ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪೇಂದ್ರ ನಿರ್ದೇಶನದ ‘UI’ ಫಸ್ಟ್‌ಲುಕ್‌ ಜ.8ಕ್ಕೆ

Published 4 ಜನವರಿ 2024, 9:46 IST
Last Updated 4 ಜನವರಿ 2024, 9:46 IST
ಅಕ್ಷರ ಗಾತ್ರ

ಚಂದನವನದ ‘ರಿಯಲ್‌ ಸ್ಟಾರ್‌’ ಉಪೇಂದ್ರ ತಮ್ಮ ನಿರ್ದೇಶನದ ಹೊಸ ಚಿತ್ರ ‘UI’ಯ ಫಸ್ಟ್‌ಲುಕ್‌ ಅನ್ನು ಜ.8ಕ್ಕೆ ಬಿಡುಗಡೆ ಮಾಡಲಿದ್ದಾರೆ.

ಯಾವ ದೃಶ್ಯಗಳನ್ನೂ ತೋರಿಸದೆ ಕೇವಲ ಧ್ವನಿ ಇರುವ ಚಿತ್ರದ ಟೀಸರ್‌ ಬಿಡುಗಡೆ ಮಾಡಿ, ಅಭಿಮಾನಿಗಳ ಕುತೂಹಲವನ್ನು ಉಪೇಂದ್ರ ಹೆಚ್ಚಿಸಿದ್ದರು. ಇದೀಗ ಫಸ್ಟ್‌ಲುಕ್‌ ಅನ್ನು ಇನ್ಯಾವ ರೀತಿಯಲ್ಲಿ ಪ್ರೇಕ್ಷಕರ ಎದುರಿಗೆ ಇರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ, ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ಐದು ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ. ‘UI’ ಮೂಲಕ ಮತ್ತೊಮ್ಮೆ ನಿರ್ದೇಶನ ಮತ್ತು ನಟನೆಯಲ್ಲಿ ತಮ್ಮ ಕೈಚಳಕ ತೋರಿಸಲು ರಿಯಲ್‌ ಸ್ಟಾರ್‌ ಸಜ್ಜಾಗಿದ್ದಾರೆ. ಲಹರಿ ಫಿಲ್ಮ್ಸ್‌ ಹಾಗೂ ವೀನಸ್‌ ಎಂಟರ್‌ಟೈನರ್ಸ್‌ ಲಾಂಛನದಲ್ಲಿ ಜಿ.ಮನೋಹರನ್ ಹಾಗೂ ಕೆ.ಪಿ.ಶ್ರೀಕಾಂತ್ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ‘ತರ್ಲೆ ನನ್ಮಗ’ನಿಂದ ಹಿಡಿದು ‘ಶ್‌’, ‘ಓಂ’, ‘ಆಪರೇಷನ್‌ ಅಂತ’, ‘ಎ’, ‘ಸ್ವಸ್ತಿಕ್‌’, ‘ಉಪೇಂದ್ರ’, ‘ಸೂಪರ್‌’, ‘ಉಪ್ಪಿ–2’ ಹೀಗೆ ಸಾಲು ಸಾಲು ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದ ಉಪೇಂದ್ರ ಅವರು ಇದೀಗ ಎಂಟು ವರ್ಷಗಳ ನಂತರ ಮತ್ತೆ ನಿರ್ದೇಶಕನಾಗಿ ತೆರೆ ಮೇಲೆ ಬರಲಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT