ಬುಧವಾರ, ನವೆಂಬರ್ 13, 2019
21 °C

ಮತ್ತೊಂದು ರಿಮೇಕ್‌ ಚಿತ್ರದಲ್ಲಿ ಶಾಹಿದ್‌

Published:
Updated:
Prajavani

ತೆಲುಗಿನ ಹಿಟ್ ಸಿನಿಮಾ ‘ಅರ್ಜುನ್‌ ರೆಡ್ಡಿ’ ರಿಮೇಕ್‌ ‘ಕಬೀರ್ ಸಿಂಗ್‌’ನಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶಾಹಿದ್ ಕಪೂರ್‌ ಮತ್ತೊಂದು ರಿಮೇಕ್‌ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ತೆಲುಗಿನ ‘ಜೆರ್ಸಿ’ ಸಿನಿಮಾ ಬಾಲಿವುಡ್‌ನಲ್ಲಿ ರಿಮೇಕ್ ಆಗಲಿದೆ ಎಂಬ ಸುದ್ದಿ ಇತ್ತೀಚೆಗೆ ಓಡಾಡುತ್ತಿತ್ತು. ಆದರೆ ಈ ಚಿತ್ರದಲ್ಲಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲಕ್ಕೆ ಈಗಷ್ಟೇ ತೆರೆ ಬಿದ್ದಿದೆ. ‘ಕಬೀರ್‌ ಸಿಂಗ್‌’ ಮೂಲಕ ಬಾಲಿವುಡ್‌ನಲ್ಲಿ ಮರುಜೀವ ಪಡೆದುಕೊಂಡಿರುವ ಶಾಹಿದ್ ಮೇಲೆ ಅಭಿಮಾನಿಗಳಿಗೆ ಈಗ ಹೆಚ್ಚಿನ ನಿರೀಕ್ಷೆ ಇದೆ. ಈ ಕಾರಣದಿಂದ ಮೂರು ತಿಂಗಳು ಬಿಡುವು ಪಡೆದುಕೊಂಡು ಅವರು ಸ್ಕ್ರಿಪ್ಟ್‌ ಒಪ್ಪಿದ್ದಾರೆ ಎಂದು ಮೂಲಗಳು ಹೇಳಿವೆ.

‘ಜೆರ್ಸಿ’ಯಲ್ಲಿ ನಾನಿ ಅಭಿನಯಿಸಿದ್ದರು. ಹಿಂದಿ ಸಿನಿಮಾವನ್ನೂ ಗೌತಮ್‌ ಅವರೇ ನಿರ್ದೇಶಿಸಲಿದ್ದಾರೆ.

‘ಹಿಂದಿ ಪ್ರೇಕ್ಷಕರಿಗಾಗಿ ನಾನು ಸಿನಿಮಾ ಮಾಡಲಿದ್ದೇನೆ. ನನ್ನ ಪ್ರಕಾರ, ಈ ಪಾತ್ರಕ್ಕೆ ಶಾಹಿದ್ ಅವರಿಗಿಂತ ಉತ್ತಮ ನಟ ಸಿಗಲಾರ. ಅವರು ತೆರೆ ಮೇಲೆ ಮ್ಯಾಜಿಕ್ ಮಾಡಲಿದ್ದಾರೆ’ ಎಂದು ಗೌತಮ್ ಹೇಳಿದ್ದಾರೆ.

ಹಿಂದಿ ರಿಮೇಕ್‌ ಚಿತ್ರವನ್ನು ಅಲ್ಲು ಅರವಿಂದ್‌, ಅಮನ್‌ ಗಿಲ್‌, ದಿಲ್ ರಾಜು ಅವರು ನಿರ್ಮಾಣ ಮಾಡಲಿದ್ದಾರೆ. 2020ರ ಆಗಸ್ಟ್ ತಿಂಗಳಿನಲ್ಲಿ ಈ ಸಿನಿಮಾ ತೆರೆಕಾಣಲಿದೆ ಎಂದು ಸಿನಿ ತಂಡ ಹೇಳಿದೆ.

 

ಪ್ರತಿಕ್ರಿಯಿಸಿ (+)