ನವದೆಹಲಿ: ‘ಎಕ್ಸ್’ ಖಾತೆ ಹ್ಯಾಕ್ ಆಗಿರುವ ಬಗ್ಗೆ ಶನಿವಾರ ಮಾಹಿತಿ ನೀಡಿರುವ ಗಾಯಕಿ ಶ್ರೇಯಾ ಘೋಷಾಲ್ ಅವರು ತಮ್ಮ ಪ್ರೊಫೈಲ್ನಿಂದ ಬರುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡದಂತೆ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಸ್ನೇಹಿತರು ಮತ್ತು ಅಭಿಮಾನಿಗಳಲ್ಲಿ ವಿನಂತಿ. ಫೆಬ್ರುವರಿ 13ರಿಂದ ನನ್ನ ಎಕ್ಸ್ ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ಎಕ್ಸ್ ತಂಡಕ್ಕೆ ಮಾಹಿತಿ ನೀಡಲು ಎಲ್ಲಾ ರೀತಿಯಲ್ಲಿಯೂ ಪ್ರಯತ್ನಿಸಿದ್ದು, ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೆಲವು ಆಟೋಜನರೇಟೆಡ್ ಪ್ರತಿಕ್ರಿಯೆಗಳು ಬಿಟ್ಟರೆ ತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ತಿಳಿಸಿದ್ದಾರೆ.

ಖಾತೆಗೆ ಲಾಗಿನ್ ಆಗಲು ಸಾಧ್ಯವಾಗದ ಕಾರಣ ಡಿಲೀಟ್ ಮಾಡಲು ಆಗುತ್ತಿಲ್ಲ ಎಂದೂ ಹೇಳಿದ್ದಾರೆ.

‘ಹ್ಯಾಕ್ ಆಗಿರುವ ನನ್ನ ಖಾತೆಯಿಂದ ಬರುವ ಯಾವುದೇ ಲಿಂಕ್ಅನ್ನು ಕ್ಲಿಕ್ ಮಾಡುವುದಾಗಲಿ ಅಥವಾ ಸಂದೇಶವನ್ನು ನಂಬುದಾಗಲಿ ಮಾಡಬೇಡಿ. ಅವುಗಳು ದಾರಿತಪ್ಪಿಸುವ ಉದ್ದೇಶವನ್ನು ಹೊಂದಿರುವ ಸಾಧ್ಯತೆಗಳಿವೆ. ಖಾತೆ ಮರುಸ್ಥಾಪಿಸಿರುವ ಬಗ್ಗೆ ವಿಡಿಯೊ ಮೂಲಕ ನಿಮಗೆ ಮಾಹಿತಿ ನೀಡುತ್ತೇನೆ’ ಎಂದಿದ್ದಾರೆ.

ಇದಕ್ಕೂ ಮೊದಲು ನಟಿ ಸ್ವರಾ ಭಾಸ್ಕರ್ ಅವರ ಎಕ್ಸ್ ಖಾತೆ ಹ್ಯಾಕ್ ಆಗಿದ್ದು, ಇದೀಗ ಮರುಸ್ಥಾಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.