ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಟ್ಟೇರಿದ ‘ಸಿಂಹಾಸನ’

Published 10 ಜುಲೈ 2024, 13:23 IST
Last Updated 10 ಜುಲೈ 2024, 13:23 IST
ಅಕ್ಷರ ಗಾತ್ರ

ನಾಲ್ಕು ದಶಕಗಳ ಹಿಂದೆ ‘ಸಿಂಹಾಸನ’ ಎನ್ನುವ ಚಿತ್ರವೊಂದು ತೆರೆ ಕಂಡಿತ್ತು. ಈಗ ಅದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಸೆಟ್ಟೇರಿದೆ. ಕಿರುತೆರೆ, ಹಿರಿತೆರೆಯಲ್ಲಿ ಸಹಾಯಕ ನಿರ್ದೇಶಕರಾಗಿದ್ದ ಡಿ.ಆರ್.ದಯಾನಂದಸ್ವಾಮಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. 

ಚಾಮರಾಜನಗರ ಮೂಲದ ಚಂದ್ರು ನಾಲ್‌ರೋಡ್ ಮುನೇಶ್ವರ ಪ್ರೊಡಕ್ಷನ್ ಅಡಿಯಲ್ಲಿ ಬಂಡವಾಳ ಹೂಡಿ, ನಾಯಕನಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ರೇಷ್ಮಾ ಚಿತ್ರದ ನಾಯಕಿ.

‘ಪೊಲಿಟಿಕಲ್ ಡ್ರಾಮಾದ ಕುರಿತಾದ ಕಥೆಯಿದೆ. ಸಾಮಾನ್ಯ ವ್ಯಕ್ತಿ ರಾಜಕೀಯ ಪ್ರವೇಶ ಮಾಡಿದರೆ ಯಾವ ರೀತಿ ಕಷ್ಟದಲ್ಲಿ ಸಿಲುಕುತ್ತಾನೆ? ಸವಾಲುಗಳನ್ನು ದಾಟಿ ಹೇಗೆ ಸಾಧನೆ ಮಾಡುತ್ತಾನೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು. ಕಾಲ್ಪನಿಕ ಅಂಶಗಳನ್ನು ಒಳಗೊಂಡಿದ್ದರೂ ನೋಡುಗರಿಗೆ ಕನೆಕ್ಟ್ ಆಗುವಂತ ದೃಶ್ಯಗಳು ಇವೆ. ಐದು ಗೀತೆಗಳಿಗೆ ಅರ್ಜುನ್ ಸ್ವರಾಜ್ ಸಂಗೀತ, ರಣಧೀರ ಛಾಯಾಚಿತ್ರಗ್ರಹಣವಿದೆ’ ಎಂದರು ನಿರ್ದೇಶಕರು.

ಬೆಂಗಳೂರು, ಚನ್ನಪಟ್ಟಣ, ಮೈಸೂರು ಮೊದಲಾದೆಡೆ ಚಿತ್ರೀಕರಣ ನಡೆಸಲು ತಂಡ ಯೋಜನೆ ಹಾಕಿಕೊಂಡಿದೆ. ಪ್ರಕಾಶ್‌ಸಣ್ಣಕ್ಕಿ, ಸಂಜಯ್ ಮುಂತಾದವರು ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT