ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷ್ಣಾವತಾರ’ ಚಿತ್ರದ ಯುಗಾದಿ ಹಾಡು ಬಿಡುಗಡೆ

Published 12 ಏಪ್ರಿಲ್ 2024, 0:08 IST
Last Updated 12 ಏಪ್ರಿಲ್ 2024, 0:08 IST
ಅಕ್ಷರ ಗಾತ್ರ

ಚಿತ್ರ ಸಾಹಿತಿ, ನಟ, ನಿರ್ದೇಶಕ ನಾಗೇಂದ್ರ ಪ್ರಸಾದ್‌ ಮುಖ್ಯಭೂಮಿಕೆಯಲ್ಲಿರುವ ‘ಕೃಷ್ಣಾವತಾರ’ ಚಿತ್ರದ ಯುಗಾದಿ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ವಿ. ನಾಗೇಂದ್ರಪ್ರಸಾದ್ ಅವರದ್ದೇ ಸಾಹಿತ್ಯವಿರುವ ‘ಯಗಗಳ ಆದಿ ಯುಗಾದಿ’ ಎಂಬ ಯುಗಾದಿ ಮಹತ್ವ ಸಾರುವ ಹಾಡನ್ನು ಮೈಸೂರು ಮಹಾರಾಜರಾದ
ಯದುವೀರ್ ಒಡೆಯರ್ ಅವರು ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. 

ಸಿರಿ ವೈ.ಎಸ್.ಆರ್. ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಮಾಯಾಬಜಾರ್ ಫಿಲ್ಮ್ಸ್‌ ಬ್ಯಾನರ್ ಅಡಿಯಲ್ಲಿ ಗುರುಪ್ರಸಾದ್ ಕೆ. ಬಂಡವಾಳ ಹೂಡಿದ್ದಾರೆ. ಶುಭ ರಕ್ಷಾ, ತ್ರಿವೇಣಿ ರಾಜ್ ಚಿತ್ರದ ನಾಯಕಿಯರು.

ಎಬಿಎಂ ಸಂಗೀತ ಸಂಯೋಜನೆ ಮಾಡಿದ್ದು,‘ಕಹಿಬೇವು ಸಿಹಿಬೆಲ್ಲ ಒಂದಾಗಿ ಸೇರುವ ಸರದಿ’ ಎಂಬ ಸುಮಧುರ ಸಾಹಿತ್ಯದ ಈ ಗೀತೆಗೆ ಅನುರಾಧ ಭಟ್‌ ಧ್ವನಿಯಾಗಿದ್ದಾರೆ. ಈ ಚಿತ್ರಕ್ಕೆ ರಾಜ ಶಿವಶಂಕರ್ ಛಾಯಾಚಿತ್ರಗ್ರಹಣವಿದ್ದು, ವಿಶ್ವನಾಥ್, ಮಾನಸಿ ಸುಧೀರ್, ರಘು ರಾಮನಕೊಪ್ಪ, ಪ್ರಕಾಶ್ ತುಮ್ಮಿನಾಡ್ ಮುಂತಾದವರು ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT