವಾಮಾಚಾರ, ಮಾಟ ಮಂತ್ರದ ಸುತ್ತ ಚಿತ್ರದ ಕಥೆ ಹೆಣೆಯಲಾಗಿದ್ದು, ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ನಿರ್ಮಾಣ ಮಾಡಿದ್ದಾರೆ.   

‘ಛೂ ಮಂತರ್‌’ ಸಿನಿಮಾದಲ್ಲಿ ಶರಣ್‌ಗೆ ಅದಿತಿ ಪ್ರಭುದೇವ ಹಾಗೂ ಮೇಘನಾ ಗಾಂವ್ಕರ್ ಜೋಡಿಯಾಗಿದ್ದು, ಸಿನಿಮಾವನ್ನು ತರುಣ್ ಸ್ಟುಡಿಯೋಸ್ ಲಾಂಛನದಲ್ಲಿ ತರುಣ್ ಶಿವಪ್ಪ ಹಾಗೂ ಮಾನಸ ತರುಣ್ ನಿರ್ಮಾಣ ಮಾಡಿದ್ದಾರೆ. ನವನೀತ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಟ್ರೇಲರ್‌ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದಿದೆ ಚಿತ್ರತಂಡ. ಇದೊಂದು ಹಾರರ್‌ ಜಾನರ್‌ ಸಿನಿಮಾವಾಗಿದ್ದು, ‘ಉಪಾಧ್ಯಕ್ಷ’ನಾಗಿ ತೆರೆ ಮೇಲೆ ಮಿಂಚಿರುವ ಚಿಕ್ಕಣ್ಣ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಹೀಗೆ ‘ಅಧ್ಯಕ್ಷ’ ಮತ್ತು ‘ಉಪಾಧ್ಯಕ್ಷ’ನ ಸಮ್ಮಿಲನವನ್ನು ಈ ಚಿತ್ರದಲ್ಲಿ ಕಾಣಬಹುದಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT